ತಿಪಟೂರು : ಸಾರ್ವಜನಿಕರ ಸಮಸ್ಯೆ ಗಳಿಗೆ ಸರ್ಕಾರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಲೋಕಾಯುಕ್ತಕ್ಕೆ ತಾಲೂಕಿನಿಂದ 12 ದೂರುಗಳು ಸಲ್ಲಿಕೆಯಾದವು, ನಗರದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಡಿವೈಎಸ್ಪಿ ರವೀಶ್ ಹಾಗೂ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಮರೆಡ್ಡಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು,
ಈ ವೇಳೆ ಪೆದ್ದಿಹಳ್ಳಿ ಗ್ರಾಮದ ಶಿವಮೂರ್ತಿ ಎಂಬವರು, ಕಳೆದ 60 ವರ್ಷಗಳಿಂದ ಬಗರ್ ಹುಕುಂ ಜಮಿನಿಗೆ ತಾಲೂಕು ಕಚೇರಿಯಿಂದ ಪಹಣಿ ನೀಡಲು ತಾಲೂಕು ಕಚೇರಿಯ ಕಂದಾಯ ಅಧಿಕಾರಿಗಳು ಜನ ವಿರೋಧಿ ಧೋರಣೆ ಮಾಡುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದರು, ಈಚನೂರಿನ ಚಿಕ್ಕ ಸ್ವಾಮಿಗೌಡ ಎಂಬುವರು ಸಣ್ಣ ನೀರಾವರಿ ಇಲಾಖೆ ವತಿಯಿಂದ ನಾರಸಿ ಕಟ್ಟೆ ಕೆರೆಗೋಡಿ ಹಳ್ಳ ಕೆರೆಗೆ ನೀರು ಬಿಡಲು ಫಲವತ್ತಾದ ಭೂಮಿ ಅಗೆದು ಪೈಪ್ಲೈನ್ ಕಾಮಗಾರಿ ಮಾಡಿ ತೋಟವನ್ನು ಹಾಳು ಮಾಡಿದ್ದಾರೆ, ಸಣ್ಣ ನೀರಾವರಿ ಇಲಾಖೆಯಿಂದ ಯಾವುದೇ ಮಾಹಿತಿ ನೀಡದೆ ಪೈಪನ್ನು ಉಣಿ ತೆಂಗಿನ ಮರಗಳನ್ನು ಕಡಿದು ಹಾಕಿದ್ದಾರೆ ಎಂದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ನೀಡಿದರು, ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಗರಸಭೆಯ ಕನ್ಸರ್ವೆನ್ಸಿ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದಾರೆ ಎಂದು ತರಕಾರಿ ನಾಗರಾಜ್ ಎಂಬವರು ದೂರು ನೀಡಿದರು,
ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಗಮನಕ್ಕೆ ತರದೆ ನಗರಸಭಾ ಸದಸ್ಯರೊಂದಿಗೆ ಅಧಿಕಾರಿಗಳೊಂದಿಗೆ ಶಾಮಿಲಾಗಿ ಸಹೋದರನೊಬ್ಬ ನಿವೇಶವನ್ನು ಮಾರಾಟ ಮಾಡಿದ್ದಾನೆ ಎಂದು ಹಳೆ ಪಾಳ್ಯದ ರೂಪ ಶ್ರೀ ಎಂಬುವರು ನಗರಸಭಾ ಸದಸ್ಯ ಹಾಗೂ ಅಧಿಕಾರಿಗಳ ವಿರುದ್ಧ ದೂರು ನೀಡಿದರು, ಬಳುವ ನೆರಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನಿರ್ಮಿಸಿರುವ ಅಂಗಡಿಗಳನ್ನು ಕಡಿಮೆ ಬಾಡಿಗೆಗೆ ಗ್ರಾಮ ಪಂಚಾಯತ್ ಸದಸ್ಯರು ಶಾಮೀಲು ಆಗಿ ಗ್ರಾಮ ಪಂಚಾಯಿತಿಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ರೈತ ಸಂಘದ ಸಿದ್ದಯ್ಯ ಎಂಬುವರು ದೂರು ನೀಡಿದರು, ನಗರದ ಸ್ಟೆಲ್ಲಾ ಮೇರಿ ಶಾಲೆ ಹಿಂಭಾಗದಲ್ಲಿ ಈ ಹಿಂದಿನ ಹಳೆಯ ಬಡಾವಣೆಯಲ್ಲಿ ಓಡಾಡಲು ರಸ್ತೆ ಇಲ್ಲ ಎಂದು ಸ್ಥಳೀಯ ನಿವಾಸಿ ಶಾರದಮ್ಮ ಕೋದಂಡರಾಮಯ್ಯ ಅವರು ಲೋಕಾಯುಕ್ತಕ್ಕೆ ದೂರು ನೀಡಿದರು,
ನಗರ ಠಾಣೆ ಪೊಲೀಸರು ಅಪಘಾತ ನಡೆಸಿದ ವಾಹನದ ವಿರುದ್ಧ ದೂರು ನೀಡಿದರೆ ಪೊಲೀಸ್ ಠಾಣೆ ಸಿಬ್ಬಂದಿಗಳು ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಕಲ್ಲೇಗೌಡನ ಪಾಳ್ಯದ ಶರತ್ ನಗರ ಠಾಣೆ ಪೊಲೀಸರ ವಿರುದ್ಧ ದೂರು ನೀಡಿದರು ,ಬೆಳಗರ ಹಳ್ಳಿಯಲ್ಲಿ ದನದ ಕೊಟ್ಟಿಗೆ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ದೊರಕಿಸಿ ಕೊಡುವಂತೆ ಷಡಕ್ಷರಿ ಎನ್ನುವರು ದೂರು ನೀಡಿದರು, ನಗರದ ಎಸ್ ಎಸ್ ಪಿ ಯು ಕಾಲೇಜಿನಲ್ಲಿ ನಿಗದಿತ ಶುಲ್ಕಕ್ಕಿಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 65,000 ಹೆಚ್ಚುವರಿ ಶುಲ್ಕ ತೆಗೆದುಕೊಂಡಿದ್ದಾರೆ ಎಂದು ಪೋಷಕ ನಾಗೇಶ್ ಎಂಬುವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದರು,
ಹಾಲು ಕುರ್ಕೆಯ ಕೊಡಿಗೆಹಳ್ಳಿಯಲ್ಲಿ ಜಮೀನಿಗೆ ಟಿಸಿ ಅಳವಡಿಸಿ ಕೊಟ್ಟಿಲ್ಲ ಎಂದು ಕೆಪಿಟಿಸಿಎಲ್ ವಿರುದ್ಧ ಮಹೇಶ್ ಎಂಬುವರು ದೂರು ನೀಡಿದರು, ಒಟ್ಟು 14 ದೂರುಗಳಲ್ಲಿ ಎರಡು ದೂರುಗಳನ್ನು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಲೋಕಾಯುಕ್ತ ಡಿವೈಎಸ್ಪಿ ರವೀಶ್ ಸಮಸ್ಯೆ ಪರಿಹಾರ ಮಾಡುವಂತೆ ಸೂಚಿಸಿದರು ಲೋಕಾಯುಕ್ತ ಇನ್ಸ್ಪೆಕ್ಟರ್ ರಾಮರೆಡ್ಡಿ ತಹಸೀಲ್ದಾರ್ ಚಂದ್ರಶೇಖರ್ ನಗರಸಭೆ ಆಯುಕ್ತ ಉಮಾ ಕಾಂತ್ ಕೆಪಿಟಿಸಿಎಲ್ ಅಭಿಯಂತರ ಮನೋಹರ್ ಈ ವೇಳೆ ಉಪಸ್ಥಿತರಿದ್ದರು.