ಗುಬ್ಬಿ : ಕುರಿ ರೊಪ್ಪಕ್ಕೆ ಚಿರತೆ ನುಗ್ಗಿ ಆರು ಕುರಿಗಳನ್ನು ಬಲಿ ಪಡೆದು ಎಂಟು ಕುರಿಗಳನ್ನು ಗಾಯಗೊಳಿಸಿದ ಘಟನೆ ಶುಕ್ರವಾರ ಮುಂಜಾನೆ ತಾಲ್ಲೂಕಿನ ಕಡಬ ಹೋಬಳಿ ವಿ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ರೈತ ರುದ್ರಯ್ಯ ಅವರಿಗೆ ಸಂಬಂಧಿಸಿದ ಕುರಿ ರೊಪ್ಪಕ್ಕೆ ನುಗ್ಗಿದ ಚಿರತೆ ಕ್ಷಣಾರ್ಧದಲ್ಲಿ ಆರು ಕುರಿಗಳ ಕತ್ತು ಸೀಳಿ ರಕ್ತ ಹೀರಿದೆ. ಈ ಸಮಯ ಗಾಯಗೊಂಡ ಎಂಟು ಕುರಿಗಳ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ಸುಮಾರು ಒಂದು ಲಕ್ಷ ರೂಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

ಕಡಬ ಹೋಬಳಿ ಕೆಲ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈಚೆಗೆ ಹೋಬಳಿ ಗಡಿ ಭಾಗದಲ್ಲಿ ನಾಯಿಗಳ ಬೇಟೆ ಆಡಿದ ಘಟನೆ ಸಿಸಿ ಕೆಮರಾದಲ್ಲಿ ಸೇರೆಯಾಗಿತ್ತು. ಚಿರತೆ ಹಾವಳಿ ಕೃಷಿಕರಲ್ಲಿ ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಚಿರತೆ ಉಪಟಳದಿಂದ ತಪ್ಪಿಸಬೇಕು ಗ್ರಾಮಸ್ಥರು ಎಂದು ಆಗ್ರಹಿಸಿದರು. ಸ್ಥಳ ಪರಿಶೀಲನೆ ಸಂಧರ್ಭದಲ್ಲಿ ARFO ಸೋಮಶೇಖರ್, ಅರಣ್ಯ ಇಲಾಖೆಯ ಗಂಗಹನುಮಯ್ಯ ಇದ್ದರು.