ಗುಬ್ಬಿ ತಾಲ್ಲೂಕ್ ಆಡಳಿತದಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ- ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಜನ್ಮದಿನ ಆಚರಣೆ


ಗುಬ್ಬಿ: ತಹಸೀಲ್ದಾರ್ ಬಿ ಆರತಿ ಹಾಗೂ ಗ್ರೇಡ್ 02 ತಹಸಿಲ್ದಾರ್ ಶಶಿಕಲಾ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ- ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಜನ್ಮದಿನ ಆಚರಿಸುವ ಮೂಲಕ ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಲಾಯಿತು.
ತಹಸಿಲ್ದಾರ್ ಬಿ. ಆರತಿ ಮಾತನಾಡಿ
ಎಲ್ಲಾ ಸವಲತ್ತುಗಳು ಇದ್ದರೂ ಸಹ ಸರಳ ಜೀವನವನ್ನು ಮೈಗೂಡಿಸಿಕೊಂಡು ದೇಶಕ್ಕೆ ಮಾದರಿಯಾದ ಇಬ್ಬರೂ ದೇಶಪ್ರೇಮಿಗಳಾದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಇಂದು ದೇಶದೆಲ್ಲೆಡೆ ಆಚರಿಸುತ್ತಿದ್ದು ಅವರ ಸರಳ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದ ಅವರು ಗಾಂಧಿ ಜಯಂತಿಯಂದು ಬಾಪುಜಿ ಅವರ ಶಾಂತಿಯ ತತ್ವಗಳು ಜಾಗತಿಕವಾಗಿ ಈಗಲೂ ಪ್ರಸ್ತುತವಾಗಿದ್ದು, ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಿವೆ ಎಂದು ತಿಳಿಸಿದ ಅವರು ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿಯವರ ಜನ್ಮದಿನದಂದು ಅವರಿಗೆ ನಮನ ಸಲ್ಲಿಸುವ ಮೂಲಕ ಮೌಲ್ಯಗಳು ಮತ್ತು ತತ್ವಗಳನ್ನು ಒಳಗೊಂಡಿದ್ದ ಅವರ ಜೀವನವು ಈ ದೇಶ ವಾಸಿಗಳಿಗೆ ಸದಾಕಾಲಕ್ಕೂ ಸ್ಫೂರ್ತಿಯ ಮೂಲವಾಗಿ ಉಳಿಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಪರಕೀಯರ ಕಪಿಮುಷ್ಠಿಯಲ್ಲಿದ್ದ ನಮ್ಮ ದೇಶದ ಆಡಳಿತವನ್ನು ಹಿಂಸೆ ಮಾರ್ಗ ತೋರದೆ ಅಹಿಂಸಾ ಮಾರ್ಗ ಅನುಸರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸರಳ ಸಜ್ಜನ ವ್ಯಕ್ತಿ ಇಂದಿಗೂ ಮಹಾತ್ಮಾರಾಗಿ ಉಳಿದಿರುವವರು ಗಾಂಧೀಜಿಯವರು ಅದರಂತೆ ದೇಶದ ಉನ್ನತ ಸ್ಥಾನದಲ್ಲಿದ್ದರೂ ದೇಶದ ಸೈನಿಕ ಮತ್ತು ರೈತರ ಹಿತಕಾಯುವ ಮೂಲಮಂತ್ರವಾದ ಜೈಜವಾನ್ – ಜೈಕಿಸಾನ್ ಗೆ ಜೈ ಎಂದು ಹೇಳಿ ಸರಳಜೀವನಕ್ಕೆ ಮತ್ತೊಂದು ಹೆಸರೇ ಲಾಲ್ ಬಹಾದ್ದೂರ್ ಶಾಸ್ತ್ರಿ ಎನ್ನಬಹುದಾಗಿದೆ ಇಂತಹ ಸರಳ ವ್ಯಕ್ತಿತ್ವದ ಮಹಾಪುರುಷರು ಜನ್ಮಿಸಿದ ದೇಶ ನಮ್ಮದು ಇಂತವರನ್ನು ಪಡೆದ ನಾವೇ ಪುಣ್ಯವಂತರು ಇವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ಆಡಳಿತ ವತಿಯಿಂದ ಸ್ವಚ್ಚತೆ ಕಾರ್ಯವನ್ನು ತಮ್ಮ ಕಚೇರಿಯ ಆವರಣದಲ್ಲಿ ಬೆಳೆದಿರುವ ಕಳೆ ಕಡ್ಡಿ ಕಸವನ್ನು ತೆಗೆದು ಸ್ವಚ್ಛತೆ ಮಾಡಿದರೆ, ಬಿಜೆಪಿ ವತಿಯಿಂದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದ ಕಾಂಪೌಂಡ್ ನಲ್ಲಿ ಕಸ ಕಡ್ಡಿ ತೆಗೆದು ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ವಾಹನಕ್ಕೆ ಹಾಕುವ ಮೂಲಕ ಸ್ವಚ್ಚತಾ ಆಂದೋಲನ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಖಾನ್, ಶ್ರೀರಂಗ, ಕಂದಾಯ ನಿರೀಕ್ಷಕ ರಮೇಶ್ ಕುಮಾರ್, ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!