ಮಧುಗಿರಿ: ಎಸ್ ಟಿ ಸಮುದಾಯಕ್ಕೆ 7.5 ಮೀಸಲಾತಿ ಹೆಚ್ವಿಸದ ಬಿಜೆಪಿ ನೇತೃತ್ವದ ಸರಕಾರದ ನಡೆಯನ್ನು ಖಂಡಿಸಿ ತಾಲೂಕು ನಾಯಕ ಸಂಘದ ಪದಾಧಿಕಾರಿಗಳು ವಾಲ್ಮೀಕಿ ಜಯಂತಿಯ ಪೂರ್ವ ಬಾವಿ ಸಭೆ ಯನ್ನು ಬಹಿಷ್ಕರಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಗಳು ನೇತೃತ್ವದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ನಾಯಕ ಸಮುದಾಯದ ಮುಖಂಡರು ಭಾಗವಹಿಸಿ ನಂತರ ಮೀಸಲಾತಿಯನ್ನು ಸರಕಾರ ಹೆಚ್ಚಿಸದ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಿ ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಪುರಸಭೆಯ ಅಧ್ಯಕ್ಷ ತಿಮ್ಮರಾಜು ಮಾತನಾಡಿ ಇಂದೂ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿರುವ ಸಭೆಯನ್ನು ನಾವೆಲ್ಲಾ ಬಹಿಷ್ಕರಿಸಿದ್ದೇವೆ. ಪರಮ ಪೂಜ್ಯ ಸ್ವಾಮೀಜಿಗಳು ಮೀಸಲಾತಿಯನ್ನು ಏರಿಸುವಂತೆ ನಡೆಸುತ್ತಿರುವ ಪ್ರತಿಭಟನೆಯು 250 ನೇ ದಿನಕ್ಕೆ ಸಮೀಪಿಸುತ್ತಿದ್ದರು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ವಾಲ್ಮೀಕಿ ಜಯಂತಿಯ ದಿನದಂದು ನಾವೆಲ್ಲಾ ರೂ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುತ್ತೇವೆಂದರು.
ವಕೀಲ ಪಾಂಡುರಂಗಪ್ಪ ಮಾತನಾಡಿ ನಮ್ಮ ಸಮುದಾಯಕ್ಕೆ ಶೇ. 7.5 ರಷ್ಡು ಹೆಚ್ಚಿಸುವಂತೆ ನಮ್ಮ ಸ್ವಾಮಿಜೀಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಸರಕಾರ ಯಾವುದೇ ಕ್ರಮಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದ್ದು ಸರಕಾರದ ನಡೆಯನ್ನು ಖಂಡಿಸಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದರು.
ಹನುಮಂತರಾಯಪ್ಪ , ಕಾರ್ಯದರ್ಶಿ ಶಂಕರನಾರಾಯಣ , ಜಿ.ಎಸ್ ಜಗದೀಶ್ ಕುಮಾರ್ , ಪತ್ರಕರ್ತ ರಾಜೇಂದ್ರ (ಬಾಬು) , ನಾಗರಾಜು , ಗ್ರಾ.ಪಂ ಸದಸ್ಯ ವೀರನರಸಿಂಹಯ್ಯ , ಮಂಜುನಾಥ್ , ಯಲ್ಕೂರು ವಿಜಿ , ಮೂರ್ತಿ , ರಾಜಣ್ಣ , ಲೋಕೇಶ್ , ಚಂದ್ರಕಾಂತ್ , ನಾಗಣ್ಣ ಹಾಗೂ ಮತ್ತಿತರರು ಇದ್ದರು.