ಮಾಜಿ ಸಿಎಂ ಕುಮಾರಣ್ಣ ಗುಬ್ಬಿ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯ : ಮುಖಂಡ ಬಿ.ಎಸ್.ನಾಗರಾಜು

ಗುಬ್ಬಿ: ಜೆಡಿಎಸ್ ಪಂಚರತ್ನ ಯೋಜನೆ ಹಾಗೂ ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಅಕ್ಟೋಬರ್ ಮಾಹೆಯಲ್ಲಿ ಗುಬ್ಬಿ ಕ್ಷೇತ್ರದ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಬಿ.ಎಸ್.ನಾಗರಾಜು ತಿಳಿಸಿದರು.

ಪಟ್ಟಣದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲು ತೆರಳಿದ ಸಂದರ್ಭದಲ್ಲಿ ಕುಮಾರಣ್ಣ ಗುಬ್ಬಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಅಕ್ಟೋಬರ್ ಮಾಹೆಯಲ್ಲಿ ಆಗಮಿಸಿ ಪಕ್ಷ ಸಂಘಟನೆ ಹಾಗೂ ಪಂಚರತ್ನ ಯೋಜನೆ ಬಗ್ಗೆ ಶ್ರೀ ಸಾಮಾನ್ಯರಿಗೆ ತಿಳಿಸುವ ಜೊತೆಗೆ ಕ್ಷೇತ್ರದಲ್ಲಿ ಜೆಡಿಎಸ್ ಹಿರಿಯ ಮುಖಂಡರು ಹಾಗೂ ಪ್ರಾಮಾಣಿಕ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಲಾಗುವುದು ಎಂದರು.

ಪ್ರತಿ ಗ್ರಾಮದಲ್ಲೂ ಜೆಡಿಎಸ್ ಪ್ರಣಾಳಿಕೆಗಳಾದ ಪಂಚರತ್ನ, ಜನತಾ ಜಲಧಾರೆ ಯೋಜನೆ ಬಗ್ಗೆ ಎಲ್ ಇ ಡಿ ಸ್ಕ್ರೀನ್ ಮೂಲಕ ಪ್ರದರ್ಶಿಸಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಬಗ್ಗೆ ತಿಳಿಸುವ ಯಾತ್ರೆಗೂ ಚಾಲನೆ ನೀಡುವ ಬಗ್ಗೆ ತಿಳಿಸಿದ್ದಾರೆ ಎಂದ ಅವರು ಈ ಜೊತೆಗೆ ಪಕ್ಷದ ಎಲ್ಲಾ ಘಟಕಗಳಿಗೆ ಜೆಡಿಎಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಪಕ್ಷದ ಪದಾಧಿಕಾರಿಗಳಾಗಿ ಆಯ್ಕೆ ಮಾಡಲು ಸೂಚಿಸಿದ್ದಾರೆ ಎಂದು ತಿಳಿದರು.
ವರದಿ: ರಮೇಶ್ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!