ಮಧುಗಿರಿ: ಅಕ್ರಮ ಮರಳು ದಂದೆಗೆ ಕಡಿವಾಣ: ವಾಹನಗಳಿಗೆ ನಿರ್ಬಂಧ

ಮಧುಗಿರಿ : ತಾಲ್ಲೂಕು ಪುರವರ ಗ್ರಾಮದ ಹುಲಿ ಹಳ್ಳದಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ ಹಿನ್ನಲೆಯಲ್ಲಿ ಹುಲಿ ಹಳ್ಳಕ್ಕೆ ತೆರಳುವ ರಸ್ತೆಗಳಿಗೆ ವಾಹನಗಳು ಪ್ರವೇಶ ಮಾಡದಂತೆ ತಾಲ್ಲೂಕು ಆಡಳಿತ ವತಿಯಿಂದ ರಸ್ತೆಯ ಸುತ್ತಲೂ ಜೆಸಿಬಿ ಯಂತ್ರದ ಮೂಲಕ ಸೋಮವಾರ ಕಾಲುವೆ ತೆಗೆದು ವಾಹನಗಳಿಗೆ ನಿರ್ಬಂಧ ವಿಧಿಸಿದ್ದಾರೆ.

ಇತ್ತೀಚಿಗೆ ಸುರಿದ ಬಾರಿ ಮಳೆಯಿಂದಾಗಿ ಬಿಜವರ ಕೆರೆಯಿಂದ ನೀರು ಹುಲಿ ಹಳ್ಳಕ್ಕೆ ಹರಿದ ಪರಿಣಾಮ ನೀರಿನ ಜೊತೆಯಲ್ಲಿ ಮರಳು ಕೂಡ ಹರಿದು ಬಂದಿತ್ತು. ಕೆಲವರು ಮರಳನ್ನು ತುಂಬಿಕೊಂಡು ಸ್ಥಳೀಯ ಕಟ್ಟಡ ಹಾಗೂ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಇದನ್ನೇ ಕೆಲವರು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ದಂಧೆ ಮಾಡುತ್ತಿದ್ದಾರೆ ಎಂಬ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರ ಬಂದ ಹಿನ್ನೆಲೆಯಲ್ಲಿ ಸೋಮವಾರ ಹುಲಿ ಹಳ್ಳಕ್ಕೆ ಕಾಲುವೆಗಳನ್ನು ತೆಗೆದು ವಾಹನಗಳು ಹಳ್ಳಕ್ಕೆ ತೆರಳದಂತೆ ನಿರ್ಬಂಧ ಹೇರಲಾಯಿತು.

ಪುರವರ ಕಂದಾಯ ನಿರೀಕ್ಷಕ ಜಿ.ಜಯರಾಮಯ್ಯ , ಕಾರ್ಯದರ್ಶಿ ನಟರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!