ಶಿಕ್ಷಕರು ವೃತ್ತಿಯ ಪಾವಿತ್ರ್ಯತೆ ಮತ್ತು ಬದ್ಧತೆಯಿಂದ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು: ವೆಂಕಟರಾಮ ಭಾರತಿ

ತುಮಕುರು ಸೆಪ್ಟಂಬರ 17:- ನಮ್ಮ ನಾಡಿನಲ್ಲಿ ಗುರುವಿಗೆ ಉನ್ನತವಾದ ಸ್ಥಾನವಿದ್ದು ಶಿಕ್ಷಕರು ತಮ್ಮ ವೃತ್ತಿಯ ಪಾವಿತ್ರತೆಯನ್ನು ಅರ್ಥಮಾಡಿಕೊಂಡು ಬದ್ಧತೆಯಿಂದ ಮಕ್ಕಳಿಗೆ ಶಿಕ್ಷಣವನ್ನು ಕಲಿಸಿದರೆ ಮಕ್ಕಳು ಗುರುಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಉತ್ತಮವಾದ ಸ್ಥಾನವನ್ನು ತಲುಪುತ್ತಾರೆ ಎಂದು ಶ್ರೀ ವನಿತಾ ವಿದ್ಯಾಕೇಂದ್ರದ ಕಾರ್ಯದರ್ಶಿಗಳಾದ ವೆಂಕಟರಾಮ ಭಾರತಿ ತಿಳಿಸಿದರು.

ತುಮಕೂರು ಹೊರವಲಯದ ಯಲ್ಲಾಪುರದ ಅಜ್ಜಪನಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀ ವನಿತಾ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು ಅನಾದಿಕಾಲದಿಂದಲೂ ಗುರುವಿಗೆ ಪೂಜ್ಯನೀಯ ಸ್ಥಾನವಿದೆ ಈಗಿನ ಕಾಲದ ಪೋಷಕರು ತಮ್ಮ ಮಕ್ಕಳನ್ನು ನಂಬಿಕೆ ಇಟ್ಟು ಶಿಕ್ಷಕರ ಮೇಲೆ ಸಂಪೂರ್ಣ ಭರವಸೆಯಿಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಪೋಷಕರು ಕೊಡುವ ಹಣಕ್ಕೆ ಆಸೆ ಪಡದೆ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣವನ್ನು ನೀಡಿದಾಗ ಶಿಕ್ಷಕರ ಪಾತ್ರ ಪರಿಪೂರ್ಣವಾಗುತ್ತದೆ ಎಂದು ಅವರು ಈ ವೇಳೆ ತಿಳಿಸಿದರು.

ಶ್ರೀವನಿತಾ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕರಾದ ಸುಜಾತಾ ಅವರು ಮಾತನಾಡುತ್ತಾ ಇಂದಿನ ಶಿಕ್ಷಕರು ಮಕ್ಕಳು ಒಟ್ಟಿಗೆ ಸ್ನೇಹಮಯಿ ಯಾಗಿ ಶಾಲಾ ವಾತವರಣದಲ್ಲಿ ಬೆರೆತಾಗ ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡಿದಂತಾಗುತ್ತದೆ ಗುರುವಿನ ಸ್ಥಾನ ಉಳಿಸಿಕೊಳ್ಳುವುದರ ಜೊತೆಗೆ ಸಮ ಸಮಾಜ ನಿರ್ಮಾಣ ಮಾಡುವ ಕಲಿಗಳನ್ನು ಹುಟ್ಟಿಹಾಕುವ ನಾವುಗಳು ಶ್ರದ್ಧೆಯಿಂದ ಶಿಕ್ಷಣವನ್ನು ಕಲಿಸಬೇಕು ಅದೇ ರೀತಿಯಾಗಿ ಮಕ್ಕಳನ್ನು ಕೂಡ ಸ್ನೇಹಮಯಿ ಯಾಗಿ ಕಂಡರೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮಾಡಬಹುದು ಎಂದು ಅವರು ತಿಳಿಸಿದರು.

ಇದೇ ವೇಳೆ ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸಾಧನೆಗೈದ ಶಿಕ್ಷಕರನ್ನು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವನಿತಾ ವಿದ್ಯಾಕೇಂದ್ರದ ಒಂದರಿಂದ ಎಂಟನೇ ತರಗತಿಯ ಎಲ್ಲಾ ಮುಖ್ಯ ಶಿಕ್ಷಕರು ಸಹಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ವರ್ಗ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾಗಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!