ಕೊರಟಗೆರೆ: ರೈತನೂರ್ವ ಡೈರಿಗೆ ಹಾಲು ಹಾಕಲು ದ್ವಿಚಕ್ರದಲ್ಲಿ ಹೋಗುತ್ತಿರುವಾಗ ಕ್ಯಾಂಟರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರೈತನ ತಲೆಗೆ ತೀವ್ರತರ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯಸಿರೆಳೆದ ಘಟನೆ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಕೋಳಾಲ ಹೋಬಳಿಯ ತಣ್ಣೇನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದ್ದು, ಎ.ವೆಂಕಟಾಪುರಗ್ರಾಮದ ರಾಜಣ್ಣ(42) ಹಾಲಿನ ಡೈರಿಗೆ ಹಾಲು ಹಾಕಲು ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತ ರಾಜಣ್ಣ ಡೈರಿಗೆ ಹಾಲು ಹಾಕಲು ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಅತೀ ವೇಗವಾಗಿ ಮತ್ತು ಆಜಾಗರೂಕತೆಯಿಂದ ಬಂದು ದ್ವಿಚಕ್ರವಾಹನಕ್ಕೆ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ರಾಜಣ್ಣನ ತಲೆಗೆ ತೀವ್ರತರ ಪೆಟ್ಟಾಗಿ ಹೆಚ್ಚು ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಕೊನೆ ಉಸಿರೆಳೆದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ. ಸುರೇಶ್ ಹಾಗೂ ಪಿಎಸ್ಐ ಮಹಾಲಕ್ಷ್ಮಮ್ಮ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.