ಕೊರಟಗೆರೆ :- ಪಟ್ಟಣದ ಹನುಮಂತಪುರದ ಪ್ರಿಯದರ್ಶಿನಿ ಕಾಲೇಜ್‌ನಲ್ಲಿ ಹೊರರಾಜ್ಯಗಳಿಂದ ಅಥವಾ ಹೊರದೇಶಗಳಿಂದ ಬಿ ಫಾರ್ಮ್ ಡಿ ಫಾರ್ಮ್ ವಿದ್ಯಾಭ್ಯಾಸಕ್ಕೆಂದು ಸಹಸ್ರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಬರುತ್ತಾರೆ ..
ಈ ಕಾಲೇಜಿನ ವಿದ್ಯಾರ್ಥಿಗಳು ಮೋಜುಮಸ್ತಿಯಲ್ಲಿ ತೊಡಗಿದ್ದಾರೆ ಅದೇ ರೀತಿಯಾಗಿ ನಿನ್ನೆ ಬಿ ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿರುವ ಗೌತಮ್ ಸಿಂಗ್ ತನ್ನ ಸ್ನೇಹಿತರಾದ 12 ಜನರ ಜತೆಯಲ್ಲಿ ಕಾಲೇಜು ಹಿಂಭಾಗದಲ್ಲಿರುವ ಹೊಸಕೆರೆ ಎನ್ನುವ ಕೆರೆಯಲ್ಲಿ ಈಜು ಹೊಡೆಯಲು ಹೋಗುತ್ತಾರೆ ..
ಈಜು ಆಡಲು ಹೋದ 12 ಜನ ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರಿಗಷ್ಟೇ ಈಜು ಬರುತ್ತಿತ್ತು ಎಂದು ಅವರ ಜತೆಯಲ್ಲಿದ್ದ ವಿದ್ಯಾರ್ಥಿಗಳು ತಿಳಿಸಿದ್ದಾರೆ ..
ಈಜು ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ತುಂಬಾ ಆಳಕ್ಕೆ ಹೋಗಿ ಈಜು ಆಡುತ್ತಿರುತ್ತಾರೆ ಅದನ್ನು ಗಮನಿಸಿದ ಉಳಿದ ವಿದ್ಯಾರ್ಥಿಗಳು ಕೂಡ ಮುಂದೆ ಹೋಗಲು ಪ್ರಯತ್ನಿಸಿದರೆ ಅದರಲ್ಲಿ ಗೌತಮ್ ಸಿ ಕೂಡ ಒಬ್ಬ ಮುಂದೆ ಹೋಗಿ ಈಜಲು ಪ್ರೀತಿಸುತ್ತಾನೆ ಈಜು ಬಾರದ ಕಾರಣ ಮುಳುಗಿ ಸಾವನ್ನಪ್ಪಿದ್ದಾನೆ ..
12 ಜನ ವಿದ್ಯಾರ್ಥಿಗಳು ಈಜು ಹಾಡುವಾಗ ಗೌತಮ್ ಸಿ ಕಾಣುವುದಿಲ್ಲ ಆಗ ಹಿಂತಿರುಗಿ ನೋಡಿದಾಗ ಕೇವಲ ಕೈ ಮಾತ್ರ ಕಾಣುತ್ತದೆ ಅಷ್ಟರಲ್ಲಿ ಆತ ಮುಳುಗಿ ಹೋಗುತ್ತಾನೆ ಇದು ಗೌತಮ್ ಸಿಂಗ್ ಜತೆಯಲ್ಲಿದ್ದ ವಿದ್ಯಾರ್ಥಿಗಳು ತಿಳಿಸುವ ಮಾತು …
ಎಂದು ಅಗ್ನಿಶಾಮಕ ದಳ ಹಾಗೂ ಕೊರಟಗೆರೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಯಲ್ಲಿ ಬೋಟ್ ಸಹಾಯದಿಂದ ಮೃತದೇಹದ ಹುಡುಕಾಟದಲ್ಲಿದ್ದಾರೆ
ಮೃತ ಗೌತಮ್ ಸಿಂಗ್ ಪೋಷಕರು ಈಗಾಗಲೇ ಸ್ಥಳದಲ್ಲಿದ್ದಾರೆ ..
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ …
ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ