ತುಮಕೂರು:: ದಿನಾಂಕ 29.9.22 ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಅನುದಾನಿತ ಕಾಲೇಜು ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಇದೆ ತಿಂಗಳ 29 ರಂದು ನಡೆಯಲಿರುವ ಶೈಕ್ಷಣಿಕ ಕಾರ್ಯಾಗಾರ ಶಿಕ್ಷಣ ಸಚಿವರ ಸಮ್ಮುಖದಲ್ಲಿ ನಡೆಯಲಿದ್ದು, ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವೈ.ಎ ನಾರಾಯಣ ಸ್ವಾಮಿ, ಚಿದಾನಂದ್ ಗೌಡ, ಶಾಸಕ ಜ್ಯೋತಿ ಗಣೇಶ್, ಹಾಗೂ ಸಚಿವರು ಸಂಸದರು, ಶಾಸಕರುಗಳು ಭಾಗವಹಿಸಲಿದ್ದು ಇದೆ ಸಂದರ್ಭದಲ್ಲಿ ಜಿಲ್ಲೆಯ 85 ಕ್ಕೂ ಹೆಚ್ಚು ನಿವೃತ್ತ ಉಪನ್ಯಾಸಕರುಗಳಿಗೆ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಲಿಂಗದೇವರು ಮಾತನಾಡಿ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳು ತಾರತಮ್ಯ ಇಲ್ಲದೆ ಕಾರ್ಯಾಗಾರದಲ್ಲಿ ಭಾಗವಹಿಸಲು ಮನವಿ ಮಾಡಿದರು.
ಸಭೆಯಲ್ಲಿ ಗೌರವಾಧ್ಯಕ್ಷ ಮುದ್ದಯ್ಯ, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಪುಟ್ಟಸ್ವಾಮಯ್ಯ, ತಿಪ್ಪೆಶ್, ಆರಾಧ್ಯ, ಪರಮೇಶ್ವರ್, ಮಂಜುನಾಥ್, ಬಸವರಾಜು, ಮಲ್ಲಿಕಾರ್ಜುನ್, ಗಂಗಾಧರ್, ಶಿವಣ್ಣ ಇತರರಿದ್ದರು.