ಹಲಕುರ್ಕಿ ಗ್ರಾಮಸ್ಥರ ಎರಡನೇ ದಿನವು ಮುಂದುವರೆದ ಸಚಿವ ಮುರಾಗೇಶ್ ನಿರಾಣಿ ವಿರುದ್ಧ ಧರಣಿ ಸತ್ಯಾಗ್ರಹ

ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಭಾಸ್ವಾಧೀನಕ್ಕೆ ಸಂಬಂಧಪಟ್ಟಂತೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಮುಂದುವರಿದ ಗ್ರಾಮಸ್ಥರ ಧರಣಿ ಸತ್ಯಾಗ್ರಹ ಹಾಗೂ ರೈತ ಬಾಂಧವರ ಉಗ್ರ ಪ್ರತಿಭಟನೆ , ರೈತರ ಬೆಂಬಲಕ್ಕೆ ಆಗಮಿಸಿದ ಬೀಳಗಿ ಮತಕ್ಷೇತ್ರದ ಮಾಜಿ ಶಾಸಕ ಜೆ. ಟಿ.ಪಾಟೀಲ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಗ್ರಾಮಸ್ಥರು ಎರಡನೇ ದಿನವಾದ ಇಂದು ಕೂಡ ಸಚಿವ ಮುರಾಗೇಶ್ ನಿರಾಣಿ ವಿರುದ್ಧ ಧರಣಿ ಸತ್ಯಾಗ್ರಹ ಮುಂದುವರಿದಿದೆ.

ವಿಮಾನ ನಿಲ್ದಾಣ ಮಾಡುವ ಸಲುವಾಗಿ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಈಗ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ಎರಡನೇ ದಿನವಾದ ಇಂದು ಕೂಡ ಉಗ್ರ ಸ್ವರೂಪ ಪಡೆದಿದೆ. ಹಲಕುರ್ಕಿಯ ದಿಗಂಬರೇಶ್ವರ ಮಠದ ಷಡಕ್ಷರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಬೀಳಗಿ ಮತಕ್ಷೇತ್ರದ ಮಾಜಿ ಶಾಸಕ ಜೆ. ಟಿ.ಪಾಟೀಲ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿ ರೈತರ ಬೆಂಬಲಕ್ಕೆ ನಿಂತಿದ್ದಾರೆ ಈ ಭಾಗದಲ್ಲಿ ನೀರಾವರಿ ಮಾಡುವ ಭರವಸೆಯನ್ನು ಕೂಡ ಇದೇ ಸಂದರ್ಭದಲ್ಲಿ ನೀಡಿದರು.

ನಾವು ಪ್ರಾಣವನ್ನಾದರು ಕೊಟ್ಟೇವು ನಮ್ಮ ಜೀವನೋಪಾಯಕ್ಕೆ ಇರುವ ಜಮೀನುಗಳನ್ನು ಬಿಟ್ಟು ಕೊಡುವುದಿಲ್ಲ ಎಂದು ರೈತ ಮುಖಂಡ ಪ್ರಕಾಶ್ ನಾಯ್ಕರ್ ರೈತರ ಪರವಾಗಿ ಸಚಿವ ಮುರಗೇಶ್ ನಿರಾಣಿ ಯವರಿಗೆ ಮಾಧ್ಯಮದ ಮೂಲಕ ಸಂದೇಶ ರವಾನಿಸಿದ್ದಾರೆ.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!