ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸಿ

ಕೊರಟಗೆರೆ :- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಹಾಗೂ ಅವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು ..

ತಾಲ್ಲೂಕಿನ ಸುತ್ತಮುತ್ತ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಆಲಿಸಿದ ಲೋಕಾಯುಕ್ತ ಸರ್ಕಲ್ ಇನ್ಸ್ ಪೆಕ್ಟರ್ ವಾಲಿಬಾಷಾ ರವರು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು ಉಳಿದ ಸಮಸ್ಯೆಗಳ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲಿಯೇ ತಿಳಿಸಿ ನಂತರ ಮಾತನಾಡಿ ಸಾರ್ವಜನಿಕರ ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳು ಆದಷ್ಟು ಬೇಗ ಬಗೆಹರಿಸಿ ಕೊಡಿ ಜನರು ಪದೇಪದೆ ಅಧಿಕಾರಿಗಳ ಬಲಿ ಅಲೆದಾಡುವುದು ಬೇಡ ಹಾಗೆ ಸಾರ್ವಜನಿಕರು ಅಧಿಕಾರಿಗಳ ಬಳಿ ಹೋಗಬೇಕಾದರೆ ಸಂಬಂಧಪಟ್ಟ ದಾಖಲಾತಿಗಳ ಸಮೇತ ಹೋಗಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು …

ಲೋಕಾಯುಕ್ತರ ಸಭೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಸಮಸ್ಯೆಗಳನ್ನು ದಾಖಲಿಸಿಕೊಂಡು ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಮುಖೇನ ಸಮಸ್ಯೆಗಳನ್ನ ಬಗೆಹರಿಸುವುದಾಗಿ ತಿಳಿಸಿದರು .

ಲೋಕಾಯುಕ್ತ ಡಿ.ಎಸ್ ಪಿ ರವೀಶ್ ಮಾತನಾಡಿ :- ಲೋಕಾಯುಕ್ತ ಅಧಿಕಾರಿಗಳ ಬಳಿ ಬರುವ ಸಾರ್ವಜನಿಕರ ಸಮಸ್ಯೆಗಳು ಸಣ್ಣಸಣ್ಣ ಸಮಸ್ಯೆಗಳಾಗಿರುತ್ತವೆ ಅದನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಥವಾ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಜನರನ್ನು ತಮ್ಮ ಕಚೇರಿಗಳಿಗೆ ಅಲೆದಾಡಿ ಬಳಸಿಕೊಳ್ಳದೆ ಸಣ್ಣ ಸಮಸ್ಯೆಗಳನ್ನು ಬಗೆಹರಿಸಿ ಕೊಡಿ ಬಹಳ ದೂರದಿಂದ ಪುಟ್ಟ ಗ್ರಾಮಗಳಿಂದ ಬಡ ಜನರು ಬರುತ್ತಾರೆ ಅವರು ಕಚೇರಿಗಳಿಗೆ ಬರಲು ಅವರ ಬಳಿ ಹಣವೂ ಇರುವುದಿಲ್ಲ ಅಂಥವರ ಸಮಸ್ಯೆ ಚಿಕ್ಕದಾಗಿರುತ್ತದೆ ಅದನ್ನು ದೊಡ್ಡದಾಗಿ ಮಾಡುವವರು ಅಧಿಕಾರಿಗಳೇ ಬಂದಿರುವ ಸಾರ್ವಜನಿಕರ ಸಮಸ್ಯೆಗಳನ್ನು ನಾವು ಇಂದು ಗಮನಿಸಿದ್ದೇವೆ ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಬಗೆಹರಿಸುತ್ತೇವೆ ಎಂದು ತಿಳಿಸಿ ಅಷ್ಟೇ ಅಲ್ಲ ನಾವು ಕೂಡ ಸ್ಥಳೀಯ ತಹಶೀಲ್ದಾರ್ ರವರ ಜೊತೆ ಕೆಲವು ರೈತರ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡುತ್ತೇವೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು …

ಲೋಕಾಯುಕ್ತ ಅಧಿಕಾರಿಗಳ ಮುಂದೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ನಹಿದಾ ಜಮ್ ಜಮ್ ರವರು ಮಾತನಾಡಿ ..

ಇಲ್ಲಿ ನೀಡಿರುವ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಈಗಾಗಲೇ ನಾನು ಗಮನ ಹರಿಸಿದ್ದೇನೆ ಹಾಗೆಯೇ ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಿಳಿಸಿದ್ದೇನೆ ಇನ್ನು ಕೆಲವೇ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು ..

ಇದೇ ಸಂದರ್ಭದಲ್ಲಿ ಡಿ,ಎಸ್ ಪಿ ರವೀಶ್, ಇನ್ಸ್ ಪೆಕ್ಟರ್ ರಾಮರೆಡ್ಡಿ ,ತಾಲ್ಲೂಕು ದಂಡಾಧಿಕಾರಿಗಳಾದ ನಹೀದಾ ಜಮ್ ಜಮ್ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರು ಹಾಜರಿದ್ದರು …

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!