ಸಮಬಲದ ಮಧ್ಯೆ ಲಾಟರಿ ಮೂಲಕ ಎಂ.ಎಚ್.ಪಟ್ಟಣ ಗ್ರಾಪಂ ಅಧ್ಯಕ್ಷೆಯಾಗಿ ಎಚ್.ವಿ.ಸುನೀತಾ ಆಯ್ಕೆ

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ. ಎಂ.ಎಚ್.ಪಟ್ಟಣ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಮ ಬಲ ಮತ ಪಡೆದ ಹಿನ್ನಲೆ ಲಾಟರಿ ಮೂಲಕ ನಡೆದ ಆಯ್ಕೆಯಲ್ಲಿ ಎಚ್.ವಿ.ಸುನೀತಾ ಅದೃಷ್ಟ ಆಯ್ಕೆಯಾದರು.

ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಸಾಮಾನ್ಯ ಮಹಿಳೆ ಮೀಸಲಿನ ಅಧ್ಯಕ್ಷ ಗಾದಿಗೆ ಈ ಹಿಂದೆ ಸಣ್ಣತಾಯಮ್ಮ ರಾಜೀನಾಮೆ ನೀಡಿದ ಹಿನ್ನಲೆ ನಡೆದ ಚುನಾವಣೆಯಲ್ಲಿ ದೊಡ್ಡ ನೆಟ್ಟಗುಂಟೆಯ ಎಚ್.ವಿ.ಸುನೀತಾ ಹಾಗೂ ರಾಯವಾರದ ಅರುಣಕುಮಾರಿ ನಾಮಪತ್ರ ಸಲ್ಲಿಸಿದ್ದರು.

ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 20 ಮತಗಳ ಪೈಕಿ ಇಬ್ಬರೂ 10 ಮತಗಳನ್ನು ಪಡೆದು ಸಮ ಬಲ ವ್ಯಕ್ತವಾಗುತ್ತದೆ. ಸಭೆಯ ಒಪ್ಪಿಗೆಯಲ್ಲಿ ಲಾಟರಿ ನಡೆಸಲು ನಿರ್ಧರಿಸಿ ಅಂಗನವಾಡಿ ಮಗುವಿನ ಕೈಯಿಂದ ನಡೆದ ಲಕ್ಕಿ ಡ್ರಾನಲ್ಲಿ ಎಚ್.ವಿ.ಸುನೀತಾ ಅವರಿಗೆ ಅದೃಷ್ಟ ಒಲಿದು ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ಮಾತನಾಡಿದ ಅವರು ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸಿ ಮಾದರಿ ಪಂಚಾಯಿತಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಯೋಗೀಶ್, ಚಂದ್ರಶೇಖರ್, ಶಿವಣ್ಣ, ಬೋರಣ್ಣ, ಜಯಲಕ್ಷ್ಮಮ್ಮ, ಭಾಗ್ಯಮ್ಮ, ಗೀತಾ, ಮಾಜಿ ಅಧ್ಯಕ್ಷ ವೆಂಕಟೇಶ್, ಪಿಡಿಒ ಸಿದ್ದರಾಮಯ್ಯ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!