ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಭಾಸ್ವಾಧೀನಕ್ಕೆ ಸಂಬಂಧಪಟ್ಟಂತೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಗ್ರಾಮಸ್ಥರ ಧರಣಿ ಸತ್ಯಾಗ್ರಹ ಹಾಗೂ ರೈತ ಬಾಂಧವರ ಉಗ್ರ ಪ್ರತಿಭಟನೆ , ರೈತರ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ಮುರುಗೇಶ್ ನಿರಾಣಿ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಗ್ರಾಮಸ್ಥರಿಂದ ಹಾಗೂ ರೈತ ಮುಖಂಡರಿಂದ ಇಂದು ಸಚಿವ ಮುರಾಗೇಶ್ ನಿರಾಣಿ ವಿರುದ್ಧ ಧರಣಿ ಸತ್ಯಾಗ್ರಹ ಆರಂಭವಾಗಿದೆ.
ವಿಮಾನ ನಿಲ್ದಾಣ ಮಾಡುವ ಸಲುವಾಗಿ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಈಗ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ಶುರುವಾಗಿದೆ. ಹಲಕುರ್ಕಿಯ ದಿಗಂಬರೇಶ್ವರ ಮಠದ ಷಡಕ್ಷರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
“ಮೂರಗೇಶ್ ನಿರಾನಿಯವರೆ ರೈತರ ಭಾಸ್ವಾ ಧೀನ ನಿಲ್ಲಿಸಿ ವಿಮಾನ ನಿಲ್ದಾಣ ಬೇಕಾದರೆ ನಿಮ್ಮ ಮನೆಯ ಹಿಂದೆ ಮಾಡಿಕೊಳ್ಳಿ ” ಎಂಬ ಸ್ಲೋಗನ್ ನೊಂದಿಗೆ ಪ್ರತಿಭಟನೆ ಕೂಗೂ ರೈತರ ಕೂಗು ಇದಾಗಿತ್ತು. ರೈತ ಮುಖಂಡ ಪ್ರಕಾಶ ನಾಯಕ್ ಮಾತಾಡಿ ಆದಿ ಕಾಲದಿಂದಲೂ ಭಾಮಿಯನ್ನೆ ಅವಲಂಬನೆ ಮಾಡಿಕೊಂಡು ಬದುಕುತ್ತಿರುವ ನಮ್ಮ ರೈತರ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಇಲ್ಲಿಗೆ ಕೈ ಬಿಡಬೇಕು ಇಲ್ಲವಾದರೆ ಇದು ರಾಜ್ಯಾದ್ಯಂತ ರೈತರ ಉಗ್ರ ಪ್ರತಿಭಟನೆಗೆ ಗುರಿಯಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿ ರೈತರನ್ನು ಜಾಗೃತಗೊಳಿ ಮಾತನಾಡಿದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ