ಹುಳಿಯಾರು: ಪಟ್ಟಣದ ಬಸ್ ನಿಲ್ದಾಣದ ಪುಟ್ ಪಾತ್ ಸಣ್ಣಪುಟ್ಟ ಅಂಗಡಿಗಳ ತೆರವಿಗೆ ಶುಕ್ರವಾರದಂದು ಹುಳಿಯಾರು ಪಟ್ಟಣ ಪಂಚಾಯಿತಿ ಆಡಳಿತ ಮುಂದಾಗಿದ್ದು ವ್ಯಾಪಾರಸ್ತರು ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ.
ಹುಳಿಯಾರು ಬಸ್ ನಿಲ್ದಾಣದ ಪುಟ್ ಪಾತ್‌ನಲ್ಲಿ ಹೂ, ಬಾಳೆಹಣ್ಣು, ಹಾಗೂ ಇಲ್ಲಿನ ರಸ್ತೆ ಅಕ್ಕಪಕ್ಕದಲ್ಲಿ ಗೋಪಿ ಮಂಜೂರಿ, ಪಾನಿಪೂರಿ, ಎಗ್ ರೈಸ್ ಮುಂತಾದ ಸಣ್ಣಪುಟ್ಟ ವ್ಯಾಪಾರವನ್ನ ತಳ್ಳುವಗಾಡಿಯಲ್ಲಿ ಮಾರುತ್ತ ಸಾಕಷ್ಟು ಕುಟುಂಬಗಳು ಜೀವನ ನಡೆಸುತ್ತಿವೆ.
ಈಗ ಪುಟ್ ಪಾತ್ ಅಂಗಡಿಗಳ ತೆರವಿನಿಂದ ನಾವು ಜೀವನಸಾಗಿಸುವುದು ಹೇಗೆ ಸಾಕಷ್ಟು ವರ್ಷಗಳಿಂದ ಈ ಜಾಗದಲ್ಲಿ ಸಣ್ಣಪುಟ್ಟ ವ್ಯಾಪಾರವನ್ನ ನಡೆಸಿಕೊಂಡು ಬರುತ್ತಿದ್ದೇವೆ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಪುಟ್‌ಪಾತ್ ಅಂಗಡಿಯವರು ಪಪಂ.ಮುಖ್ಯಾಧಿಕಾರಿಗೆ ಮನವಿಮಾಡಿದರು.
ಜಗ್ಗದ ಮುಖ್ಯಾಧಿಕಾರಿ ರಸ್ತೆಅಕ್ಕಪಕ್ಕದ ಹಾಗೂ ಪುಟ್ ಪಾತ್ ಅಂಗಡಿಗಳ ತೆರವುಗೊಳಿಸಿದರು.
ಈ ವೇಳೆ ಪಪಂ.ಮುಖ್ಯಾಧಿಕಾರಿ ಭೂತಪ್ಪ ಮಾತನಾಡಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರಕ್ಕೆ ತುಂಭ ತೊಂದರೆಯಾಗುತ್ತಿದೆ ಎಂಬುದಾಗಿ ಈಗಾಗಲೆ ಸಾಕಷ್ಟು ದೂರುಗಳು ಬಂದಿವೆ ಎಲ್ಲರು ತೆರವುಗೊಳಿಸಿ ಎಂದರು.
ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ:
ಪುಟ್‌ಪಾತ್ ಅಂಗಡಿಗಳ ಸುಂಕ ಸಂಗ್ರಹದಾರ ಚನ್ನಕೇಶ್ವ ಪ್ರತಿಕ್ರಿಯಿಸಿ ಪುಟ್‌ಪಾತ್ ಅಂಗಡಿಗಳ ಸುಂಕ ಸಂಗ್ರಹದ ಹರಾಜು ನಡೆಸಿರುವ ಪಪಂ.ಆಡಳಿತ 5,60ಲಕ್ಷ ರೂಗೆ ಬಹಿರಂಗ ಹರಾಜು ನಡೆಸಿ ಹಣವನ್ನ ಪಡೆದು. ಈಗ ದಿಢೀರನೇ ಅಂಗಡಿಗಳ ತೆರವಿಗೆ ಮುಂದಾಗಿರುವುದು ಯಾವ ನ್ಯಾಯ?
ಪ್ರಭಾವಿಗಳ ಮಾತುಕೇಳಿಕೊಂಡು ಪುಟ್ ಪಾತ್ ಅಂಗಡಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಬಡಪಾಯಿ ಸಣ್ಣಪುಟ್ಟ ಅಂಗಡಿ ಯವರು ಏನು ಮಾಡಬೇಕು. ಹಾಗೂ ಅಂಗಡಿ ತೆರವುಗೊಳಿಸುವವರು ಏಕೆ ಬಹಿರಂಗ ಹರಾಜು ನಡೆಸಿದ್ದಾರೆಂದು ದೂರಿದರು.
ಪಪಂ.ಅಂಗಡಿ ಮಳಿಗೆಯ ಹರಾಜು ನಡೆಸಿ ಮೂರು ವರ್ಷಕಳೆದರು ಸಹಾ ಸ್ಥಳಿಯ ಆಡಳಿತ ಅಂಗಡಿಮಳಿಗೆಯನ್ನ ಖಾಲಿಮಾಡಿಸಿ ಹರಾಜು ಕೂಗಿದವರಿಗೆ ಕೊಡಿಸುವಲ್ಲಿ ವಿಪಲವಾಗಿದೆ. ಈಗ ದಿಢೀರನೆ ಪುಟ್ ಪಾತ್ ಅಂಗಡಿಗಳ ತೆರವಿಗೆ ಮುಂದಾಗಿದೆ, ಬಡವರಿಗೆ ಒಂದು, ಶ್ರೀಮಂತರಿಗೆ ಒಂದು ನ್ಯಾಯ ಅನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಖಂಡಿಸಿದ್ದಾರೆ.