ಪಾವಗಡ: ಪುರಸಭೆ ಸಾಮಾನ್ಯ ಸಭೆ ಮುಖ್ಯಾಧಿಕಾರಿ ವಿರುದ್ದ ಹರಿಹಾಯ್ದ ಸದಸ್ಯರು

ಪಾವಗಡ: ಪುರಸಭೆ ಮುಖ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ದೌರ್ಜನ್ಯಕ್ಕೆ ಬೇಸತ್ತ ನಾಮಿನಿ ಸದಸ್ಯರು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ ನಡೆಸಿದ ಘಟನೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆಯಿತು.

ಮಂಗಳವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಡಿ.ವೇಲುರಾಜು ಅದ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಾಮಿನಿ ಸದಸ್ಯರು, ಕಾಂಗ್ರೆಸ್ ಸದಸ್ಯರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಮದ್ಯೆ ಮಾತಿನ ಚಕಮಕಿ ನಡೆಯಿತು.

ಪಟ್ಟಣದ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಲವು ಯೋಜನೆಗಳ ಅನುಧಾನ ಉಪಯೋಗಿಸಿ ಅಭಿವೃದ್ದಿ ಕಾರ್ಯ ಮಾಡುವಲ್ಲಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೇರಿ ಅವ್ಯವಹಾರ ನಡೆಸಿದ್ದಾರೆಂದು ನಾಮಿನಿ ಸದಸ್ಯರು ಆರೋಪಿಸಿದರು.

ನಾಮಿನಿ ಸದಸ್ಯರಿಗೆ ಪುರಸಭೆಯ ಯಾವುದೇ ಮಾಹಿತಿ ನೀಡುವಲ್ಲಿ ನಿರ್ಲಕ್ಷ ತೋರುವ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳ ಕುರಿತು ಮಾತನಾಡಲು ಹೋದರೆ ಅವರಿಗಿಷ್ಟಬಂದಂತೆ ಮಾತನಾಡುವುದು ಹಾಗೂ ಮಾಹಿತಿ ನೀಡದೆ ಗೌಫ್ಯತೆ ಕಾಪಾಡುತ್ತಿರುವುದು ವಿಪರ್ಯಾಸ ಎಂದು ಸಭೆಯಲ್ಲಿ ಕಿಡಿಗಾರಿದರು.

ರಸ್ತೆ ನಿರ್ಮಾಣ, ಕುಡಿಯುವ ನೀರು, ಚರಂಡಿ, ಡಕ್ ನಿರ್ಮಾಣ, ಬೀದಿ ದೀಪ ನಿರ್ವಹಣೆ, ಕೊಳಚೆ ಪ್ರದೇಶವಾಸಿಗಳಿಗೆ ಡ್ರಮ್ ವಿತರಣೆ ಸೇರಿದಂತೆ ವಿವಿದ ಯೋಜನೆಗಳ ಅನುಷ್ಠಾನದ ವೇಳೆ ಅವ್ಯವಹಾರ ನಡೆದಿದೆ ಎಂದು 5 ಜನ ನಾಮಿನಿ ಸದಸ್ಯರು ಸಭೆಯಲ್ಲೇ ಆರೋಪಿಸಿದರು.

ಅಂತಿಮವಾಗಿ ಸದಸ್ಯರು ಹಾಗೂ ಮುಖ್ಯಾಧಿಕಾರಿ ಮದ್ಯೆ ನಡೆಯುತ್ತಿದ್ದ ಮಾತಿನ ಚಕಮಕಿ ನಿಲ್ಲಿಸಲು ಮುಂದಾದ ಅಧ್ಯಕ್ಷ ವೇಲುರಾಜು ಬುಧವಾರ ದಿಂದಲೇ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ತಿಳಿಸಿ ಪರಿಸ್ಥಿತಿ ತಿಳಿ ಗೊಳಿಸಿದರು.

ಪಟ್ಟಣದ 23 ವಾರ್ಡ್‌ಗಳ ವಾಪ್ತಿಯಲ್ಲಿ ಕೈಗೊಳ್ಳಬೇಕಾದ ಹಲವಾರು ಅಭಿವೃದ್ದಿ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಿ.ವೇಲುರಾಜು, ಉಪಾದ್ಯಕ್ಷೆ ಶಶಿಕಲಾ ಬಾಲಾಜಿ, ಎಲ್ಲಾ ವಾರ್ಡ್‌ಗಳ ಸದಸ್ಯರು, ನಾಮಿನಿ ಸದಸ್ಯರು ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!