ಪಾವಗಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಗ್ರಾಮೀಣ ಭಾಗದ ಜನರು ಸ್ವಾವಲಂಭನೆ ಬದುಕು ಕಟ್ಟಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿ ತರಬೇತಿ ನೀಡುತ್ತಿದ್ದು ಹೆಚ್ಚಿನ ಮಹಿಳೆಯರು ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ಯೋಜನಾಧಿಕಾರಿ ನಂಜುಂಡಿ ತಿಳಿಸಿದರು.
ಗುರುವಾರ ಮಂಗಳವಾಡ ಗ್ರಾಮದ ಶ್ರೀ ತಿರುಮಲ ರಾಘವೇಂದ್ರ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಏರ್ಪಡಿಸಿದ್ದ ನಿಡಗಲ್ಲು ಹೋಬಳಿ ಮಟ್ಟದ ಒಕ್ಕೂಟಗಳ ತರಬೇತಿಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನನಾಡಿದರು.
ಗ್ರಾಮೀಣ ಬಾಗದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಭಿಗಳನ್ನಾಗಿಸುವ ಸಲುವಾಗಿ ಸಂಸ್ಥೆ ಹಲವಾರು ವಿಧಾನಗಳನ್ನು ಅನುಸರಿಸಿ ಶ್ರಮಿಸುತ್ತಿದೆ, ಸದಸ್ಯರಿಗೆ ವಿಶೇಷ ಸಾಲ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಷ್ಯವೇತನ, ಕೃಷಿ ಸಂಬಂದಿತ ಹಾಗೂ ಆರೋಗ್ಯ ಸಂಬಂಧಿತ ಯೋಜನೆಗಳ್ನು ರೂಪಸಿ ಶ್ರಮಿಸುತ್ತಿರುವ ಸಂಸ್ಥೆಯೊಂದಿಗೆ ತರಬೇತಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ತಿರುಮಲ ರಾಘವೇಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಂಜುನಾಥ್, ಚಿನ್ಮಯಿ ಸಂಸ್ಥೆಯ ಸತ್ಯಾಲೋಕೇಶ್ ಮಾತನಾಡಿದರು.
ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನಯೆ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಉಷಾರಾಣಿ, ಗ್ರಾಮದ ಮುಖಂಡರಾದ ಪಾಂಡುರಂಗಪ್ಪ, ಸೇವಾಪ್ರತಿನಿಧಿ ವಸಂತ, ರಾಧಮ್ಮ ಸೇರಿದಂತೆ ಇತರರು ಇದ್ದರು.