ಕೊಲೆಗೆ.ಶಾಸಕರ ತಮ್ಮನ ಕುಮ್ಮಕ್ಕು : ಕೆ ಎನ್ ರಾಜಣ್ಣ

ಮಧುಗಿರಿ : ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಗಣೇಶ ದೇವಸ್ಥಾನದ ನಿವೇಶನದ ವಿಚಾರವಾಗಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೆ ಮಾರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲವೆಂದು ಗ್ರಾಮಸ್ಥರು ಮತ್ತು ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಮಿಡಿಗೇಶಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು

ಗುರುವಾರ ರಾತ್ರಿ ಕೊಲೆ ನಡೆಯುವುದಕ್ಕೂ ಮುಂಚೆ ಐದು ಜನ ಆರೋಪಿಗಳು ಮಿಡಿಗೇಶಿ ಗ್ರಾಮದ ಅಂಗಡಿಯೊಂದರ ಬಳಿ ಸಭೆ ನಡೆಸಿ ಕೊಲೆ ಮಾಡಲು ತೀರ್ಮಾನಿಸಿದ ಆರೋಪಿಗಳು ಊಟ ಮುಗಿಸಿ ಮನೆಯ ಮುಂದೆ ಓಡಾಡುತ್ತಿದ್ದ ನನ್ನ ಪತ್ನಿ ಶಿಲ್ಪ ಮತ್ತು ಸಂಬಂಧಿಕರಾದ ರಾಮಾಂಜನೇಯನವರ ಮೇಲೆ ಜೆಡಿಎಸ್ ಮುಖಂಡನಾದ ಶ್ರೀಧರ ಗುಪ್ತ ಎಂಬುವವನು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದು, ಬಿಡಿಸಿಕೊಳ್ಳಲು ಹೋದ ಮಲ್ಲಿಕಾರ್ಜುನಯ್ಯ ನವರಿಗೂ ಚಾಕುವಿನಿಂದ ಇರಿದು ಗಂಭಿರವಾಗಿ ಗಾಯಗೊಳಿಸಿದ್ದು, ಈ ಕೊಲೆಗೆ ಗ್ರಾಮದ ಜೆಡಿಎಸ್ ಮುಖಂಡರಾದ ಗ್ರಾ.ಪಂ ಉಪಾಧ್ಯಕ್ಷ ಸುರೇಶ್, ರಾಮಾಂಜನೇಯ, ರವಿ ಮತ್ತು ಮಂಜುನಾಥ ಈ ನಾಲ್ಕು ಮಂದಿ ಕುಮ್ಮಕ್ಕು ನೀಡಿದ್ದು, ನಂತರ ನಮಗೂ ಮುಂಚೆಯೇ ಈ ಐವರೂ ಚಿಕಿತ್ಸೆಯ ನೆಪದಲ್ಲಿ ಮಿಡಿಗೇಶಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದು, ನಾವು ಆಸ್ಪತ್ರೆಗೆ ಚಿಕಿತ್ಸೆಗೆ ಹೋದರೆ ನಮ್ಮನ್ನು ಒಳಗೆ ಬಿಡದೆ ಸ್ಥಳೀಯ ಪೊಲೀಸರು ಅವರಿಗೆ ರಕ್ಷಣೆ ನೀಡಿದ್ದು, ನಂತರ ಆಸ್ಪತ್ರೆಯಲ್ಲಿದ್ದ ಆರೋಪಿಗಳನ್ನು ಗ್ರಾಮಸ್ಥರೆಲ್ಲರೂ ಬೀಗ ಹಾಕಿ ಪೊಲೀಸರ ವಶಕ್ಕೆ ಒಪ್ಪಿಸಿ, ಶಿಲ್ಪ ಮತ್ತು ರಾಮಾಂಜಿನೇಯರವರನ್ನು ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಇವರು ಮೃತಪಟ್ಟಿದ್ದಾರೆ. ಪೊಲೀಸರು ಕೇವಲ ಶ್ರೀಧರ ಗುಪ್ತ ನ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಉಳಿದ ನಾಲ್ಕು ಆರೋಪಿಗಳನ್ನು ಬಂಧಿಸಿ ಬಿಡುಗಡೆಗೊಳಿಸಿದ್ದು, ಈ ನಾಲ್ಕು ಜನರನ್ನು ಬಂಧಿಸುವವರೆಗೂ ಮಾರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ. ಎಂದು ಮೃತರ ಸಂಬಂದಿಕರಾದ ತಿಪ್ಪೇಸ್ವಾಮಿ, ಶ್ರೀದೇವಿ, ವಿಜಯಮ್ಮ, ಮಾಲಾ ಸೇರಿದಂತೆ ಸಂಬಂದಿಕರು ಮತ್ತು ಗ್ರಾಮಸ್ಥರು ಸಾರ್ವಜನಿಕ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.  

..ಕೊಲೆಗೆ.ಶಾಸಕರ ತಮ್ಮನ ಕುಮ್ಮಕ್ಕು : ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮಾತನಾಡಿದ ಅವರು ತಾಲೂಕಿನ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇದೊಂದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆಯಾಗಿದ್ದು, ಈ ಕೃತ್ಯದಲ್ಲಿ ತೊಂದರೆಗೊಳಗಾಗಿ ಸಾವನ್ನಪ್ಪಿರುವ ದಲಿತ ಮತ್ತು ಹಿಂದುಳಿದ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಲು ನಾವೆಲ್ಲ ಹೋರಾಟ ಮಾಡಬೇಕು. ಪೋಲೀಸರು ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕೇಸು ದಾಖಲಿಸಿ, ಆರೋಪಿಗಳಿಗೆ ಯಾವುದೇ ಬಲಾಡ್ಯರ ಬೆಂಬಲವಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ ಕುಟುಂಬದವರಿಗೆ ಮತ್ತು ನಾಗರಿಕ ಸಮಾಜಕ್ಕೆ ಪೊಲೀಸರು ನ್ಯಾಯಾ ಒದಗಿಸಬೇಕು. ಪೊಲೀಸರು ಸಹ ಕೊಲೆ ಪ್ರಕರಣವನ್ನು ನ್ಯಾಯಯುತವಾಗಿ ತನಿಖೆ ನಡೆಸುವ ಭರವಸೆ ನೀಡಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರ ಬರುವ ಭರವಸೆ ಇದೆ. ಈ ಕೃತ್ಯದಲ್ಲಿ ಸ್ಥಳೀಯ ಶಾಸಕರ ಕೈವಾಡ ಇದ್ದಂತೆ ಕಂಡು ಬರುತ್ತಿಲ್ಲ. ಆದರೆ ಅವರ ತಮ್ಮನಾದ ಬೆಂಗಳೂರಿನಲ್ಲಿ ಅಧಿಕಾರಿಯಾಗಿರುವ ನಿಷ್ಪಾತಕ ಪಾತರಾಜು ಎಂಬಾತನ ಕೈವಾಡವಿದ್ದು, ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಾನೆ. ಪೋಲೀಸರು ತನಿಖೆಯ ಸಂದರ್ಭದಲ್ಲಿ ಕೊಲೆ ಆರೋಪಿಗಳ ಮತ್ತು ಅಧಿಕಾರಿ ಪಾತರಾಜು ಎಂಬಾತನ 10 ದಿನಗಳ ಹಿಂದಿನ ದೂರವಾಣಿ ಕರೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ ಅವರು ನೊಂದ ಕುಟುಂಬಕ್ಕೆ ಶೀಘ್ರವಾಗಿ ನ್ಯಾಯ ಒದಗಿಸದಿದ್ದಲ್ಲಿ 25 ಸಾವಿರ ಜನರೊಂದಿಗೆ ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. 

ಪ್ರತಿಭಟನೆ ಸ್ಥಳದಲ್ಲಿ ಎಎಸ್ಪಿ ಉದೇಶ್, ಡಿ.ವೈಎಸ್ಪಿ ಕೆ.ಎಸ್. ವೆಂಕಟೇಶ್ ನಾಯ್ಡು, ಪಿಎಸ್ಐ ವಿಜಯಕುಮಾರ್, ಜಿ.ಪಂ ಮಾಜಿ ಸದಸ್ಯರಾದ ಜಿ.ಜೆ. ರಾಜಣ್ಣ, ಶಾಂತಲಾ ರಾಜಣ್ಣ, ಮಿಡಿಗೇಶಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಎಸ್ ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ಮುಖಂಡರಾದ ಎಸ್.ಎನ್. ರಾಜು ಇತರರಿದ್ದರು. 

ಏನಿದು ಪ್ರಕರಣ : ತಾಲೂಕಿನ ಮಿಡಿಗೇಶಿ ಗ್ರಾಮದ ಗಣಪತಿ ದೇವಸ್ಥಾನ ಜಾಗದ ವಿಚಾರವಾಗಿದಲ್ಲಿ ಮಿಡಿಗೇಶಿ ಗ್ರಾಮದ ಶ್ರೀಧರ್ ಗುಪ್ತ ಎಂಬಾತ ದೇವಸ್ಥಾನದ ಜಾಗ ಕಬಳಿಸಲು ಯತ್ನಿಸಿದ್ದ ಎನ್ನಲಾಗಿದೆ. ಈ ಜಾಗ ಉಳಿಸಿಕೊಳ್ಳಲು ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ನ್ಯಾಯಾಲಯದಲ್ಲಿ ತೀರ್ಪು ಗ್ರಾಮಸ್ಥರ ಪರವಾಗಿ ಬಂದಿದೆ. ರಾಮಾಂಜನಯ್ಯ ಹಾಗೂ ಶಿಲ್ಪಾ ದೇವಸ್ಥಾನದ ಜಾಗ ಉಳಿಸಿಕೊಳ್ಳಲು ನ್ಯಾಯಲದ ಮೂಲಕ ಹೋರಾಟ ಮಾಡುತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ರಾಮಾಂಜನಯ್ಯ ಹಾಗೂ ಶಿಲ್ಪಾ ಸೇರಿ ಇತರರ ವಿರುದ್ಧ ದ್ವೇಷಕಾರಿದ್ದ ಶ್ರೀಧರ್ ಗುಪ್ತ ರಸ್ತೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ನುಗ್ಗಿ ಶ್ರೀಧರ್ ಗುಪ್ತ ಹಾಗೂ ಸಹಚರರಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 

ಕೊಲೆಯಲ್ಲಿ ರಾಮಾಂಜನಯ್ಯ (48), ಶಿಲ್ಪಾ (38), ಮೃತಪಟ್ಟಿದ್ದರೆ ಮಲ್ಲಿಕಾರ್ಜುನಯ್ಯ (42) ಗಂಭೀರ ಗಾಯಗೊಂಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ನಂತರ ಸ್ಥಳಕ್ಕೆ ಗುರುವಾರ ರಾತ್ರಿಯೆ ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 5 ಜನರ ವಿರುದ್ದ ಪ್ರಕರಣ ದಾಖಲಾಗಿದೆ.  

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!