ದೇಶ ಕಾಯುವ ಯೋಧರು ಇಂದಿನ ಯುವ ಪೀಳಿಗೆಗೆ ದಾರಿದೀಪ

ತುಮಕೂರು: ದೇಶ ಕಾಯುವ ಯೋಧರ ಕರ್ತವ್ಯ ಪ್ರಜ್ಞೆ, ದೇಶ ಪ್ರೇಮ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.

ನಗರದ ಎನ್‌ಸಿಸಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹುತಾತ್ಮ ಯೋಧರಿಗೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಇಬ್ಬರು ವೀರ ಯೋಧರಿಗೆ ಸರ್ಕಾರದ ಪರವಾಗಿ ನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ ಸಹ ತ್ಯಾಗ, ಬಲಿದಾನದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ದೇಶಕ್ಕಾಗಿ ಹೋರಾಡುವ ಮನೋಭಾವನೆ ಎಲ್ಲರಲ್ಲೂ ಮೂಡುತ್ತದೆ ಎಂದರು.

ದೇಶ ಕಾಯುವ ಯೋಧರ ಕುಟುಂಬದವರ ಜತೆ ಎಂದಿಗೂ ಜನತೆ ಇರಬೇಕು. ನಾವು ನೀವೆಲ್ಲರೂ ಯೋಧರ ಕುಟುಂಬದವರು ಸಂಕಷ್ಟಕ್ಕೆ ಒಳಗಾಗದಂತೆ ಜಾಗೃತೆ ವಹಿಸೋಣ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಲ್ ಮನೋಜ್ ಗುಪ್ತ, ಕರ್ನಲ್ ಬಿ ಕಣ್ಣನ್, ಮಾಜಿ ಸೈನಿಕರ ಸಂಘದ ನಾಗರಾಜು, ಸುಬೇದಾರ್ ಮೇಜರ್ ಬಹದ್ದೂರ್ ಸಿಂಗ್, ಕೃಷ್ಣಮೂರ್ತಿ, ಸಿಪಾಯ್ ಚಾಂದ್ ಪಾಷಾ, ವೀರನಾರಿ ಹೇಮಾವತಿ, ಕೃಷ್ಣಮೂ, ವೀರ ಮಾತೆ ಗುಣಸಾಗರಿ ಮತ್ತಿತರರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!