ಕಳಪೆ ಗುಣಮಟ್ಟದ ಸಮವಸ್ತ್ರ ವಿತರಣೆ : ಸರ್ಕಾರಿ ಮಕ್ಕಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಸಂಘ ಸಿಡಿಮಿಡಿ

ಗುಬ್ಬಿ: ತಾಲ್ಲೂಕಿನಲ್ಲಿ ಹಲವು ಸರ್ಕಾರಿ ಶಾಲೆಯಲ್ಲಿ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಣೆ ಮಾಡಲಾಗಿದೆ. ತೆಳುವಾದ ಬಟ್ಟೆ ಹೆಣ್ಣು ಮಕ್ಕಳಲ್ಲಿ ತೀರಾ ಮುಜುಗರ ಉಂಟು ಮಾಡಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಲಘುವಾಗಿ ಪ್ರತಿಕ್ರಿಯಿಸಿದೆ. ಕೂಡಲೇ ಕ್ರಮ ವಹಿಸಿ ಗುಣಮಟ್ಟದ ಸಮವಸ್ತ್ರ ನೀಡದಿದ್ದರೆ ಹೋರಾಟ ಮಾಡುವುದಾಗಿ ರೈತ ಸಂಘದ ತಾಲ್ಲೂಕು ಕೆ.ಎನ್. ವೆಂಕಟೇಗೌಡ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬಡ ಮಕ್ಕಳಿಗೆ ಉಚಿತ ಶಿಕ್ಷಣ ಜೊತೆಗೆ ಎಲ್ಲಾ ಸವಲತ್ತು ನೀಡುವ ಭರವಸೆ ನೀಡಿ ಈಗ ಮಕ್ಕಳಲ್ಲಿ ಸಮಾನತೆ ಮೂಡಿಸುವ ಸಮವಸ್ತ್ರ ನೀಡುವಲ್ಲಿ ಅಸಡ್ಡೆ ತೋರಿದೆ ಎಂದು ಕಿಡಿಕಾರಿದರು.

ಕಳಪೆ ಗುಣಮಟ್ಟದ ಸಮವಸ್ತ್ರ ವಿತರಣೆ ನೋಡಿದರೆ ಕಮಿಷನ್ ದಂಧೆಗೆ ಹಿಡಿದ ಕನ್ನಡಿಯಾಗಿದೆ. ಹೊರ ರಾಜ್ಯದ ಏಜೆನ್ಸಿಗೆ ಟೆಂಡರ್ ನೀಡಿ ಕಳಪೆ ಬಟ್ಟೆಗಳನ್ನು ಗ್ರಾಮೀಣ ಭಾಗದ ರೈತಾಪಿ ಮಕ್ಕಳಿಗೆ ಹಂಚಲಾಗಿದೆ. ಕಳಪೆ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ನಡೆದಿರುವುದು ಸರ್ಕಾರಕ್ಕೆ ಅಪಮಾನ. ಕೂಡಲೇ ಅಗತ್ಯ ಕ್ರಮ ವಹಿಸಲು ಆಗ್ರಹಿಸಿದ ಅವರು ಅತಿ ಹೆಚ್ಚು ಮಳೆಯಿಂದ ಬೆಳೆ ನಾಶವಾಗಿದೆ ನೊಂದ ರೈತರ ಕೂಡಲೇ ಪರಿಹಾರ ನೀಡಬೇಕು. ಕಾಳ ಸಂತೆಯಲ್ಲಿ ರಸ ಗೊಬ್ಬರ ಮಾರಾಟದ ಬಗ್ಗೆ ಕ್ರಮ ವಹಿಸಿ ಖಾಸಗಿ ಅಂಗಡಿಗಳ ಮುಂದೆ ಗೊಬ್ಬರ ದರ ಪಟ್ಟಿ ಹಾಕಬೇಕು ಎಂದು ಒತ್ತಾಯಿಸಿ, ಮಂಡ್ಯದಲ್ಲಿ ಇದೇ ತಿಂಗಳು 19 ರಂದು ನಡೆಯುವ ಬೃಹತ್ ರೈತ ಸಮಾವೇಶಕ್ಕೆ ಗುಬ್ಬಿ ತಾಲ್ಲೂಕಿನ ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.

ದಲಿತ ಮುಖಂಡ ನಾಗರಾಜು ಮಾತನಾಡಿ ಸರ್ಕಾರ ಕೀಳು ಮಟ್ಟದಲ್ಲಿ ಬಡ ಮಕ್ಕಳನ್ನು ನಡೆಸಿಕೊಂಡಿದೆ. ತೆಳುವಾದ ಬಟ್ಟೆ ಹೆಣ್ಣು ಮಕ್ಕಳ ಮಾನ ಮರ್ಯಾದೆ ಕಳೆಯುತ್ತದೆ. ಮುಜುಗರ ಉಂಟು ಮಾಡುವ ಬಟ್ಟೆ ವಾಪಸ್ ಪಡೆದು ಗುಣಮಟ್ಟದ ಸಮವಸ್ತ್ರ ನೀಡಲು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಕಳಪೆ ಬಟ್ಟೆ ನಡುವಲಪಾಳ್ಯ ಗ್ರಾಮದ ಶಾಲೆಯಲ್ಲಿ ಕಂಡು ಬಂದಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ರಾಜ್ಯದಿಂದ ಬರುವ ಬಟ್ಟೆ ಎಂದು ನುಳುಚಿ ಕೊಳ್ಳುವ ಉತ್ತರ ನೀಡಿದ್ದಲ್ಲದೆ ಸಮವಸ್ತ್ರಕ್ಕೆ ಮುನ್ನ ಒಳ ಉಡುಪು ಧರಿಸಿ ಬರಲಿ ಅಥವಾ ಲೈನಿಂಗ್ ಕೊಟ್ಟು ಬಟ್ಟೆ ಹೊಲಿಸಿಕೊಂಡು ಬರಲು ಹೇಳಿ ತಮ್ಮ ಬೇಜವಾಬ್ದಾರಿತನ ತೋರಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜು, ಗಂಗರೇವಣ್ಣ, ನರೇಂದ್ರಕುಮಾರ್, ಕೀರ್ತಿ, ನಟರಾಜು ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!