ಸಿದ್ದರಬೆಟ್ಟವು ಅತ್ಯಂತ ಪವಿತ್ರವಾದ ಪ್ರವಾಸಿ ತಾಣ :ಜಿಲ್ಲಾಧಿಕಾರಿ ವ್ಯೆ.ಎಸ್.ಪಾಟೀಲ


ತುಮಕೂರು- ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಾಧು-ಸಿದ್ದರ ಕ್ಷೇತ್ರ ‘ಸಿದ್ದರಬೆಟ್ಟದ ನೆಲ, ಜಲ ಅತ್ಯಂತ ಪವಿತ್ರವಾದದ್ದು, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗಾಗಿ ಸಂಸ್ಕೃತಿಯ ಉಳಿಸಲು ನಾವೆಲ್ಲಾ ಕೈ ಜೋಡಿಸಬೇಕು, ಎಂದು ಜಿಲ್ಲಾಧಿಕಾರಿ ವ್ಯೆ.ಎಸ್.ಪಾಟೀಲ್ ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಇಂದು ಜಿಲ್ಲೆಯ ಸಿದ್ದರಬೆಟ್ಟದಲಿ ಏರ್ಪಡಿಸಿದ್ದ “ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಾಸಿ ಸ್ಥಳಗಳು ಅಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ, ಪ್ರವಾಸವು ನಮ್ಮ ಜೀವನದ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಅರ್ಥಿಕ ಪರಿಣಾಮವನ್ನು ಬೀರುತ್ತದೆ, ಕೋವಿಡ್-೧೯ ಕಾರಣದಿಂದ, ಕಳೆದ ಎರಡು ವರ್ಷಗಳು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿತ್ತು, ನಂತರದ ಪರಿಸ್ಥಿತಿಯಲ್ಲಿ ಅರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರವಾಸೋದ್ಯಮ ಚೇತರಿಕೆ ಹಾದಿಯಲ್ಲಿದೆ, ಇತಿಹಾಸ ಪ್ರಸಿದ್ಧ ಸಿದ್ದರಬೆಟ್ಟ. ಸಾವಿರಾರು ಅಡಿಗಳಿಂತ ಎತ್ತರ ಪ್ರದೇಶವಾಗಿದ್ದು, ಬೆಟ್ಟವು ಶುದ್ದಜಲದ ಚಿಲುಮೆಗಳ ಹೊಂದಿದೆ, ಕೊಳವೆಬಾವಿಗಳನ್ನ ಸಾವಿರಾರು ಅಡಿ ಕೊರೆಯಿಸಿದಾಗ ಕೆಲವಡೆ ಸೀಗದ ನೀರು ಇಂತಹ ಪವಾಡ ಪುರುಷರ ಕ್ಷೇತ್ರಗಳಲ್ಲಿ ಸೀಗುವುದು ನಿಜಕ್ಕೂ ಅಚ್ಚರಿ, ಮುಂದಿನ ದಿನಗಳಲ್ಲಿ ಈ ತಾಣ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತಾಗಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಪವಿತ್ರ ಕ್ಷೇತ್ರದ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸಲಿ, ಪ್ರವಾಸವು ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸಿ, ಒತ್ತಡವನ್ನು ನಿವಾರಣೆಮಾಡುತ್ತದೆ. ಪ್ರವಾಸೋದ್ಯಮವು ಉದ್ಯೋಗ ನೀಡುವುದರ ಮೂಲಕ ಉತ್ತಮ ಭವಿ಼ಷ್ಯ ರೂಪಿಸುತ್ತದೆ ಸಾರ್ವಜನಿಕರಲ್ಲಿ ಪ್ರವಾಸಿ ಸ್ಥಳಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ, ಕ್ಷೇತ್ರದ ಪ್ರಾಮುಖ್ಯತೆಯ ಅರಿವು ಮೂಡಿಸುವುದು ಪ್ರವಾಸೋದ್ಯಮ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಜಿ.ಪರಮೇಶ್ವರ್ ಮಾತನಾಡಿ, ಶ್ರೀ ಕ್ಷೇತ್ರ ಸಿದ್ದರ ಬೆಟ್ಟವು, ಸಾವಿರರಾರು ತಪಸ್ವಿಗಳ ಪುಣ್ಯಕ್ಷೇತ್ರವಾಗಿದ್ದು, ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುತ್ತಿದೆ. ಜಿಲ್ಲೆಯು ನೂರಾರು ದೇವಾಲಯಗಳು, ಪ್ರಕೃತಿ ಸಂಪತ್ತು, ವನ್ಯಮೃಗಗಳ ಬೀಡಾಗಿದೆ. ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ಜಿಲ್ಲೆಯನ್ನು ರೂಪಿಸಿ ಆರ್ಥಿಕವಾಗಿ, ಧಾರ್ಮಿಕವಾಗಿ ಅಭಿವೃದ್ಧಿಗೊಳಿಸಲು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇವುಗಳನ್ನು ನಾವು ಮುನ್ನೆಲೆಗೆ ತರಬೇಕಾಗಿದೆ ಎಂದರು.

ಶಂಕುಸ್ಥಾಪನೆ: ಸಿದ್ದರ ಬೆಟ್ಟದ ಪ್ರವಾಸಿ ತಾಣದ ಪ್ರವಾಸಿಗರ ಅನುಕೂಲಕ್ಕಾಗಿ ನೂತನ ಮೆಟ್ಟಿಲು, ರ‍್ಯೆಲಿಂಗ್ಸ್, ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಶಾಸಕರಾದ ಜಿ.ಪರಮೇಶ್ವರ್ ಮತ್ತು ಜಿಲ್ಲಾಧಿಕಾರಿ ವ್ಯೆ.ಎಸ್.ಪಾಟೀಲ್ ನೆರವೇರಿಸಿದರು. ವಿವಿಧ ಸರ್ಕಾರಿ ಅಧಿಕಾರಿಗಳು, ಗ್ರಾಮಸ್ಥರು, ಸ್ಥಳೀಯ ಮುಖಂಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

“ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಪರ್ವತಾರೋಹಣ: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಇಂದು ಮುಂಜಾನೆ ಪರ್ವತಾರೋಹಣ ಹಮ್ಮಿಕೊಳ್ಳಲಾಗಿತ್ತು, ಜಿಲ್ಲಾಧಿಕಾರಿ ವ್ಯೆ.ಎಸ್.ಪಾಟೀಲ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಲ, ಅಜಯ್ ವಿ. ತಹಸಿಲ್ದಾರ್ ನಹಿದ ಜಮ್ ಜಮ್, ಅಯುಷ್ ಇಲಾಖೆಯ ಭವ್ಯ, ಸೇರಿದಂತೆ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು ಅಧಿಕಾರಿಗಳು/ನೌಕರರುಭಾಗವಹಿಸಿದ್ದರು.
ಪರ್ವತಾರೋಹಣದ ನಂತರ ಮಾತನಾಡಿದ ಪ್ರಸಿದ್ದ ಯಾತ್ರಾ ಕೇಂದ್ರವಾಗಿರುವ ಸಿದ್ದರ ಬೆಟ್ಟದ ಚಾರಣವು ಉತ್ತಮವಾದ ಪ್ರವಾಸದ ಅನುಭವವನ್ನು ನೀಡುತ್ತದೆ. ಪ್ರಯಾಣಿಕರೇ ಇರಲಿ ಸಾಹಸಗಾರನೇ ಇರಲಿ, ಅನ್ವೇಷಕನೇ ಇರಲಿ ಅಥವಾ ಪ್ರಾಕೃತಿಕ ಅದ್ಭುತಗಳನ್ನು ಸವಿಯಲು ಬಯಸುವ ಸದಭಿರುಚಿಯ ವ್ಯಕ್ತಿಯೇ ಆಗಿರಲಿ, ಅವನ ಅಭಿರುಚಿಗೆ ತಕ್ಕ ಹಾಗೆ ಹಲವು ಬಗೆಯ ಸÀಂಪತ್ತು ಭರಿತವಾಗಿ ನೈಸರ್ಗಿಕ ತಾಣವನ್ನು ಇಲ್ಲಿ ಕಾಣಬಹುದಾಗಿದೆ.
ಮೋಡಗಳನ್ನು ಮುತ್ತಿಕುವ ಅತಿ ಎತ್ತರದ ಬೆಟ್ಟವಾಗಿದ್ದು ಸಮುದ್ರ ಮಟ್ಟದಿಂದ ಸುಮಾರು ೧೭೦೦ ಅಡಿ ಎತ್ತರದಲ್ಲಿದೆ, ಸಾಹಸ ಕ್ರೀಡಾ ಪ್ರವಾಸಿಗರ/ಅನ್ವೇಷಕರನ್ನು ಮತ್ತು ಬೆಟ್ಟದ ವೈಶಿಷ್ಟವನ್ನು ಸವಿಯಲು ಅತ್ಯುತ್ತಮ ಸ್ಥಳವಾಗಿದೆ, ಅನೇಕ ಅತ್ಯಮೂಲ್ಯ ಸಸ್ಯ ಸಂಪತ್ತು ಮತ್ತು ಬಂಡೆಗಳಿAದ ಆವರಿಸಿಕೊಂಡಿದೆ.ಇಲ್ಲಿಯ ಪ್ರತಿ ಸಸ್ಯಗಳಿಗೂ ಔಷಧೀಯ ಶಕ್ತಿ ಇದೆ ಮತ್ತು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ, ಈ ಸ್ಥಳವು ಬಹಳ ಪ್ರಶಾಂತ ಮತ್ತು ಸುಂದರವಾಗಿದೆ. ಪರಿಸರವು ದೈವಿಕ ಶಕ್ತಿಯ ಅನುಭೂತಿಯನ್ನು ಒಳಗೊಂಡಿದೆ ಎಂದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಅರಿವು: “ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಪ್ರವಾಸೋದ್ಯಮದ ಬಗ್ಗೆ ಅರಿವು ಮೂಡಿಸಲು ಸುರ್ವಣಮುಖಿ ಫ್ರೌಢಶಾಲೆ ಹಾಗೂ ಡಾ// ಬಿ.ಆರ್. ಅಂಬೇಡ್ಕರ್ ಪ್ರೌಡಶಾಲೆ ಮಲ್ಲೇಕಾವು ಗ್ರಾಮದ ಶಾಲೆಯಲ್ಲಿ ನಡೆದ ಪ್ರಬಂಧ, ಚಿತ್ರಕಲಾ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕರ‍್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು, ಹಾಗೂ ಇದೇ ಶಾಲೆಯ ವಿಧ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳಗೌರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಲ, ಅಜಯ್ ವಿ. ತಹಸಿಲ್ದಾರ್ ನಹಿದ ಜಮ್ ಜಮ್, ಅಯುಷ್ ಇಲಾಖೆಯ ಭವ್ಯ, ಬೂದುಗವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನೋದ, ಪ್ರವಾಸೋದ್ಯಮ ಇಲಾಖೆಯ ಇಮ್ರಾನ್ ಖಾನ್ ಸೇರಿದಂತೆ ಸ್ಥಳೀಯರು, ವಿದ್ಯಾರ್ಥಿಗಳು, ವಿವಿಧ ಸರ್ಕಾರಿ ಅಧಿಕಾರಿಗಳು/ನೌಕರರು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!