ಮಧುಗಿರಿ:- ಶಾಲೆ ಮುಗಿಸಿಕೊಂಡು ಮನೆಗೆ ಆಟೋದಲ್ಲಿ ಹಿಂದಿರುಗುತ್ತಿದ್ದ ವೇಳೆ ಆಟೋದಿಂದ ಅಯಾ ತಪ್ಪಿ ವಿದ್ಯಾರ್ಥಿಯೊಬ್ಬ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಲಿಂಗೇನಹಳ್ಳಿ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಪಟ್ಟಣದ ವಿವೇಕಾನಂದ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಕುಶಾಲ್ 9ವರ್ಷ ಮೃತಪಟ್ಟ ದುರ್ದೈವಿ.
ಶಾಲೆ ಮುಗಿಸಿಕೊಂಡು ಬೆಂಕಿ ಪುರದಲ್ಲಿರುವ ಮನೆಗೆ ಹಿಂದಿರುಗುತ್ತಿದ್ದಾಗ ಮೂಡ್ಲಪ್ಪ ಹೋಟೆಲ್ ಬಳಿ ವಿಧ್ಯಾರ್ಥಿ ಇಳಿಯುವುದಕ್ಕೂ ಮುಂಚೆ ಆಟೊ ಚಾಲನೆ ಆದಕಾರಣ ಆಯತಪ್ಪಿ ಬಿದ್ದು ಹಿಂದಿನ ಚಕ್ರಕ್ಕೆ ತಲೆ ಸಿಕ್ಕಿ ಹಾಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇವರ ತಾಯಿ ಮರುವೇಕೆರೆ ಆಶಾ ಕಾರ್ಯಕರ್ತೆ ಸರೋಜಮ್ಮ ಹಾಗೂ ಗಾರೆ ಕೆಲಸ ಮಾಡುವ ಅಶ್ವತ್ಥಪ್ಪನ ಪುತ್ರ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ತಂದಾಗ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಈ ಘಟನೆ ಬಗ್ಗೆ ಸ್ಥಳಕ್ಕೆ ಪೊಲೀಸರು ಧಾವಿಸಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.