ಪಾವಗಡ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆಗೆ ಮನವಿ

ಪಾವಗಡ: ಪಟ್ಟಣದಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ದಿನನಿತ್ಯ ಟ್ರಾಫಿಸ್ ಕಿರಿಕಿರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತಿದ್ದು ಕೂಡಲೆ ಅಧಿಕಾರಿಗಳು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಹೆಲ್ಫ್ ಸೊಸೈಟಿ ವತಿಯಿಂದ ಸಿಪಿಐ ಅಜಂii ಸಾರಥಿ ರವರಿಗೆ ಮನವಿ ಸಲ್ಲಿಸಲಾಗಿತು.

ಪಟ್ಟಣದಲ್ಲಿ ಅವೈಜ್ಞಾನಿಕ ರಸ್ತೆ, ಚರಂಡಿ ನಿರ್ಮಾಣ, ಅಂಗಡಿಗಳು, ಕಟ್ಟಡ ನಿರ್ಮಾಗಳಿಂದಾಗಿ ಪಾದಾಚಾರಿಗಳಿಗೆ ಸಂಚರಿಸಲು ಪುಟ್ ಪಾತ್ ಇಲ್ಲದ ಕಾರಣ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳು ಸಂಭವಿಸುತ್ತಿವೆ ಅನೇಕ ಬಾರಿ ಸಂಘ ಸಂಸ್ಥೆಗಳು ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಪಟ್ಟಣದ ಸೂಕ್ತ ಕಡೆಗಳಲ್ಲಿ ರಸ್ತೆ ಉಬ್ಬುಗಳ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ವಾಹನ ಸವಾರರಿಗೆ ನೊಂದಣಿ, ವಿಮೆ ಕುರಿತು ಜಾಗೃತಿ ಮೂಡಿಸಿ ಅನಾವಶ್ಯಕವಾಗಿ ಕಾನೂನುಬಾಹಿರವಾಗಿ ವಾಹನ ಚಾಲನೆ ಮಾಡುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಮಾಡಲಾಗಿತು.

ಹೊಸ ಬಸ್ ನಿಲ್ದಾಣ, ಎಸ್ ಎಸ್ ಕೆ ವೃತ್ತ, ಶಿರಾ ರಸ್ತೆ, ಪೆನುಗೊಂಡ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಿದ್ದು ಸಾರ್ವಜನಿಕರು ಈ ಭಾಗದಲ್ಲಿ ಸಂಚರಿಸಲು ಹರಸಾಹಸಪಡುವಂತಾಗಿದೆ, ಸಂಬಂದಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ಹೆಲ್ಫ್ ಸೊಸೈಟಿ ವತಿಯಿಂದ ಮನವಿ ಸಲ್ಲಿಸಲಾಗಿತು.

ಈ ಸಂದರ್ಭದಲ್ಲಿ ಮಾನಂ ಶಶಿಕಿರಣ್, ಕಾವಲಗೇರಿ ರಾಮಾಂಜಿನಪ್ಪ, ಬೇಕರಿ ನಾಗರಾಜು, ತೇಜು, ರಾಕೇಶ್, ವೆಂಕಟೇಶ್, ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!