ಮದುಗಿರಿ : ಐಡಿಯಳ್ಳಿ ಹೋಬಳಿಯಲ್ಲಿ ರೈತನ ಮೇಲೆ ಕರಡಿ ದಾಳಿ ಮಾಡಿದ ಪರಿಣಾಮ ರೈತನ ಕೈಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಯರಮಲ್ಲೇನಹಳ್ಳಿ ನಿವಾಸಿ ಶ್ರೀರಾಮರೆಡ್ಡಿ ಎಂದಿನಂತೆ ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಹುಲ್ಲು ತರಲು ತರಲು ಜಮೀನಿಗೆ ತೆರಳಿದ್ದ ಸಮಯದಲ್ಲಿ ಕರಡಿ ದಾಳಿ ನಡೆಸಿದ ಪರಿಣಾಮ ಕೈ ಕಾಲು ಗಾಯಗೊಂಡಿದ್ದಾರೆ.
ಬಳಿಕ ಐಡಿ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮದುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.