ಪಾವಗಡ: ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ರವರ ಜಯಂತಿ ಅಂಗವಾಗಿ ಜೆಡಿಎಸ್ ವರಿಷ್ಠರ ಮಾರ್ಗದರ್ಶನದಂತೆ ತಾಲೂಕಿನಲ್ಲಿ ಸಾಮರಸ್ಯಕ್ಕಾಗಿ ಸತ್ಯಾಗ್ರಹ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ತಿಳಿಸಿದರು.
ಭಾನುವಾರ ಪಟ್ಟಣದ ಎಸ್.ಎಸ್.ಕೆ ವೃತ್ತದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ಸಾಮರಸ್ಯಕ್ಕಾಗಿ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ವೇಳೆ ಗಾಂಧಿಯವರ ಅಹಿಂಸಾ ಮಾರ್ಗ, ಸ್ವಾತಂತ್ರ್ಯ ಹೋರಾಟದ ಪರಿ, ಭವ್ಯ ಭಾರತ ದೇಶಕ್ಕೆ ಗಾಂಧಿಜಿಯವರ ಹೋರಾಟ, ಸಾಧನೆ ಮತ್ತು ಕೊಡುಗೆಗಳ ಕುರಿತು ಸ್ಮರಿಸಲಾಗಿತು.
ತಾಲೂಕು ಜೆಡಿಎಸ್ ಘಟಕದಿಂದ ಎಸ್ ಎಸ್ ಕೆ ವೃತ್ತದಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ೧೧:೦೦ ಗಂಟೆಯಿಂದ ೧೨:೦೦ ಗಂಟೆವರೆಗೂ ಸತ್ಯಾಗ್ರಹ ಮುಂದುವರೆಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾದ್ಯಕ್ಷರಾದ ಎನ್. ತಿಮ್ಮಾರೆಡ್ಡಿ, ತಾಲೂಕು ಅಧ್ಯಕ್ಷ ಬಲರಾಮರೆಡ್ಡಿ, ಗೌರವಾದ್ಯಕ್ಷ ರಾಜಶೇಖರ್, ಎನ್ ಎ ಈರಣ್ಣ, ಮುಖಂಡರಾದ ರೆಡ್ಡಿ, ಸೊಗಡು ವೆಂಕಟೇಶ್, ಒ.ರಾಮಾಂಜಿನೇಯುಲು, ಮನುಮಹೇಶ್, ತಾಳೆಮರದಹಳ್ಳಿ ಅಂಜನ್, ಗುಟ್ಟಹಳ್ಳಿ ಮಣಿ, ಮಾರುತಿ ಪಾಳೇಗಾರ, ಜಿ.ಎ.ವೆಂಕಟೇಶ್. ಶಿವಕುಮಾರ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.