ತುರುವೇಕೆರೆ: ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಗೆ ಬಹಿಷ್ಕಾರ: ಶ್ರೀಗಳ ಧರಣಿಗೆ ಬೆಂಬಲ

ತುರುವೇಕೆರೆ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 09ರಂದು ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದು, ಇದರ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಭಾಗವಹಿಸದೆ ಸಭೆಯನ್ನು ಬಹಿಷ್ಕರಿಸಿ ಶ್ರೀಗಳ ಧರಣಿಗೆ ಬೆಂಬಲ ಸೂಚಿಸಿದ್ದೇವೆ ಎಂದು ಸಮಾಜದ ಅಧ್ಯಕ್ಷ ವಸಂತಕುಮಾರ್ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ದೊರೆಯಬೇಕಾದ ಸೌಲಭ್ಯ ಹಾಗೂ ಮೀಸಲಾತಿ ಬಗೆಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ೨೫೦ಕ್ಕೂ ಅಧಿಕ ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಶ್ರೀಗಳು ಧರಣಿ ನಡೆಸುತ್ತಿದ್ದರೂ ಯಾವುದೇ ಆಶ್ವಾಸನೆ ನೀಡದೆ ನಿರ್ಲಕ್ಷ್ಯ ಧೋರಣೆ ತೋರಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಗೆ ಹಾಜರಾಗದಿರಲು ಸಮಾಜ ತೀರ್ಮಾನಿಸಿದೆ ಎಂದರು. ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಗಂಗರಂಗಯ್ಯ, ಮುಖಂಡರಾದ ಆನಂದರಾಜು, ಬಾಣಸಂದ್ರ ಸೋಮಶೇಖರಯ್ಯ, ಶಂಕರಯ್ಯ, ಗೋವಿಂದಯ್ಯ, ಚಂದ್ರಯ್ಯ, ಕರಿಯಪ್ಪ, ಮುನಿರಾಜು, ಶೀಲಾಶಿವಪ್ಪನಾಯಕ, ಉಮಾ, ನಂಜುಂಡಪ್ಪ, ರಾಮಚಂದ್ರ, ಶಿವಣ್ಣ, ವೈರಮುಡಿ ಮುಂತಾದವರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!