ಪಹಣಿಗಾಗಿ ವೃದ್ದೆ ಅಲೆದಾಡಿಸುತ್ತಿರುವ ಅಧಿಕಾರಿಗಳು: ಲೋಕಾಯುಕ್ತರಿಗೆ ದೂರು

ಕುಣಿಗಲ್ : ಸ್ವಾಮಿ ಹಲವು ವರ್ಷಗಳಿಂದ ಅಲೆಯುತ್ತಿದ್ದೇನೆ, ನನ್ನ ಜಮೀನಿಗೆ ಸ್ಕೆಚ್ ಆಗಿರುವ ಪ್ರಕಾರ, ದುರಸ್ತಿ ಮಾಡಿ ಪಹಣಿ ಮಾಡುತ್ತಿಲ್ಲ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವೃದ್ದೆಯೋರ್ವಳು ನ್ಯಾಯಕ್ಕಾಗಿ ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್ ಅವರ ಮೊರೆಹೋದ ಪ್ರಸಂಗ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸೋಮವಾರ ನಡೆಯಿತು,

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್ ಕೆ.ರಾಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ತಾಲೂಕಿನ ಎಡಿಯೂರು ಹೋಬಳಿ ಮನವಳ್ಳಿ ಗ್ರಾಮದ ಗಂಗಮ್ಮ ಸ್ವಾಮೀ ಮನವಳ್ಳಿ ಗ್ರಾಮದ ಸರ್ವೆ ನಂ 45.3 ರಲ್ಲಿ ೧ ಎಕರೆ 20 ಗುಂಟೆ ಜಾಗವನ್ನು ಬಣ್ಣದಿಂದ ಗುರುತಿಸಿ ಸ್ಕೆಚ್ ಮಾಡಲಾಗಿದೆ, ತುಮಕೂರು ಉಪವಿಭಾಗಾಧಿಕಾರಿಗಳು, ಅನುಭವ ಹಾಗೂ ಸರ್ವ ಸ್ಕೆಚ್ ಪ್ರಚಾರ ಓನ್ ಟೂ ಪೈವ್ ಮಾಡಿ ನನ್ನ ಹೆಸರಿಗೆ ಪಹಣಿ ಮಾಡಿಕೊಡಿ ಎಂದು ಹೇಳಿದರೂ ಏನು ಮಾಡಿಲ್ಲ ನನ್ನಗೆ ತಿರುಗಿ ತಿರುಗಿ ಸಾಕಾಗಿದೆ ಎಂದು ಲೋಕಾಯುಕ್ತ ಇನ್ಸ್‌ಸ್ಲೆಕ್ಟರ್ ಕೆ.ರಾಮರೆಡ್ಡಿ ಅವರಿಗೆ ದೂರು ಸಲ್ಲಿಸಿದರು, ಕಾನೂನು ಪ್ರಕಾರ ಮಾಡಲು ಅವಕಾಶ ಇದ್ದರೆ ಮಾಡಿಕೊಡಿ ಇಲ್ಲವಾದಲ್ಲಿ ಅರ್ಜಿದಾರರಿಗೆ ಹಿಂಬರ ಕೊಡಿ ಮುಂದಿನ ಕೆಲಸ ಅವರು ನೋಡಿಕೊಳ್ಳುತ್ತಾರೆ ಸುಮ್ಮನೆ ಏಕೆ ಅರ್ಜಿದಾರರನ್ನು ಅಲೆಸುತ್ತೀರ ಎಂದು ಲೋಕಾಯುಕ್ತ ಇನ್ಸ್ ಸ್ಪೆಕ್ಟರ್ ಕೆ.ರಾಮರೆಡ್ಡಿ ತಹಶೀಲ್ದಾರ್ ಮಹಬಲೇಶ್ವರ ಅವರಿಗೆ ತಿಳಿಸಿದರು, ಈ ಜಮೀನು ಮಂಜೂರಾತಿ ಜಮೀನಾಗಿದೆ, ಮೂಲ ಮಂಜೂರಾತಿ ಪತ್ರ ಗಂಗಮ್ಮ ಅವರ ಬಳಿ ಇಲ್ಲ, ಇದರ ದಾಖಲೆಗಳನ್ನು ಕಳಿಸಲಾಗಿದೆ, ಆದರೆ ಇದಕ್ಕೆ ಕೆಲವು ತಕರಾರು ಬಂದಿದೆ, ಸರ್ವೆ ನಂಬರ್ 45.3ರ ವ್ಯಾಪ್ತಿಯಲ್ಲಿ ಸಾಕಷ್ಟು ಜನ ಫಲಾನುಭವಿಗಳಿದ್ದಾರೆ ಅವುಗಳನ್ನು ಪರಶೀಲಿಸಿ ಎಲ್ಲರಿಗೂ ಮಾಡಿಕೊಡಬೇಕಾಗಿದೆ ಒಬ್ಬರಿಗೆ ಮಾಡಿಕೊಡಲು ಹಾಗುವುದಿಲ್ಲ ಇದಕ್ಕೆ ಸ್ಪಲ್ಪ ದಿನ ಕಾಲಾವಕಾಶ ಬೇಕಾಗಿದೆ ಎಂದು ತಹಶೀಲ್ದಾರ್ ಅವರು ತಿಳಿಸಿದರು.

ಧೂಳು, ಹೊಗೆಯಿಂದ ಮುಕ್ತಿಗೊಳಿಸಿ : ತಾಲೂಕಿನ ಹುತ್ರಿದುರ್ಗ ಹೋಬಳಿ ಕಲ್ಲನಾಯಕನಹಳ್ಳಿ ಗ್ರಾಮದ ಬಿ.ಜಿ.ಕೇಶವಮೂರ್ತಿ ದೂರು ಸಲ್ಲಿಸಿ ಸರ್ವೆ ನಂ 82/2, 82/1ಎ, 82/1ಬಿ, 82/1ಸಿಯ 12 ಎಕರೆ ಜಮೀನು ಗುಡ್ಡಯ್ಯ ಅವರು ಎಂ.ಎಸ್ ಸ್ಟೀಲ್ ಕಾರ್ಖಾನೆಗೆ ಗುತ್ತಿಗೆ ಆದಾರದ ಮೇಲೆ ನೀಡಿದ್ದಾರೆ, ಈ ಜಮೀನಿನಲ್ಲಿ ಕಾರ್ಖಾನೆ ಅವರು ಕಬ್ಬಿಣ ತಯಾರು ಮಾಡುತ್ತಾರೆ ಆದರೆ ಇದರಿಂದ ಧೂಳು, ಹೊಗೆ ಹೊರಗೆ ಬರುತ್ತಿದೆ, ಶಬ್ದ ಮಾಲೀನ್ಯ ಉಂಟಾಗುತ್ತಿದೆ ನಿತ್ಯ ಸುಮಾರು 3೦೦ ರಿಂದ 4೦೦ ಟನ್ ಹೊಸ ಕಬ್ಬಿಣ ಕಾರ್ಖಾನೆಯಿಂದ ಸರಬರಾಜು ಆಗುತ್ತಿದೆ, ಅಷ್ಟೇ ಪ್ರಮಾಣದ ಹಳೇ ಕಬ್ಬಿಣ ಕಾರ್ಖಾನೆಗೆ ಬರುತ್ತಿದೆ, ನೂರಾರು ಲಾರಿಗಳು ಸಂಚರಿಸುತ್ತಿವೆ ಇದರಿಂದ ರಸ್ತೆ ಹಾಳಾಗಿದೆ ಗುಂಡಿಗಳು ಬಿದ್ದಿವೆ ಕಾರ್ಖಾನೆಯ ಧೂಳು ಹಾಗೂ ಹೋಗೆಯಿಂದ ಜನರ ಮೇಲೆ ದುಷ್ಟಪರಿಣಾಮ ಭೀರಿದ್ದು ಕ್ಯಾನ್ಸರ್‌ಗಳಂತ ಮಾರಕ ರೋಗಗಳಿಗೆ ಕಾರಣವಾಗಿದೆ ಈಗಾಗಲೇ ಒಬ್ಬರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ, ಪರಿಸರ ನಾಶವಾಗಿದ್ದು, ಜನ ಜಾನುವಾರಗಳ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ ಇದನ್ನು ಸರಿಪಡಿಸುವಂತೆ ಹಲವು ಭಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಕಾರ್ಖಾನೆಯನ್ನು ಮುಚ್ಚಿಸಿ ನಾಗರೀಕರ ಪ್ರಾಣ ರಕ್ಷಿಸಬೇಕೆಂದು ದೂರು ನೀಡಿದರು, ಈ ಸಂಬಂಧ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳುವುದ್ದಾಗಿ ಲೋಕಾಯುಕ್ತರು ತಿಳಿಸಿದರು.

ಅಂಗಡಿಗಳು ತೆರವುಗೊಳಿಸಿ ಗೋಕಟ್ಟೆ ಉಳಿಸಿ : ರಾಷ್ಟ್ರೀಯ ಹೆದ್ದಾರಿ 75 ರ ಅಂಚೇಪಾಳ್ಯ ಸರ್ವೆ ನಂ 103 ರ ಬಳಿ ಸರ್ಕಾರಿ ಗೋಕಟ್ಟೆ ಇದ್ದು ಜನ ಜಾನುವಾರಗಳ ಕುಡಿಯುವ ನೀರಿಗೆ ಅನುಕೂಲವಾಗಿತ್ತು ಆದರೆ ಈ ಜಾಗವನ್ನು ಕೆಲ ವ್ಯಕ್ತಿಗಳು ಶೇ 70 ರಷ್ಟು ಗೋಕಟ್ಟೆಯನ್ನು ಮುಚ್ಚಿ ಅದರ ಮೇಲೆ ವಾಣಿಜ್ಯ ಕಟ್ಟಡಗಳನ್ನು ಕಟ್ಟಿ ಲಕ್ಷಾಂತರೂ ಬಾಡಿಗೆ ಪಡೆಯುತ್ತಿದ್ದಾರೆ ಇದನ್ನು ಪ್ರಶ್ನಿಸಿದರೇ ಗುಂಡಾಗಳಿಂದ ಬೆದರಿಗೆ ಹಾಗೂ ಪ್ರಾಣ ಭಯವನ್ನು ಉಂಟು ಮಾಡುತ್ತಿದ್ದಾರೆ ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ಬಿ.ಜಿ.ಕೇಶವಮೂರ್ತಿ ಮನವಿ ಮಾಡಿದರು, ಕೂಡಲೇ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಲೋಕಾಯುಕ್ತರು ತಿಳಿಸಿದರು. ವಿವಿಧ ಇಲಾಖೆಗೆ ಸಂಬಂಧಿಸಿದಂತೆ 29 ಅರ್ಜಿಗಳು ಸಲ್ಲಿಕೆಯಾಗಿದವು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!