ಕೊರಟಗೆರೆ: ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕೊರಟಗೆರೆ: ಸಾಂಸಾರಿಕವಾಗಿ ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ಮನೆಯವರಿಂದ ತಪ್ಪಿಸಿಕೊಂಡು ಓಡಿ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಹೈಡ್ರಾಮಾಡಲು ಹೋಗಿ ಸಾವಿಗೀಡಾದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ತಾಲೂಕು ಬೈಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದ್ದು, ಇದೇ ಗ್ರಾಮದ ಹನುಮಂತ ರಾಯಪ್ಪನ ಮಗ ದೇವರಾಜು (32 ವರ್ಷ) ಸಾವಿಗೀಡಾದ ದುರ್ದೈವಿಯಾಗಿದ್ದಾನೆ.

ಮೃತ ದೇವರಾಜ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇಲ್ಲದೆ, ಗಂಡ ಹೆಂಡತಿಯ ನಡುವೆ ಸಾಮರಸ್ಯ ಕೊರತೆಯಿಂದ ಕ್ಷುಲ್ಲಕ ಕಾರಣಗಳಿಗೂ ಜಗಳವಾಗಿ ದೊಡ್ಡ ವಿಕೋಪಕ್ಕೆ ಹೋಗುತ್ತಿತ್ತು ಎನ್ನಲಾಗಿದ್ದು ಇದೇ ಕಾರಣಕ್ಕೆ ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ದೇವರಾಜ್ ಘಟನೆಗೂ ಮುನ್ನ ಗಂಡ ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಪೋಷಕರು ಹಾಗೂ ಊರಿನವರ ಎದುರಲ್ಲೇ ಅಗ್ಗ ಹಿಡಿದು ಓಡಿ ಹೋಗಿ ಮನೆಯ ಪಕ್ಕದಲ್ಲಿ ಇದ್ದ ಕುರಿ ರೊಪ್ಪದಲ್ಲಿ ನೇಣು ಬಿಗಿದುಕೊಳ್ಳುವ ಹೈಡ್ರಾಮವಾಡಲು ಹೋಗಿ ನೇಣು ಬಿಗಿದುಕೊಂಡಿದ್ದಾನೆ. ಊರಿನವರು ಹಾಗೂ ಮನೆಯವರು ನೇಣು ಕುಣಿಕೆಯಿಂದ ಉಳಿಸಿಕೊಂಡರಾದರೂ ಪ್ರಯೋಜನವಾಗದೆ ಅಷ್ಟೊತ್ತಿಗೆ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಕೆ ಸುರೇಶ್ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!