ಗ್ರಾಮಗಳ ಅಬಿವೃದ್ದಿಯಾದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ:

ಮಧುಗಿರಿ : ತಾಲೂಕಿನಲ್ಲಿ ಪುರವರ ಹೋಬಳಿ ಅತೀ ದೊಡ್ಡ ಹೋಬಳಿಯಾಗಿದ್ದು, ಹೋಬಳಿಗೆ ಆಂಬ್ಯುಲೆನ್ಸ್ ಸೇವೆಯ ಕೊರತೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರ ಕೊರತೆ, ಶಾಲೆಗೆ ಕಾಂಪೌಂಡ್, ಸರ್ಕಾರಿ ಕಾಲೇಜಿಗೆ ಸ್ಥಳದ ಅಭಾವ, ಅಗ್ರಹಾರ ಗ್ರಾಮದಿಂದ ಹೊಲಗಳಿಗೆ ಹೋಗಲು ದಾರಿಯ ಸಮಸ್ಯೆ ಸೇರಿದಂತೆ ಗ್ರಾಮದ ಅನೇಕ ಸಮಸ್ಯೆಗಳನ್ನು ಪುರವರ ಹೋಬಳಿಯ ಅಗ್ರಹಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಅಂಜನೆಯಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ 

ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಧಿಕಾರಿಗಳ ಮುಂದೆ ತೆರೆದಿಟ್ಟರು.

ಪುರವರ ಹೋಬಳಿಯು ಅತಿ ದೊಡ್ಡ ಹೋಬಳಿಯಾಗಿದ್ದು ಈ ಹೋಬಳಿಯಲ್ಲಿ ಆಂಬುಲೆನ್ಸ್ ಸೇವೆಯೇ ಇಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಸಾಗಿಸಲು ಬಹಳಷ್ಟು ತೊಂದರೆ ಉಂಟಾಗುತ್ತಿದ್ದು ತುರ್ತಾಗಿ ಬಾಲ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಸೇವೆ ಒದಗಿಸಿ ಮತ್ತು ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರ ಕೊರತೆಯಿದ್ದು, ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿ ಗ್ರೂಪ್ ನೌಕರರ ಸೇವೆಯನ್ನು ಒದಗಿಸಿಕೊಡಿ ಮತ್ತು ಬ್ಯಾಲ್ಯ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಈಗ ಮಂಜೂರ್ ಆಗಿರುವ ಸ್ಥಳವು ಅತಿ ಕಡಿಮೆಯಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಆಟೋಪಗಳಲ್ಲಿ ತೊಡಗಿಕೊಳ್ಳಲು ಬಹಳಷ್ಟು ಸಮಸ್ಯೆಯಾಗುತ್ತಿದೆ ಆದ್ದರಿಂದ ಕಾಲೇಜಿಗೆ ಹೊಂದಿಕೊಂಡೆ ಇರುವ ಸರ್ಕಾರಿ ಜಾಗವನ್ನು ಕಾಲೇಜಿಗೆ ಮಂಜೂರು ಮಾಡಿಸಿ ಕೊಡಿ ಎಂದು ಬೆಲ್ಲ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಮನವಿ ಮಾಡಿದಾಗ ಇದರ ಬಗ್ಗೆ ಪರಿಶೀಲಿಸುವುದಾಗಿ ತಹಶೀಲ್ದಾರ್ ತಿಳಿಸಿದರು.   

    ಅಗ್ರಹಾರ ಗ್ರಾಮದಿಂದ ಹೊಲಗಳ ಕಡೆ ಹೋಗುವುದಕ್ಕೆ ಸಮರ್ಪಕ ದಾರಿ ಇಲ್ಲ ಆದ್ದರಿಂದ ದಾರಿಯನ್ನು ಸರ್ವೇ ಮಾಡಿಸಿ ಗ್ರಾಮಸ್ಥರಿಗೆ ಬಿಡಿಸಿ

ಕೊಡಬೇಕೆಂದು ಗ್ರಾಮಸ್ಥರ ಪರವಾಗಿ ಗ್ರಾಮದ ವೆಂಕಟೇಶ್ ಮನವಿ ಮಾಡಿದಾಗ ತಹಶೀಲ್ದಾರ್ ಸಕಾರಾತ್ಮಕವಾಗಿ ಸ್ಪಂದಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುರೇಶಾಚಾರ್ ಮಾತನಾಡಿ ಗ್ರಾಮಗಳ ಅಬಿವೃದ್ದಿಯಾದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದು, ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು ಸ್ಥಳೀಯರ ಸಹಕಾರವಿದ್ದಾಗ ಮಾತ್ರ  

ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. 

ಈಗಾಗಲೇ ಗ್ರಾಮದ ಮನೆ ಮನೆಗೆ ಬೇಟಿ ಮಾಡಲಾಗಿದ್ದು, 

25 ಜನರಿಗೆ ಮಾಶಾಸನ ಸೌಲಭ್ಯ, ಹೊಬಳಿಯಲ್ಲಿ ಬಾರಿ ಮಳೆ ಬಂದು ಮನೆ ಕಳೆದುಕೊಂಡ 24 ಜನರಿಗೆ ತಲಾ 50 ಸಾವಿರ ಚೆಕ್ ವಿತರಣೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಸವಲತ್ತುಗಳ ಬಗ್ಗೆ ಮಾಹಿತಿ ದೊರೆಯಲಿದ್ದು, ಸಾರ್ವಜನಿಕರು ಈ ಸವಲತ್ತುಗಳ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. 

ಈ ಗ್ರಾಮವು ಖ್ಯಾತ ಚಿತ್ರಕಲಾವಿದ ರವಿವರ್ಮರವರ ಜನ್ಮಸ್ಥಳವೆಂಬುದು ಈಗಷ್ಟೇ ತಿಳಿದಿದ್ದು, ಇಂತಹ ಗ್ರಾಮದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಕಲಾವಿದನಿಗೆ ಗೌರವ ಸಮರ್ಪಿಸಿದರು.

ರೇಷ್ಮೇ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀ ನರಸಯ್ಯ ಮಾತನಾಡಿ ಇಂದು 10 ಸಾವಿರದಿಂದ ಒಂದು ಕೋಟಿಯವರೆಗೆ ರೇಷ್ಮೆ ಸೀರೆಯ ಬೆಲೆಯಿದೆ. ರೇಷ್ಮೆ ಸೀರೆ ಶ್ರೀಮಂತರ ದಿರಿಸಾದರೂ ಇದಕ್ಕೆ ಬೇಕಾಗುವ ಕಚ್ಚಾ ಪದಾರ್ಥವನ್ನು ಬೆಳೆಯುವವರು ರೈತರಾಗಿದ್ದು, ಕ್ವಿಂಟಾಲ್ ರೇಷ್ಮೆಗೆ 60 ರಿಂದ ಒಂದು ಲಕ್ಷದವರೆಗೆ ಇದೆ ಬೆಲೆ. ಆದ್ದರಿಂದ ರೈತರು ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯ ಗಳಿಸಬಹುದು. ರೇಷ್ಮೆ ಬೆಳೆಗೆ ಸರ್ಕಾರವೂ ಬಹಳಷ್ಟು ಸಬ್ಸಿಡಿ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.

 ಗ್ರೇಡ್ 2 ತಹಶೀಲ್ದಾರ್ ತಿಪ್ಪೇಸ್ವಾಮಿ, ಟಿ.ಹೆಚ್.ಓ ಡಾ. ರಮೇಶ್ ಬಾಬು, ಬ್ಯಾಲ್ಯ ಗ್ರಾ.ಪಂ ಅಧ್ಯಕ್ಷೆ ಗಂಗರತ್ಮಮ್ಮ ಬೈರಪ್ಪ, ಸದಸ್ಯರಾದ ಯಮುನಾ ವೆಂಕಟೇಶ್, ತರುಣ್, ಯೋಗೀಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ಬಾಬು ರೆಡ್ಡಿ, ಎ. ಡಿ.ಎಲ್.ಆರ್ ರಂಗನಾಥ್, ಉಪ ತಹಶೀಲ್ದಾರ್ ಜಯಲಕ್ಷ್ಮಿ, ತಾ.ಪಂ ಮಾಜಿ ಸದಸ್ಯ ಗೋಪಾಲ್, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಂ, ಎಸಿಡಿಪಿಓ ಮಹೇಶ್, ಪಿಡಿಓ ಕುಮಾರಸ್ವಾಮಿ, ಅಬಕಾರಿ ನಿರೀಕ್ಷಕ ರಾಮಮೂರ್ತಿ, ಸಿ.ಆರ್.ಪಿ ನವೀನ್ ಕುಮಾರ್, ಕಂದಾಯ ತನಿಖಾಧಿಕಾರಿ ಜಯರಾಮಯ್ಯ, ಗ್ರಾಮ ಲೆಕ್ಕಿಗರಾದ ಶ್ರೀನಿವಾಸ್, ಶಿವರಾಮಯ್ಯ, ನಟರಾಜು, ಎಂ.ಜೆ ಶ್ರೀಧರ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!