ಆಧುನಿಕತೆಗೆ ತಕ್ಕಂತೆ ಸಿ.ಎಸ್.ಪುರ ವಿಎಸ್ ಎಸ್ ಎನ್ ಮೇಲ್ದರ್ಜೆಗೆ : ಅಧ್ಯಕ್ಷ ಬಿ.ಎಸ್.ನಾಗರಾಜು

.

ಗುಬ್ಬಿ: ಗ್ರಾಮೀಣ ಭಾಗದಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆಗೆ ಸಿ.ಎಸ್.ಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಮೇಲ್ದರ್ಜೆಗೇರಿಸಿ ರೈತ ಭಾಂದವರಿಗೆ ಸಹಕಾರ ನೀಡಿದೆ ಎಂದು ಸಿ.ಎಸ್.ಪುರ ವಿ ಎಸ್ ಎಸ್ ಎನ್ ಅಧ್ಯಕ್ಷ ಬಿ.ಎಸ್.ನಾಗರಾಜು ತಿಳಿಸಿದರು.

ತಾಲ್ಲೂಕಿನ ಸಿ.ಎಸ್.ಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ಇ-ಸ್ಟಾಂಪಿಂಗ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಭಾಗದಿಂದ ತಾಲ್ಲೂಕು ಕೇಂದ್ರಕ್ಕೆ ಛಾಪಾ ಕಾಗದ ಖರೀದಿ ಮಾಡುತ್ತಿದ್ದ ಬಗ್ಗೆ ತಿಳಿದು ಈ ವ್ಯವಸ್ಥೆ ಮಾಡಲು ಆಲೋಚಿಸಿ ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಯಿತು ಎಂದರು.

ಲಾಭದಲ್ಲಿ ನಡೆಯುವ ಸೊಸೈಟಿಯನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹೆಜ್ಜೆ ಇಡಬೇಕು. ಇದೇ ಅಂಶವನ್ನು ಸಿ.ಎಸ್.ಪುರ ಸಂಘ ಸಾಗುತ್ತಿದೆ. ಮುಂದಿನ ದಿನದಲ್ಲಿ ಅಡಕೆ ಖರೀದಿ ಕೇಂದ್ರ ಆರಂಭಿಸುವ ಆಲೋಚನೆ ನಡೆದಿದೆ ಎಂದರು.

ಸಂಘದ ಸದಸ್ಯರ ಆರ್ಥಿಕ ಸಂಕಷ್ಟ ಸುಧಾರಣೆಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಚಿನ್ನಾಭರಣ ಮೇಲೆ ಸಾಲ ನೀಡುವಲ್ಲಿ ಸಂಘ ಸದ್ಯದಲ್ಲೇ ಕಾರ್ಯಕ್ರಮ ಜಾರಿ ಗೊಳಿಸಲಿದೆ. ಎಲ್ಲಾ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡುವ ಮೂಲಕ ಮಾದರಿ ಸಂಘವಾಗಿ ಗುರುತಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕಚೇರಿಗೆ ಕಂಪ್ಯೂಟರ್ ನ್ನು ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ವಿ ಎಸ್ ಎಸ್ ಎನ್ ಉಪಾಧ್ಯಕ್ಷೆ ಆಶಾ ಭಾನುಪ್ರಕಾಶ್, ನಿರ್ದೇಶಕರಾದ ಗಂಗಾಧರಯ್ಯ ಪಡುಗುಡಿ ಚಂದ್ರಶೇಖರ್, ಗಂಗಾಧರಯ್ಯ, ಈಶ್ವರ್ ಗೌಡ, ರಾಮಾಂಜನಪ್ಪ, ಮಂಜುಳಾ, ವಿಜಯ್ ಕುಮಾರ್, ಶ್ರೀಕಾಂತ, ಯೋಗಾನಂದ, ಗಂಗಾಧರಯ್ಯ, ಮುಖ್ಯ ಕಾರ್ಯದರ್ಶಿ ಗಂಗಾಧರಯ್ಯ ಇತರರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!