ದಿಟ್ಟ ಮಹಿಳೆಯಹೋರಾಟ. ಶಿರಾ ಸಾರ್ವಜನಿಕ ಆಸ್ಪತ್ರೆ ನೀರಿನ ಘಟಕ ಪುನರಾರಂಭ

ಶಿರಾ : ಶಿರಾ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇದ್ದ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹಾಳಾಗಿದ್ದು ,ಪ್ರತಿನಿತ್ಯ ಸಾವಿರಾರು ರೋಗಿಗಳು ಶುದ್ಧ ನೀರಿಗಾಗಿ ಅಂಗಡಿಯ ಬಾಟಲ್ ನೀರಿಗೆ ಅವಲಂಬಿಸುವ ಪರಿಸ್ಥಿತಿ ಉಂಟಾಗಿತ್ತು. ಈ ಘಟಕದ ದುರಸ್ತಿ ಗಾಗಿ ಯಾರೂ ಮುಂದೆ ಬಾರದ ಕಾರಣ ಘಟಕ ಸ್ಥಗಿತಗೊಂಡಿತು. ರಾತ್ರಿ ವೇಳೆ  ಅಂಗಡಿಗಳು ಬಾಗಿಲು ಮುಚ್ಚಿರುವ ಸಮಯದಲ್ಲಿ ನೀರಿಗಾಗಿ ರೋಗಿ ಹಾಗೂ ಅವರ ಕಡೆಯವರ ಗೋಳಂತೂ ಹೇಳತೀರದು. ಈ ಸಮಸ್ಯೆ ಮನಗಂಡ ಸಾಮಾಜಿಕ ಹೋರಾಟಗಾರ್ತಿ ರೇಣುಕಮ್ಮ , ಎಲ್ಲೆಡೆ ಇರುವಂತೆ ಆಸ್ಪತ್ರೆ ಆವರಣದಲ್ಲೂ ಕೂಡ ಕರೆಂಟ್ ಇಲ್ಲದಿದ್ದರೂ ಸಹ ಸಾರ್ವಜನಿಕರಿಗೆ ಕನಿಷ್ಠ ಒಂದು ರೂಪಾಯಿಗೆ ಒಂದು ಲೀಟರ್, ಹಾಗೂ ಎರಡು ರೂಪಾಯಿಗೆ ಎರಡು ಲೀಟರ್ ನೀರು  ದೊರಕಬೇಕು ಎಂದು ಪ್ರತಿನಿತ್ಯ ಹೋರಾಟ ನಡೆಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಹಾಗೂ ಜನ ಪ್ರತಿನಿಧಿಗಳನ್ನು ಸಂಪರ್ಕಿಸಿ ಹಾಳಾಗಿರುವ ಕುಡಿಯುವ ನೀರಿನ ಘಟಕವನ್ನು ಮತ್ತೊಮ್ಮೆ ಸಾರ್ವಜನಿಕರ ಅನುಕೂಲಕ್ಕಾಗಿ ಪುನರ್ ಆರಂಭಿಸಿರುವ ಕೆಲಸ ಸಾರ್ವಜನಿಕರಲ್ಲಿ ಸಂತಸ ಉಂಟು ಮಾಡಿದೆ.

ಸರ್ಕಾರಿ ಆಸ್ಪತ್ರೆ ಹತ್ತಿರ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ಎಂದು ಸುಮಾರು ವರ್ಷದಿಂದ ಪ್ರಯತ್ನ ಪಟ್ಟರೂ ಏನಾದರೂ ಸಬೂಬು ಹೇಳಿ ಕಳಿಸುತ್ತಿದ್ದರು, ಇಲಾಖೆ ಅಧಿಕಾರಿಗಳ ಬೆನ್ನು ಹತ್ತಿ  ಆಗಸ್ಟ್ 23ರಿಂದ ನಿರಂತರ ಹೋರಾಟ ಮಾಡಿ,  ನೀರಿನ ಘಟಕ ಶುಚಿ ಮಾಡಿಸಿ ,ಹೊಸ ಯಂತ್ರೋಪಕರಣಗಳನ್ನು, , ಸ್ಟಾರ್ಟೆರ್ ರಿಪೇರಿ,  ವಿದ್ಯುತ್ ಸಂಪರ್ಕದ ಲೈನ್ ರಿಪೇರಿ,  ನೀರಿನ ತೊಟ್ಟಿ ಸ್ವಚ್ಛಗೊಳಿಸುವುದರ ಮೂಲಕ ಹಲವಾರು ಕೆಲಸಗಳನ್ನು ಪಟ್ಟು ಬಿಡದೆ ಮಾಡಿಸಿ   ಈ ದಿನ ಕಾಯನ್ ಬಾಕ್ಸ್ ಅಳವಡಿಸಿರುವುದರಿಂದ ಕೇವಲ ಒಂದು ಮತ್ತುಎರಡು ರೂಗಳಿಗೆ ಕುಡಿಯುವ ನೀರು ಸಾರ್ವಜನಿಕ ಆಸ್ಪತ್ರೆಯ ಹೋಗಿಗಳಿಗೆ ನೀರು ದೊರಕುತ್ತಿದೆ.

ರೇಣುಕಮ್ಮ 

ಸಾಮಾಜಿಕ ಹೋರಾಟಗಾರ್ತಿ, ಶಿರಾ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!