ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಿಜಿಟಲ್ ಎಕ್ಸರೇ ಯಂತ್ರೋಪಕರಣ ಸೋಲಾರ್ ಕಂಪನಿಯಿಂದ ಹಸ್ತಾಂತರ

ಪಾವಗಡ ತಾಲೂಕಿನ ತಿರುಮಣಿ
ಸೋಲಾರ್ ಕಂಪನಿಯ ಸಿ, ಎಸ್, ಆರ್, ಅನುದಾನದಿಂದ ಪಾವಗಡ ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ 4,20,000 ಬೆಲೆ ಬೇಳುವ ಡಿಜಿಟಲ್ ಎಕ್ಸರೇ ಯಂತ್ರೋಪಕರಣವನ್ನು ಉಚಿತವಾಗಿ ಸೀಡ್ ಎನ್, ಜಿ, ಓ, ಮತ್ತು ಪೋರ್ಟಮ್ ಪಿನ್ ಸೂರ್ಯ ಪ್ರವೇಟ್ ಲಿಮಿಟೆಡ್ ವತಿಯಿಂದ ಉಚಿತವಾಗಿ ನೀಡಲಾಯಿತು.

ಪ್ರತಿಷ್ಠಿತ ಸೋಲಾರ್ ಕಂಪನಿಗಳಲ್ಲಿ ಒಂದು ಆದ ಪೋರ್ಟಮ್ ಕಂಪನಿಯ ಡೆಪ್ಯೂಟಿ ಮೆನೇಜರ್ ಗೋಪಾಲ್ ಕೃಷ್ಣ ಮಾತನಾಡಿ ಪಾವಗಡ ತಾಲೂಕಿನಲ್ಲಿರುವ ಜನತೆಯ ಆರೋಗ್ಯ ಹಿತ ದೃಷ್ಟಿಯಿಂದ ಹಾಗೂ ಬಡ ಜನತೆಯ ಸೇವೆಗೆ ಸೋಲಾರ್ ಕಂಪನಿ ವತಿಯಿಂದ ಅಳಿಲು ಸೇವೆ ಮಾಡುವ ಸೌಭಾಗ್ಯ ನಮಗೆ ಸಿಕ್ಕಿರುವುದು ಪುಣ್ಯದ ಕೆಲಸ ಎಂದು ತಿಳಿಸಿದರು.
ಸೀಡ್ ಎನ್, ಜಿ, ಓ, ವ್ಯವಸ್ಥಾಪಕರಾದ ಅಮಿತ್ ಪಾಂಡೆ ಮಾತನಾಡುತ್ತಾ ಸೋಲಾರ್ ಕಂಪನಿ ಪಾವಗಡಕ್ಕೆ ಬಂದಿರುವುದು ತಾಲೂಕಿನ ಹೆಸರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸಿದೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಸೋಲಾರ್ ಕಂಪನಿಗಳು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.


ಸೀಡ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಪ್ರಿಯಾಂಕಾ, ಎನ್, ಯಂತ್ರೋಪಕರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ನಾನು ಮೂಲತಹ ಇದೆ ತಾಲೂಕಿನಲ್ಲಿ ಜನಸಿ ನಮ್ಮ ತಾಲೂಕಿಗೆ ಏನನ್ನಾದರೂ ಅಳಿಲುಸೇವೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪೋರ್ಟಮ್ ಕಂಪನಿಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ಈ ಯಂತ್ರೋಪಕರಣ ನಮ್ಮ ತಾಲೂಕಿನ ಬಡ ಜನತೆಗೆ ಉಪಯೋಗವಾಗಲಿ ಎಂಬುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, 4,20, 000ದ ಡಿಜಿಟಲ್ ಎಕ್ಸರೇ ಯಂತ್ರವನ್ನು ಸೋಲಾರ್ ಸಿ ಎಸ್ ಆರ್ ಅನುದಾನದಿಂದ ನೀಡಿದ್ದಕ್ಕೆ ಕಂಪನಿಯ ಸಂಸ್ಥಾಪಕ ವ್ಯವಸ್ಥಾಪಕರಿಗೆ ಧನ್ಯವಾದಗಳು ತಿಳಿಸಿದರು.

ಪಾವಗಡ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕಿರಣ್ ರವರು ಸೋಲಾರ್ ಕಂಪನಿಯ ಕೆಲವು ಅನುದಾನವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಆರೋಗ್ಯ ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ತೊಡಗಿಸುತ್ತಿರುವುದು ಹೆಮ್ಮೆಯ ವಿಚಾರ ಹಾಗೂ ವಿಶೇಷವಾಗಿ ಪೋರ್ಟಲ್ ಕಂಪನಿ ಪಾವಗಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕಳಕಳಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೋರ್ಟಮ್ ಕಂಪನಿಯ ಕನ್ಸ್ಟ್ರಕ್ಷನ್ ಮೆನೇಜರ್ ಅಮಿತ್ ಜೈನ್, ಅಮಿತ್ ಪಾಂಡೆ ಪ್ರಾಜೆಕ್ಟ್ ಲೀಡರ್, ಹನುಮಂತರಾಯಪ್ಪ ಎಕ್ಸರೇ ವಿಭಾಗ ಸಾರ್ವಜನಿಕ ಆಸ್ಪತ್ರೆ ಪಾವಗಡ, ಸೋಲಾರ್ ಕಂಪನಿ ಸಿಬ್ಬಂದಿಗಳಾದ ಪ್ರತಾಪ್ ಕುಮಾರ್, ಜಯಂತ್, ಹರೀಶ್ ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!