ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ 

ಪಾವಗಡ: ಸಾರ್ವಜನಿಕರನ್ನು ಪದೇ ಪದೆ ಕಚೇರಿಗಳಿಗೆ ಅಲೆದಾಡಿಸು ದೂರುಗಳು ಬರುತ್ತಲೇ ಇವೆ ಇದರ ಬಗ್ಗೆ ಸರಿಪಡಿಸಿಕೊಳ್ಳಲುವಲ್ಲಿ ಅಧಿಕಾರಿಗಳು ವಿಫಲವಾಗುತ್ತಿದ್ದಾರೆ. ಬುಧವಾರ ಪಟ್ಟಣದ ನಿರೀಕ್ಷಿಣ ಮಂದಿರದಲ್ಲಿ ತುಮಕೂರು ಲೋಕಾಯುಕ್ತ ಇಲಾಖೆಯಿಂದ ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಮಾತನಾಡಿ ಅವರು ಪ್ರತಿಬಾರಿ ಲೋಕ ಯುಕ್ತ ಕುಂದುಕೊರತೆಗಳ ಸಭೆಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದೆ ಇರುವ ಬಗ್ಗೆ ಅನಮಾನ ಎಡೆಮಾಡಿಕೊಡುತ್ತಿದೆ.

ಬುಧವಾರ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಒಟ್ಟು ಹದಿನೆಂಟು ದೂರು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಎರಡು ಅರ್ಜಿಗಳು, ಗ್ರಾಪಂ.ಗಳು, ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಸಿಡಿಪಿಒ,ಪುರಸಭೆ. ಪೋಲೀಸ್ ಇಲಾಖೆ ಗಳಿಗೆ ಸೇರಿದ 18 ದೂರುದಾರರು ಅರ್ಜಿಗಳನ್ನು ಸಲ್ಲಿಸಿದರು.

ಪಾವಗಡ ತಾಲೂಕಿನ ಮಂಗಳವಾಡ ಗ್ರಾಪಂ  ಪಿಡಿಒ ಮೇಲೆ ದೂರು ನೀಡಿದ ಗ್ರಾಮಸ್ಥ. ದೇವರಾಯನ ರೊಪ್ಪ ಗ್ರಾಮದ ಸರ್ಕಾರಿ ಹಳ್ಳ ಮುಚ್ಚಿ ರೈತರಿಗೆ ತೊಂದರೆಯ ಬಗ್ಗೆ ದೂರು.

ಗುಜ್ಜನಡು ಗ್ರಾ.ಪಂ ನರೇಗಾ ಯೋಜನೆಗಳ ಕಾಮಗಾರಿ ಸಾಮಗ್ರಿಗಳ ವೆಚ್ಚ ನೀಡುವಲ್ಲಿ ಅವ್ಯವಹಾರದ ಬಗ್ಹೆ ದೂರು. 

ಗುಜ್ಜನರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ದುರಸ್ಥಿ ಕಾರ್ಯದಲ್ಲಿ ಅವ್ಯವಹಾರ ನಡೆದಿದೆ ಎಂದು ಹಿರಿಯ ಮುಖಂಡ ನರಸಿಂಹಪ್ಪ ದೂರು ಸಲ್ಲಿಸಿಸದರು.

ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಸಕಲಕ್ಕೆ ವೈದ್ಯಕೀಯ ಸಿಬ್ಬಂದಿ ಆಗಮಿಸುವುದಿಲ್ಲ. ಅನೇಕ ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಕೆ.ಆರ್.ಎಸ್‌ ಪಕ್ಕದ ಉಮೇಶ್ ದೂರು ಸಲ್ಲಿಸಿದರು.

ಪುರಸಭೆ ಕಚೇರಿಯ ಸಮಸ್ಯೆ ಗಳು ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕರೆಸಿ ಸಮಸ್ಯೆ ಬಗ್ಗೆ ಹರಿಸುವಲ್ಲಿ ಸೂಚಿಸಿದರು.ಈ ವೇಳೆ ಲೋಕಾಯುಕ್ತ ಇಲಾಖೆಯ ಸಿಬ್ಬಂದಿ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!