ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ : ಪ್ರಯಾಣಿಕರು

ಕುಣಿಗಲ್ : ಮಕ್ಕಳು ಮಧುವೆಯಾಗಲಿಲ್ಲ ಎಂದು ಬೇಸತ್ತ ಮಹಿಳೆಯೋರ್ವಳು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯಗೆ ಯತ್ನಿಸಿದ ಮಹಿಳೆಯನ್ನು ಪ್ರಯಾಣಿಕರು ಹಾಗೂ ಆಟೋ ರಿಕ್ಷ ಚಾಲಕರು ರಕ್ಷಿಸಿದ ಘಟನೆ ಕುಣಿಗಲ್ ರೈಲ್ವೆ ಸ್ಟೇಷನ್ ಬಳಿ ಶುಕ್ರವಾರ ನಡೆದಿದೆ.

ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ಮಗಳೂರು ಗ್ರಾಮದ ರಾಧ (52) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಘಟನೆ ವಿವರ : ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಕಾರವಾರಕ್ಕೆ ತೆರಳುತ್ತಿದ್ದ ಪಂಚಗಂಗಾ ಎಕ್ಸ್‌ಪ್ರೆಸ್ ರಾತ್ರಿ 8 ಗಂಟೆ 11 ನಿಮಿಷಕ್ಕೆ ಕುಣಿಗಲ್ ರೈಲ್ವೆ ನಿಲ್ದಾಣಕ್ಕೆ ಬಂದು ನಿಂತಿತ್ತು, ಇದರ ಸಮೀಪದಲ್ಲೇ ಮಹಿಳೆ ರಾಧ ರೈಲ್ವೆ ಹಳಿ ಮೇಲೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಮಲಗಿದ್ದರು, ಪಂಚಗಂಗಾ ರೈಲಿನಿಂದ ಬಂದ ಮಹಿಳೆರ್ಯೋಳು ರೈಲ್ವೆ ಹಳಿಗೆ ತಲೆಕೊಟ್ಟು ಮಲಗಿದ್ದ ಮಹಿಳೆಯನ್ನು ನೋಡಿ ಅಲ್ಲೇ ಪಕ್ಕದಲ್ಲೇ ಇದ್ದ ಆಟೋ ಚಾಲಕ ರವಿ ಅವನ್ನು ಕರೆದು ಟ್ರ್ಯಾಕ್ ಮೇಲೆ ಮಲಗಿದ್ದ ಮಹಿಳೆಯನ್ನು ಪ್ಲಾಟ್ ಫಾಂಗೆ ಕರೆ ತಂದರು, ಏಕೆ ಇಲ್ಲಿ ಮಲಗಿದ್ದೀಯ ಎಂದು ವಿಚಾರಿಸಲಾಗಿ ನನ್ನ ಮಕ್ಕಳು ಮಧುವೆ ಆಗಲಿಲ್ಲ ಹಾಗಾಗಿ ರೈಲಿಗೆ ತಲೆಕೊಟ್ಟು ಸಾಯಲು ಬಂದಿದ್ದೇನೆ ಎಂದು ಆ ಮಹಿಳೆ ತಿಳಿಸಿದಳು ಬಳಿಕ ಮಹಿಳೆಯನ್ನು ರೈಲ್ವೆ ಪೊಲೀಸ್ ಸುರೇಶ್ ಅವರ ವಶಕ್ಕೆ ಒಪ್ಪಿಸಿದರು.

ತಲೆಕೆಟ್ಟಿತು :  ರೈಲ್ವೆ ಪೊಲೀಸ್ ಸುರೇಶ್ ಅವರು ಮಹಿಳೆ ಅವರ ಪತಿ ಮಾಯಣ್ಣ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಬಂದು ಕರೆದುಕೊಂಡು ಹೋಗಿ ಎಂದು ತಿಳಿಸಿದರು, ಅವಳ ತಲೆ ಕೆಟ್ಟಿದೆ, 20 -30 ಸಾವಿರ ಖರ್ಚು ಮಾಡಿದ್ದೇನೆ ಇವತ್ತು ನ್ಯಾಯಾಲಯದಲ್ಲಿ ಜಮೀನು ಸಂಬಂಧ ಕೇಸ್ ಇದ್ದ ಕಾರಣ ಕೋರ್ಟ್‌ಗೆ ಹೋಗಿದ್ದೇ ನಾನು ಇಲ್ಲದ ಸಮಯದಲ್ಲಿ ಅವಳು ಊರಿನಿಂದ ಕುಣಿಗಲ್‌ಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಾಳೆ ಅಲ್ಲೇ ಇರಿಸಿಕೊಳ್ಳಿ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಪತಿ ಮಾಯಣ್ಣ ತಿಳಿಸಿದರು,    

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!