ಸಂಘಗಳು ನಿರಂತರವಾಗಿ ಉಳಿತಾಯದಲ್ಲಿ ತೊಡಗಿಕೊಳ್ಳಬೇಕು: ಕೆ.ಎನ್.ಗುರುದತ್

ಗುಬ್ಬಿ : ಸಂಘಗಳು ನಿರಂತರವಾಗಿ ಉಳಿತಾಯದಲ್ಲಿ ತೊಡಗಿಕೊಳ್ಳಬೇಕು. ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದಾಗ ಮಾತ್ರ ಸಂಘ ಮತ್ತು ಬ್ಯಾಂಕಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ಐಡಿಎಫ್ ಸುಜೀವನ ಒಕ್ಕೂಟ ಅಧ್ಯಕ್ಷ ಕೆ.ಎನ್.ಗುರುದತ್ ತಿಳಿಸಿದರು.
ಪಟ್ಟಣದ ಎಸ್ಎಲ್ಎನ್ ರೈಸ್ ಮಿಲ್ ಆವರಣದಲ್ಲಿ ಐಡಿಎಫ್ ಸುಜೀವನ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಮೌಲ್ಯವರ್ಧನೆ ಮಾಡಿಕೊಳ್ಳಲು ತರಬೇತಿಯನ್ನು ಒಕ್ಕೂಟದಿಂದ ನೀಡಲಾಗುತ್ತದೆ. ಆದ್ದರಿಂದ ಮಹಿಳಾ ಸದಸ್ಯರು ಮತ್ತು ಪುರಷರ ಸಂಘಗಳು ನಮ್ಮ ಸಿಬ್ಬಂದಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು. ವಿದ್ಯಾರ್ಥಿ ಜೀವನ ಅಮೂಲ್ಯ, ಪ್ರತಿಯೊಬ್ಬರಲ್ಲೂ ವಿವಿಧ ರೀತಿಯ ಪ್ರತಿಭೆಗಳಿವೆ. ಅವುಗಳನ್ನು ಅವಕಾಶ ಸಿಕ್ಕಗ ಬಳಸಿಕೊಳ್ಳಬೇಕು ನಿಮ್ಮ ಶ್ರಮದಿಂದಲೇ ನೀವು ಅತ್ಯಂತ ಹೆಚ್ಚು ಅಂಕ ಗಳಿಸಿದ್ದರೂ ಸಹ ಈ ಸಾಧನೆಯ ಹಿಂದೆ ಪಾಲಕರು ಹಾಗೂ ಶಿಕ್ಷಕರ ಮಾರ್ಗದರ್ಶನವು ಮೂಲ ಕಾರಣವಾಗಿದೆ. ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಉತ್ತಮವಾಗಿ ಸಂಘವನ್ನು ನಡೆಸಿಕೊಂಡ ಸಂಘಗಳಿಗೆ ಉತ್ತಮ ಸಂಘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ೨೩ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರದಂತೆ ಪ್ರೋತ್ಸಹಧನ ನೀಡಲಾಯಿತು ಎಂದರು.

ಮೂ.ಲ.ಕೆಂಪೇಗೌಡ ಮಾತನಾಡಿ, ರೈತರು ಸುಸ್ಥಿರ ಕೃಷಿ ಮಾಡಿಕೊಂಡು ಸುಸ್ಥಿರ ಜೀವನ ಸಾಗಿಸಬೇಕು. ತಾಲ್ಲೂಕಿನಲ್ಲಿ ಇರುವ ರೈತ ಉತ್ಪಾದಕರ ಕಂಪನಿಗಳಲ್ಲಿ ವ್ಯವಹಾರ ಮಾಡಿ ಕಂಪನಿಗಳನ್ನು ಲಾಭದಾಯಕವಾಗಿ ಮಾಡುವಲ್ಲಿ ಷೇರುದಾರರ ಕೊಡುಗೆ ಮಹತ್ವದ್ದಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಡಿಎಫ್ ಸುಜೀವನ ಒಕ್ಕೂಟ ಉಪಾಧ್ಯಕ್ಷರು ಹರೀಶ್ ವೈ.ಆರ್. ದತ್ತಿಮಂಡಳಿ ಸದಸ್ಯರಾದ ಪುಟ್ಟಸ್ವಾಮಣ್ಣ, ರೇವಣ್ಣ, ಶಿವಶಂಕರ್, ಸೌಭಾಗ್ಯ, ಕವಿತಾ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕರುಣಾಕರ್, ಸಿಇಒ ಗುರುಪ್ರಸಾದ್, ಚನ್ನಶೆಟ್ಟಿಹಳ್ಳಿ ಯತೀಶ್ಕುಮಾರ್, ಬಾಬು, ಶಿವನಾಗಪ್ಪ, ಗಾಯಿತ್ರಿ, ಗಂಗೇಗೌಡ, ರಂಗಮ್ಮ, ರಂಗನಾಥ, ಕೆಂಪೇಗೌಡ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ.ಆರ್.ನಾಗಲಿಂಗಮೂರ್ತಿ, ಕೃಷಿ ವಿಸ್ತಾರಣಾಧಿಕಾರಿ ಸಿ.ಜಯಶ್ರೀ, ರಾಕೇಶ್ ಮತ್ತಿತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!