ಪಾವಗಡ: ಪುರಸಭೆ ನೂತನ ಉಪಾಧ್ಯಕ್ಷರಾಗಿ ಶಶಿಕಲಾ ಬಾಲಾಜಿ ಅವಿರೋಧ ಆಯ್ಕೆ

ಪಾವಗಡ: ಪಾವಗಡ ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಶಶಿಕಲಾ ಬಾಲಾಜಿ ಮಂಘಲೌಆರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದೆ ಪಟ್ಟಣದ ಪುರಸಭೆಯ ಉಪಾದ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾಹ್ನವಿ ವಿಶ್ವನಾಥ್ ರವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅದ್ಯಕ್ಷರಾಗಿ ಆಯ್ಕೆಯಾದರು.

ಒಟ್ಟು ೨೩ ಸದಸ್ಯರಿರುವ ಪುರಸಭೆಯಲ್ಲಿ ಮಂಗಳವಾರ ಉಪಾದ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಶಿಕಲಾ ಬಾಲಾಜಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ವರದರಾಜು ಅವಿರೋಧ ಆಯ್ಕೆ ಎಂದು ಪ್ರಕಟಿಸಿದರು.

ಇದೇ ವೇಳೆ ನೂತನ ಉಪಾದ್ಯಕ್ಷೆ ಶಶಿಕಲಾ ಮಾತನಾಡಿ ಪುರಸಭೆಯ ಎಲ್ಲಾ ವಾರ್ಡ್‌ಗಳಿಗೂ ಭೇಟಿ ನೀಡಿ ಸಿಬ್ಬಂದಿ ಹಾಗೂ ಸರ್ವಸದಸ್ಯರ ಸಹಕಾರ ಪಡೆದು ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಪುರಸಭೆಯ ಅಧ್ಯಕ್ಷ ವೇಲುರಾಜು, ಮುಖ್ಯಾಧಿಕಾರಿ ಬಿ.ಸಿ.ಅರ್ಚನಾ, ಮಾಜಿ ಅದ್ಯಕ್ಷರಾದ ರಾಮಾಂಜಿನಪ್ಪ, ಗಂಗಮ್ಮ, ಜಾಹ್ನವಿ, ಸುಧಾಲಕ್ಮೀ, ಸದಸ್ಯರಾದ ಸುದೇಶ್ ಬಾಬು, ರಾಜೇಶ್, ರವಿ, ಮಹಮ್ಮದ್ ಇಮ್ರಾನ್, ನಾಗಭೂಷಣರೆಡ್ಡಿ, ಸುಬ್ರಮಣ್ಯಂ, ವೆಂಕಟರಮಣಪ್ಪ, ವಿಜಯಕುಮಾರ್, ಸುಜಾತ, ಲಕ್ಷ್ಮೀದೇವಿ, ಮಾಲಿನ್ ತಾಜ್, ಧನಲಕ್ಷ್ಮಿ, ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್, ಮುಖಂಡರಾದ ಶಂಕರ ರೆಡ್ಡಿ, ಪ್ರಮೋದ್ ಕುಮಾರ್, ವಿಶ್ವನಾಥ್, ಕಿರಣ್, ಅವಿನಾಶ್, ಆಲಿ, ಕೋಳಿಬಾಲಾಜಿ, ತಾಲೂಕು ಯಾದವ ಸಂಘದ ಅಧ್ಯಕ್ಷ ನರಸಿಂಹಪ್ಪ ಸೇರಿದಂತೆ ಪುರಸಭೆಯ ಸಿಬ್ಬಂದಿ ಹಾಗೂ ಅನೇಕರು ಉಪಸ್ಥಿತರಿದ್ದು ನೂತನ ಉಪಾದ್ಯಕ್ಷೆ ಶಶಿಕಲಾ ಬಾಲಾಜಿ ರವರನ್ನು ಅಭಿನಂದಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!