ಮಧುಗಿರಿ: ಗಡಿ ಭಾಗದಲ್ಲಿ ಮಟ್ಕಾ, ಇಸ್ಪೀಟ್ ದಂಧೆ ಹೆಚ್ಚಳ ಕಠಿಣ ಕ್ರಮ ಕೈಗೊಳ್ಳಲು ಡಿ.ವೈ.ಎಸ್.ಪಿ ವೆಂಕಟೇಶ್ ನಾಯ್ಡುರಿಗೆ ಮನವಿ

ಮಧುಗಿರಿ : ಬೆಸ್ಕಾಂ ನವರು ಯಾವುದೇ ಕಾರಣಕ್ಕೂ ವಿದ್ಯಾರ್ಥಿ ನಿಲಯಗಳಲ್ಲಿ ವಿನಾಕಾರಣ ಪವರ್ ಕಟ್ ಮಾಡುವಂತಿಲ್ಲ ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಾಕಿದು ಮಾಡಿದರು

ಪಟ್ಟಣದ ತಾ.ಪಂ ಸಭಾಂಗಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ವಿದ್ಯಾರ್ಥಿನಿಲಯಗಳಲ್ಲಿ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ನೆಪವೊಡ್ಡಿ ಬೆಸ್ಕಾಂ ಇಲಾಖೆ ಪವರ್ ಕಟ್ ಮಾಡುತ್ತಿದ್ದು,  ಇದರಿಂದ ಹಾಸ್ಟೆಲ್ ನಲ್ಲಿರುವ ಬಹಳಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದಲಿತ ಮುಖಂಡ ಮಹಾರಾಜು ಆರೋಪಿಸಿ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದಾಗ ತೀವ್ರ ಸಮಾಧಾನ ವ್ಯಕ್ತಪಡಿಸಿದ ಉಪವಿಭಾಗಾಧಿಕಾರಿಗಳು ಬಿಲ್ ಪಾವತಿಸಿಲ್ಲ ಎಂಬ ನೆಪವಡ್ಡಿ ಹಾಸ್ಟೆಲ್ ಗಳಲ್ಲಿ ವಿದ್ಯುತ್ ಕಡಿತಗೊಳಿಸಿದರೆ ಹೇಗೆ ಇದರಿಂದ ಹಾಸ್ಟೆಲ್ ನಲ್ಲಿರುವ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವುದಿಲ್ಲವೇ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿ ಮಾಡುವಂತಿಲ್ಲ. ಬಿಲ್ ಬಾಕಿ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಿಲ್ ಬಾಕಿ ವಸೂಲಿ ಮಾಡಿಕೊಳ್ಳಿ ಎಂದು ಸೂಚಿಸಿದರು.

ಇನ್ನು ಹಾಸ್ಟೆಲ್ ಗಳಲ್ಲಿ ಜೂನಿಯರ್ ವಾರ್ಡನ್ಗಳನ್ನು ನೇಮಿಸಿಕೊಂಡಿದ್ದು ಹಿರಿಯ ವಾರ್ಡನ್ ಗಳು ಅವರಿಗೆ ಜವಾಬ್ದಾರಿ ವಹಿಸಿ ಹೊರಟು ಹೋಗುತ್ತಾರೆ ಜೂನಿಯರ್ ವಾರ್ಡನ್ ಗಳಿಗೆ ಮಕ್ಕಳಿಗೆ ಪಾಠ ಮಾಡಲು ಸಹ ಬರುವುದಿಲ್ಲ ಇದರಿಂದ ಮಕ್ಕಳ ಶಿಕ್ಷಣಕ್ಕೆ ಬಹಳಷ್ಟು ತೊಂದರೆ ಆಗುತ್ತಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಎಸ್ ಡಿ ಎ ಎಫ್ ಡಿ ಎ ರವರನ್ನು ಕಚೇರಿ ಕೆಲಸಗಳಿಗೆ ಮಾತ್ರ ನಿಯೋಜಿಸಿಕೊಳ್ಳಬೇಕು ಎಂದು ಆದೇಶವಿದ್ದರೂ ಈ ಆದೇಶವನ್ನು ಗಾಳಿಗೆ ತೋರಿ, ಇವರನ್ನು ಹಾಸ್ಟೆಲ್ ಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದರ ಬಗ್ಗೆಯೂ ಕ್ರಮ ವಹಿಸಿ ಎಂದು ದಲಿತ ಮುಖಂಡ ಮಹಾರಾಜ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದಾಗ ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಉಪ ವಿಭಾಗಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. 

ತಾಲೂಕಿನ ಗಡಿ ಭಾಗಗಳಲ್ಲಿ ಮಟ್ಕಾ ಮತ್ತು ಇಸ್ಪೀಟ್ ದಂಧೆ ಬಹಳಷ್ಟು ಹೆಚ್ಚಾಗಿದ್ದು,  ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ಡಿ.ವೈ.ಎಸ್.ಪಿ ವೆಂಕಟೇಶ್ ನಾಯ್ಡು ರವರಿಗೆ ಸಭೆಯಲ್ಲಿ ಮನವಿ ಮಾಡಿದಾಗ,  ಮಟ್ಕಾ ದಂದೆಯ ಬಗ್ಗೆ ಸಮರ್ಪಕ ಮಾಹಿತಿ ನೀಡಿದಲ್ಲಿ  ಮಟ್ಕಾ ದಂದೆ ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಮಧುಗಿರಿಯ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಉಪ ವಿಭಾಗದ ಬಹುತೇಕ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆಗೆ ನೀಡುತ್ತಿಲ್ಲ ಇದರಿಂದ ಬಡ ರೋಗಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆಂದು ಹೋದರೆ ಒಂದೆರಡು ಗಂಟೆ ಸಮಯ ವ್ಯರ್ಥ ಮಾಡಿ ಇಲ್ಲಿ ಆಗುವುದಿಲ್ಲ ಎಂದು   ಪಟ್ಟಣದ ಖಾಸಗಿ ಆಸ್ಪತ್ರೆಯಾದ ಜೆ.ಎಸ್ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಗಳ ಬೆಲೆ ತೆತ್ತು ಹೆರಿಗೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಬಡ ರೋಗಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಇದರ ಬಗ್ಗೆ ಕ್ರಮ ವಹಿಸಿ ಎಂದು ದಲಿತ ಮುಖಂಡರಾದ ದೊಡ್ಡೇರಿ ಕಣಮಯ್ಯ ಮತ್ತು ಎಂ ವೈ ಶಿವಕುಮಾರ್ ಸಭೆಯಲ್ಲಿ ಆರೋಪಿಸಿದಾಗ, ಇದರ ಬಗ್ಗೆ ಉಪಯೋಗದ ನಾಲ್ಕು ತಾಲೂಕುಗಳನ್ನು ದೂರುಗಳಿದ್ದು,  ವೈದ್ಯರು ಮಾನವೀಯ ದೃಷ್ಟಿಯಿಂದ ಚಿಕಿತ್ಸೆ ನೀಡುವುದನ್ನು ರೂಡಿಸಿಕೊಳ್ಳಬೇಕು.‌ ಬಡ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ಸೂಕ್ತ ಚಿಕಿತ್ಸೆ ನೀಡುವಂತೆ ತಮ್ಮ ಅದೀನದ ವೈದ್ಯರಿಗೆ ಸೂಚಿಸಬೇಕು.  ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾದಂತೆ ಕ್ರಮವಹಿಸಿ ಎಂದು ಮಧುಗಿರಿಯ ಟಿಹೆಚ್ಒ ರಮೇಶ್ ಬಾಬುರವರಿಗೆ ಸೂಚಿಸಿದಾಗ ಶಿರಾ ತಾಲೂಕಿನಲ್ಲೂ ದೂರದಿಂದ ಬರುವ ಬಡ ಹೆಣ್ಣು ಮಕ್ಕಳನ್ನು ರಾತ್ರಿ 8 ಗಂಟೆಯ ನಂತರ ಯಾವುದೇ ಚಿಕಿತ್ಸೆ ನೀಡದೇ ಜಿಲ್ಲೆಗೆ ರವಾನಿಸುತ್ತಾರೆ ಎಂದು ಶಿರಾ ದಲಿತ ಮುಖಂಡರು ಆರೋಪಿಸಿದಾಗ ಟಿಹೆಚ್ ಓ ಪ್ರತಿ ಬಾರಿಯೂ ದಲಿತ ಮುಖಂಡರ ಸಭೆಗೆ ಗೈರು ಹಾಜರಾಗುತ್ತಿದ್ದು, ನೋಟೀಸ್ ನೀಡಿ ಎಂದು ಉಪವಿಭಾಗಾಧಿಕಾರಿಗಳು ಸೂಚಿಸಿದರು.

ಪಾವಗಡ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ರೆಗ್ಯುಲರ್ ಆಗಿ ಇಲ್ಲದೆ ಪ್ರಭಾರಿ ವಹಿಸಿಕೊಂಡ ದಿನದಿಂದ ಸಾಕಷ್ಟು ತೊಂದರೆ ಆಗುತ್ತಿದೆ 

ದಲಿತರಿಗೆ ಸಲ್ಲಬೇಕಾದ ಎಸ್ಸಿಪಿ ಟಿಎಸ್ಪಿ ಯೋಜನೆಯ ಹಣವನ್ನು ರುದ್ರಭೂಮಿಗಳಿಗೆ ಹಾಕಿಕೊಳ್ಳುತ್ತಾರೆ ಆದರೆ ಹೆಣವನ್ನು ದಲಿತರು ತೆಗೆದುಕೊಂಡು ಹೋದರೆ ಅಲ್ಲಿ ಹೂಳಲು ಅವಕಾಶ ನೀಡುವುದಿಲ್ಲ ನಮ್ಮ ಹಣ ಬೇಕು ಆದರೆ ಹೆಣ ಹೂಳಲು ಅವಕಾಶ ಯಾಕಿಲ್ಲ ಎಂಬ ಪ್ರಶ್ನೆ ಸಭೆಯಲ್ಲಿ ಮೂಡಿಬಂದಿತು. 

ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಎಸ್ ಸಿಪಿ ಯೋಜನೆ ಯಡಿ ಅರುವತ್ತು ಲಕ್ಷ ರೂ ಬಿಡುಗಡೆ ಮಾಡಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದಾರೆ ಆದರೆ ಅದರಲ್ಲಿ ಪರಿಶಿಷ್ಟ ಜಾತಿಯವರಿಗೆ 3ಅಂಗಡಿಗಳು ಮಾತ್ರ ಬಂದಿದ್ದು ಉಳಿದಿದ್ದು ಸಾಮಾನ್ಯ ವರ್ಗಕ್ಕೆ ನೀಡಿದ್ದಾರೆ. ಅದು ಪಟ್ಟಣ ಪಂಚಾಯಿತಿಯ ಮೂಲೆಯೊಂದರಲ್ಲಿ ಕಟ್ಟಡ ಕಟ್ಟಿದ್ದು ಇದರಿಂದ ಪರಿಶಿಷ್ಟರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕೊರಟಗೆರೆ ವೆಂಕಟೇಶ್ ಗಮನ ಸೆಳೆದರು 

ಪಾವಗಡದ ವಿಚಾರದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ನಿಮಗೆ ಯೋಗ್ಯತೆ ಇದ್ದರೆ ಮಾಡಿ ಇಲ್ಲವಾದರೆ ಸಭೆಯನ್ನು ಬಹಿಷ್ಕರಿಸ ಬೇಕಾದಿತು ಎಂದು ದಲಿತ ಮುಖಂಡರೊಬ್ಬರು ಹೇಳಿದಾಗ ಉಪವಿಭಾಗಾಧಿಕಾರಿ ನಮ್ಮ ಯೋಗ್ಯತೆ ಬಗ್ಗೆ ಮಾತನಾಡಲೇಬೇಡಿ ಕಳೆದ 5ವರ್ಷದಿಂದ ನೀವೇನು ನಿದ್ದೆ ಮಾಡುತ್ತಿದ್ದೀರಾ ಎಂದು ಹೇಳಿ ದಾಗ ಸಭೆ ಮೌನಕ್ಕೆ ಶರಣಾಯಿತು. 

ಕೆಆರ್ ಐಡಿಎಲ್ ಸಂಸ್ಥೆಯಲ್ಲಿ  ಒಬ್ಬ ಅಧಿಕಾರಿ ಹನುಮಂತರಾಯಪ್ಪ ಎಂಬುವವರು ದಲಿತರೇನು ಕಚೇರಿಯೊಳಕ್ಕೆ ಹೋದರೆ  ನಿಮಗೇನು ಕೆಲಸ ಇಲ್ಲವೇ ಅಲ್ಲ ನಮ್ಮ ಕಚೇರಿ ಸುತ್ತ ಸುತ್ತುತ್ತಿರಾ ಎಂದು ಬೆದರಿಕೆ ಹಾಕುತ್ತಾರೆ.ಅ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಿ ಶಿಕ್ಷೆ ನೀಡಿ ಎಂದು ಒತ್ತಾಯಿಸಿದರು. 

ಪಟ್ಟಣ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ವಾಣಿಜ್ಯ ಅಂಗಡಿ ಮಳಿಗೆಗಳಲ್ಲಿ ಬಹುತೇಕ ಸಾಮಾನ್ಯ ವರ್ಗದವರೆ ಇದ್ದು ಬಾಡಿಗೆಯನ್ನು ಕಟ್ಟುತ್ತಿಲ್ಲ ಪರಭಾರೆ ಮಾಡಿ ಲಕ್ಷಾಂತರ ರೂ ದುಡುಯುತ್ತಿದ್ದಾರೆ. ದಲಿತರು  ವ್ಯಾಪಾರಸ್ಥರ ಆಗಲು ಅವಕಾಶ ನೀಡುತ್ತಿಲ್ಲವೆಂದು ಪಾವಡರ ದಲಿತ ಮುಖಂಡರುಗಳು ಆರೋಪಿಸಿದರು. 

ಯಾವ ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ  ಆ ಗ್ರಾಮಗಳಲ್ಲಿ ಸರಕಾರದಿಂದ ಜಾಗ ಗುರುತಿಸಿ  ಸ್ಮಶಾನಕ್ಕೆ ಸರಕಾರಿ ಜಾಗ ದೊರೆಯದಿದ್ದರೆ ಖಾಸಗಿ ಯವರಿಂದ ಖರೀದಿ ಮಾಡಿ ಸ್ಮಶಾನ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿ ಕಾರಿಗಳು ಸಭೆಯಲ್ಲಿ ತಿಳಿಸಿದರು.

 ಡಿವೈಎಸ್ ಪಿ ಕೆ.ಎಸ್.ವೆಂಕಟೇಶನಾಯ್ದು, ತಹಶೀಲ್ದಾರ್ ಗಳಾದ ಸುರೇಶಾಚಾರ್, ವರದರಾಜು, ಮಮತಾ,ಹಾಗೂ ನಾಯಿದಾ ಜಮ್ ಜಮ್, ಬಡವನಹಳ್ಳಿ ಪಿಐ ಹನುಮಂತರಾಯಪ್ಪ ಸಿಪಿಐಗಳಾದ ಎಂಎಸ್ ಸರ್ದಾರ್ ,ಅಜಯ್ ಸೌರಭ್ ತಾಪಂ ಇಒ ದೊಡ್ಡಸಿದ್ದಪ್ಪ, ಮಧುಗಿರಿ ತಾ ಪಂ ನ ಮಧುಸೂದನ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!