ಮಧುಗಿರಿ: ಕಸಬಾ ವ್ಯಾಪ್ತಿಯ ಲಿಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದರಿಂದ ಇದನ್ನು ಅಪಘಾತ ವಲಯ ಎಂದು ಘೋಷಿಸಿ ಸೂಚನ ಫಲಕ ಅಳವಡಿಸಬೇಕೆಂದು ಕಾಂಗ್ರೆಸ್ ಮುಖಂಡ S B T ರಾಮು ಆಗ್ರಹಿಸಿದರು.
ಮಂಗಳವಾರ ಸಾಯಂಕಾಲ ಶಾಲೆ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವಿದ್ಯಾರ್ಥಿ ಕುಶಾಲ್ ಅಪಘಾತದಲ್ಲಿ ಸಾವನ್ನಪ್ಪಿದ್ದ ಹಾಗಾಗಿ ಇಂದು ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್ ಬಿಟಿ ರಾಮು ಈ ಸ್ಥಳದಲ್ಲಿ ಇತ್ತೀಚೆಗೆ ಹೆಚ್ಚು ಅಪಘಾತಗಳು ನಡೆಯುತ್ತಿದ್ದು ಕಳೆದ ವಾರ ಶಿಕ್ಷಕರೊಬ್ಬರು ಮೃತಪಟ್ಟಿದ್ದರು ನಿನ್ನೆ ಸಾಯಂಕಾಲ ಶಾಲಾ ವಿದ್ಯಾರ್ಥಿಯೊಬ್ಬಳು ಅಪಘಾತಕ್ಕೆ ಬಲಿಯಾಗಿದ್ದಾಳೆ. ಇಲ್ಲಿ ಯಾವಾಗಲೂ ಅಪಘಾತಗಳು ಸಂಭವಿಸು ವುದರಿಂದ ಸಂಬಂಧ ಪಟ್ಟ ಇಲಾಖೆಯವರು ಇದನ್ನು ಅಪಘಾತವಾಲಯ ಎಂದು ಘೋಷಿಸಿ ಸೂಚನಾ ಫಲಕಗಳನ್ನು ಅಳವಡಿಸಿ ಈ ರಸ್ತೆಯಲ್ಲಿ ಸುರಕ್ಷತೆಗೆ ವೈಜ್ಞಾನಿಕವಾಗಿ ರಸ್ತೆ ಹುಬ್ಬುಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಣ್ಣ, ಮೂರ್ತಣ್ಣ, ಮಂಜುನಾಥ್, ಸುವರ್ಣಮ್ಮ ಹಾಗೂ ಊರಿನ ಮುಖ್ಯ ಗ್ರಾಮಸ್ಥರ ಹಾಜರಿದ್ದರು
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.