ಬಾದಾಮಿ ತಾಲೂಕಿನ ನೀಲಗುಂದ ಪಂಚಾಯತ್ ವ್ಯಾಪ್ತಿಯ ದಸರಾ ಕ್ರೀಡಾಕೂಟ ಉದ್ಘಾಟಿಸಿ ಕಬಡ್ಡಿ ಆಡಿ ಕ್ರೀಡೆಯನ್ನು ಪ್ರೋತ್ಸಾಹಿಸಿದ ಕೆ. ಪಿ.ಸಿ.ಸಿ.ರಾಜ್ಯ ವಕ್ತಾರ ಮಹಾಂತೇಶ.ಹಟ್ಟಿ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀಲಾಗುಂದ ಪಂಚಾಯತ್ ವ್ಯಾಪ್ತಿಯ ದಸರಾ ಗ್ರಾಮೀಣ ಕ್ರೀಡಾಕೂಟಗಳನ್ನು ಕೆಪಿಸಿಸಿ ರಾಜ್ಯ ವಕ್ತಾರ ಮಹಾಂತೇಶ ಲಕ್ಷ್ಮಣ ಹಟ್ಟಿ ಉದ್ಘಾಟಿಸಿ ಮಾತನಾಡಿ ಕ್ರೀಡಾಕೂಟಗಳ ಅವಶ್ಯಕತೆಗಳ ಬಗ್ಗೆ ಅರಿವು ಮೂಡಿಸಿದರು ಮತ್ತು ಕ್ರೀಡಾ ವಸತಿ ಶಾಲೆಗೆ ನಮ್ಮೂರಿನ ಮಕ್ಕಳನ್ನು ಸಹ ಸೇರಿಸುವಂತೆ ಪ್ರೋತ್ಸಾಹಿಸಿದರು ಕ್ರೀಡಾಕೂಟದ ಕೋಟಾ ದಡಿಯಲ್ಲಿ ಪೊಲೀಸ್ ನೇಮಕಾತಿ ರೈಲ್ವೇ ನೇಮಕಾತಿ ಹಾಗೂ ಭಾರತೀಯ ಭೂ ಸೇನೆಯಲ್ಲಿ ನೇಮಕಾತಿಗಳಿಗೆ ಪ್ರಯೋಜನವನ್ನು ಪಡೆಯಬೇಕು ಎಂದು ಸಲಹೆ ನೀಡಿದರು. ಹಾಗೆಯೇ ಮಹಾಂತೇಶ್ ಹಟ್ಟಿ ಯವರು ಕಬಡ್ಡಿಯನ್ನು ಆಡುವುದರ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ