ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ವೈಜ್ಞಾನಿಕ ಯೋಜನಾ ವರದಿ ಸಿದ್ಧತೆ : ತಾಪಂ ಇಓ ಎಸ್.ಶಿವಪ್ರಕಾಶ್

ಗುಬ್ಬಿ: ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆಯೋಜಿಸಿದ್ದ ಜಲ ಸಂಜೀವಿನಿ ತಾಲ್ಲೂಕು ಮಟ್ಟದ ತರಬೇತಿಯನ್ನು ತಾಪಂ ಇಓ ಎಸ್.ಶಿವಪ್ರಕಾಶ್ ಉದ್ಘಾಟಿಸಿದರು.

ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅನುಷ್ಟಾನಾ ಅಧಿಕಾರಿ ಮತ್ತು ತಾಂತ್ರಿಕ ಸಿಬ್ಬಂದಿ, ನರೇಗಾ ಸಿಬ್ಬಂದಿ, ಬಿ.ಎಫ್.ಟಿ, ಜಿ.ಕೆ.ಎಂ. ರವರಿಗೆ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ GIS ಆಧಾರಿತ ಕ್ರಿಯಾ ಯೋಜನೆ ಬಗ್ಗೆ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡು ವೈಜ್ಞಾನಿಕ ರೀತಿಯಲ್ಲಿ ನರೇಗಾ ಯೋಜನೆಯನ್ನು ಅನುಷ್ಟಾನಗೊಳಿಸಲು ಎಲ್ಲಾ ಅಧಿಕಾರಿ ತಂತ್ರಜ್ಞರಿಗೆ ಕರೆ ನೀಡಿದರು.

ಮಧುಗಿರಿ ತಾಪಂ ಸಹಾಯಕ ನಿರ್ದೇಶಕ ಗುರುಮೂರ್ತಿ ಮಾತನಾಡಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಘನ ಸರ್ಕಾರಗಳು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅತಿ ಹೆಚ್ಚು ಅನುದಾನಗಳನ್ನು ಉಪಯೋಗಿಸಿಕೊಳ್ಳಲು ಅವಕಾಶಗಳನ್ನು ನೀಡಲಾಗುತ್ತಿದೆ. ಆದ್ದರಿಂದ ನಾವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಟಾನಗೊಳಿಸುವ ಮಣ್ಣು ಮತ್ತು ನೀರು ಮತ್ತು ಅರಣ್ಯ ಸಂರಕ್ಷಣೆಯ ಕಾಮಗಾರಿಗಳನ್ನು ವೈಜ್ಞಾನಿಕವಾದ ಪದ್ದತಿ ಮತ್ತು ಪ್ರಕ್ರಿಯೆಯನ್ನು ಜಿಐಎಸ್ ,ಕೆಜಿಐಎಸ್, ತಂತ್ರಾಂಶದ ಮೂಲಕ ಯೋಜನೆ ರೂಪಿಸುವುದು, ಗೋಮಾಳ ಪ್ರದೇಶ ಅಭಿವೃದ್ದಿಪಡಿಸುವುದು ಸೇರಿ ಕರಡು ಯೋಜನಾ ತಯಾರಿಕೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಪಾತ್ರದಲ್ಲಿ ಸನ್ನದ್ದರಾಗಬೇಕೆಂದು ತಿಳಿಸಿದರು.

ಜಿಲ್ಲಾ ಸಂಯೋಜಕರಾದ ಸಂದೇಶ್ ರವರು ಜಲ ಆಯವ್ಯಯ ಆಧರಿಸಿ ದಿಬ್ಬದಿಂದ ಕಣಿವೆಯವರೆಗೆ ನೈಸರ್ಗಿಕ ಸಂಪನ್ಮೂಲಗಳ ವಿವಿಧ ಉಪಚಾರ ಕ್ರಮಗಳ ಜಿ ಐ ಎಸ್ ತಂತ್ರಾಂಶದ ಬಗ್ಗೆ ತಿಳಿಸಿದರು.

ವೇಣುಗೋಪಾಲ್ ಕೃಷಿ ಅಧಿಕಾರಿ/ತಾಂತ್ರಿಕ ಅಧಿಕಾರಿ ಪಾವಗಡ ತಾಲ್ಲೂಕು ರವರು ಜಲ ಸಂಜೀವಿನಿ ಯೋಜನಾ ಪ್ರಕ್ರಿಯೆಗಳಲ್ಲಿ ಜಲಾನಯನ ಪ್ರದೇಶ, ಕಾಮಗಾರಿ ಮತ್ತು ಅನುಷ್ಟಾನದ ಬಗ್ಗೆ ನಕ್ಷೆಗಳ ಮೂಲಕ ತರಬೇತಿ ನೀಡಿದರು.

ಎಫ್ಇಎಸ್ ಸಂಸ್ಥೆ ವತಿಯಿಂದ ಜಿಲ್ಲಾ ಸಂಯೋಜಕರಾದ ಸೋಮಕುಮಾರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೇಣುಗೋಪಾಲ್, ಜಿಲ್ಲಾ ಸಂಯೋಜಕ ಸಂದೇಶ್, ಎಫ್.ಇ.ಎಸ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಸೋಮಕುಮಾರ್ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!