ದಲಿತರ ಕುಂದು ಕೊರತೆ ಸಭೆಯಲ್ಲಿ ಸಮಸ್ಯೆ ಚರ್ಚೆ : ಸೂಕ್ತ ಕ್ರಮಕ್ಕೆ ತಹಶೀಲ್ದಾರ್ ಬಿ.ಆರತಿ ಭರವಸೆ.

ಗುಬ್ಬಿ: ಸ್ಮಶಾನ ಸೇರಿದಂತೆ ದಲಿತ ಫಲಾನುಭವಿಗಳಿಗೆ ದಾಖಲೆ ಮಾಡಿಕೊಡುವಲ್ಲಿ ವಿಳಂಬ ಅನುಸರಿಸಲಾಗಿದೆ. ಕೂಡಲೇ ದಲಿತರಿಗೆ ತಾಲ್ಲೂಕು ಆಡಳಿತ ಕ್ರಮ ವಹಿಸಿ ಕೆಲಸ ಮಾಡಿಕೊಡುವಂತೆ ದಲಿತ ಮುಖಂಡರು ಒಕ್ಕೊರಲಿನ ಒತ್ತಾಯ ಮಾಡಿದರು.

ಪಟ್ಟಣದ ತಾಲ್ಲೂಕು ಕಚೇರಿ ಕಂದಾಯ ಭವನ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಹಲವು ವಿಚಾರ ಚರ್ಚಿಸಿದ ಮುಖಂಡರು ಈ ಹಿಂದಿನ ಸಭೆಯಲ್ಲಿ ಗಂಭೀರ ಸಮಸ್ಯೆ ಹೇಳಲಾಗಿತ್ತು. ಆದರೆ ಯಾವುದಕ್ಕೂ ಸೂಕ್ತ ಉತ್ತರ ಸಿಗುತ್ತಿಲ್ಲ ಎಂದರು.

ಸ್ಮಶಾನ ನಿರ್ಮಾಣಕ್ಕೆ ವಿಳಂಬ ಮಾಡದೆ ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನವನ್ನು ವ್ಯವಸ್ಥೆ ಮಾಡಬೇಕು. ತಾಲ್ಲೂಕಿನ 340 ಮುಜರಾಯಿ ದೇವಾಲಯದಲ್ಲಿ ಮುಕ್ತ ಪ್ರವೇಶಕ್ಕೆ ಅನುವು ಮಾಡುವುದು ಜೊತೆಗೆ ಸರ್ಕಾರದಿಂದ ಬರುವ ಎಲ್ಲಾ ಸವಲತ್ತು ಅರ್ಹ ದಲಿತರಿಗೆ ತಲುಪಿಸಲು ಆಗ್ರಹಿಸಿ, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಕೊಡುವ ಲಾಪ್ ಟಾಪ್ ಕೂಡಲೇ ವಿತರಿಸಿ ದಲಿತ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಲು ಒತ್ತಾಯಿಸಲಾಯಿತು.

ಪಟ್ಟಣದಲ್ಲಿ ನಿರ್ಮಾಣವಾದ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಬಣ್ಣದ ವ್ಯವಸ್ಥೆ ಮಾಡುವಲ್ಲಿ ಪಟ್ಟಣ ಪಂಚಾಯಿತಿ ವಿಳಂಬ ಮಾಡಿದೆ. ಕೂಡಲೇ ಕ್ರಮ ವಹಿಸಬೇಕು. ಹಾಗೆಯೇ ಬಾಬು ಜಗಜೀವನರಾಮ್ ಭವನಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸಿ ನಂತರ ಉದ್ಘಾಟನೆ ಮಾಡಲು ಮುಖಂಡರು ಒತ್ತಾಯಿಸಿದರು.

ಹಲವು ವಿಚಾರಗಳ ಚರ್ಚೆಯ ನಂತರ ಕೆಲ ಸಮಸ್ಯೆಗಳಿಗೆ ಉತ್ತರ ಒದಗಿಸಲಾಯಿತು.

ಸಭೆಯಲ್ಲಿ ಬಿ ಇ ಓ ಸೋಮಶೇಖರ್, ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿಂದುಮಾಧವ, ಸಿಪಿಐ ನದಾಫ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!