ಕೊರಟಗೆರೆ :- ಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿಯ ಆಚರಣೆಯಲ್ಲಿ ಚಿಂತಕರು ಸಾಹಿತಿಗಳು ಆದಂಥ ಉಡುಪಿ ಅಕ್ಬರ್ ಅಲಿ ಹಾಗೂ ನೆರೆದಿದ್ದ ಎಲ್ಲಾ ಕಣ್ಣೀರು ಮಹಾನ್ ವ್ಯಕ್ತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು ..
ಚಿಂತಕರು ಸಾಹಿತಿಗಳು ಆದ ಅಕ್ಬರ್ ಅಲಿ ಮಾತನಾಡಿ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿಗಳನ್ನು ನಾವು ಪ್ರತಿನಿತ್ಯವೂ ನೆನೆಯಬೇಕು ಏಕೆಂದರೆ ಅಂದು ಆ ವ್ಯಕ್ತಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡದೆ ಇದ್ದರೆ ಇಂದು ನಾವೆಲ್ಲರೂ ಬ್ರಿಟಿಷರ ಗುಲಾಮಗಿರಿ ಯಲ್ಲಿ ಬಾಳಬೇಕಿತ್ತು ಅಲ್ಲವೇ ಯೋಚನೆ ಮಾಡಬೇಕಾದ ಸಂಗತಿ
ತಾಯಿಯ ಗರ್ಭದಲ್ಲಿ ಜನಿಸುವ ಮಗು ಎಂದಿಗೂ ನ ಆ ಜಾತಿ ಈ ಜಾತಿ ಎಂದು ಹೇಳಲಿಲ್ಲ ಜಾತಿ ಭೇದಗಳನ್ನು ಮರೆತು ಜನಿಸಿದ ಮಗು ಮುಂದೊಂದು ದಿನ ಇಂತಹ ಮಹಾನ್ ವ್ಯಕ್ತಿಗಳು ಆಗಬೇಕು ಎಂದು ಎಲ್ಲಾ ತಂದೆ ತಾಯಿಗಳು ಆಶಿಸಬೇಕು ಇಲ್ಲವೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಇಲ್ಲಿ ಇರುವುದು ಎರಡೇ ಜಾತಿ ಒಂದು ಗಂಡು ಒಂದು ಹೆಣ್ಣು ಮೇಲೆ ಇರುವ ಭಗವಂತನನ್ನು ನಂಬಿ ನೀವು ಮಾಡುವ ಕೆಲಸದಲ್ಲಿ ಶ್ರದ್ಧೆ ತೋರಿಸಿ ಇರುವಷ್ಟು ದಿನ ಎಲ್ಲರೂ ನಮ್ಮವರು ಎಂದು ಬದುಕೋಣ ಎಂದು ತಿಳಿಸಿದರು.
ಗ್ತೇಡ್ 2-ತಹಶೀಲ್ದಾರ್ ನರಸಿಂಹಮೂರ್ತಿ ಮಾತನಾಡಿ :-
ಅಕ್ಬರ್ ಅಲಿ ಅವರ ಮಾತಿನಂತೆ ನಾವೆಲ್ಲರು ಒಂದಾಗಿ ಬಾಳಬೇಕು ಯಾವುದೇ ಜಾತಿ ಧರ್ಮಕ್ಕೆ ತಲೆಕೆಡಿಸಿಕೊಳ್ಳದೆ ನಾವೆಲ್ಲರೂ ಭಾರತಮಾತೆಯ ಮಕ್ಕಳಾಗಿರಬೇಕು ನಮ್ಮ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುತ್ತ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ನಮ್ಮ ಜೀವನ ಸಾಗಿಸಬೇಕು ಶಾಂತಿ ಶಿಸ್ತು ಸಂಯಮದಿಂದ ಅಧಿಕಾರಿಗಳು ಸಾರ್ವಜನಿಕರ ಜತೆ ವರ್ತಿಸಬೇಕು ಆಗಲೇ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಗೌರವಿಸಿದಂತಾಗುತ್ತದೆ ಎಂದು ತಿಳಿಸಿದರು ..
ಇದೇ ಸಂದರ್ಭದಲ್ಲಿ ತಾಲೂಕು ಕಚೇರಿಯ ಎಲ್ಲ ಅಧಿಕಾರಿಗಳು ಹಾಗೂ ಪಟ್ಟಣದ ವಿವಿಧ ಧರ್ಮದ ಎಲ್ಲ ಮುಖಂಡರು ,ಚಿಂತಕರು, ಸಾಹಿತಿಗಳು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು ..
ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ