ವಾಲ್ಮೀಕಿ ಸಮುದಾಯಕ್ಕೆ ಅಧಿಕಾರಿಗಳ ನಿರ್ಲಕ್ಷ, ಪೂರ್ವ ಭಾವಿ ಸಭೆ ಬಹಿಷ್ಕಾರ

ಕೊರಟಗೆರೆ:- ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಪೂರ್ವ ಭಾವಿ ಸಭೆಯನ್ನು ಸಮಾಜ ಕಲ್ಯಾಣ ಇಲಾಖೆ ಕರೆದಿದ್ದ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಆಗಿರುವುದನ್ನು ಖಂಡಿಸಿ ಸಭೆಯನ್ನು ಬಹಿಷ್ಕರಿಸಿದರು.

ಸಭೆಯಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಹಾಜರಿದ್ದು ವಾಲ್ಮೀಕಿ ಸಮುದಾಯಕ್ಕೆ ಅಗೌರವ ಸೂಚಿಸಿದ್ದಾರೆ.

ತಾಲೂಕು ಕಚೇರಿ ಅಕ್ಕ-ಪಕ್ಕದಲ್ಲಿರುವ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ಇದ್ದುಕೊಂಡೆ ಸಭೆಗೆ ಗೈರಾಗಿದ್ದರು, ಸಭೆಯನ್ನು ಬಹಿಷ್ಕರಿಸಿ ಹೊರ ಬಂದ ಕೆಲವೇ ಕ್ಷಣಗಳಲ್ಲಿ ಪ್ರತಿಭಟಿಸುವ ಸ್ಥಳಕ್ಕೆ ಧಾವಿಸಿ ಮುಖಂಡರುಗಳನ್ನು ಮನವೊಲಿಸಲು ಯತ್ನಿಸಿದ್ದ ಘಟನೆ ನಡೆಯಿತು.

ನಂತರ ಮಾತನಾಡಿದ ಸಮುದಾಯದ ಮುಖಂಡ ಕೆ ಆರ್ ಓಬಳರಾಜು ತಾಲೂಕಿನಲ್ಲಿ ಸುಮಾರು 25 ಇಲಾಖೆಗಳಿದ್ದು, ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಹಾಜರಿದ್ದಾರೆ.
ದಿನಾಂಕ 9 ರಂದು ಸರ್ಕಾರದಿಂದ ಆಚರಿಸುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ಜಯಂತಿಯನ್ನು ಪ್ರಕಟಿಸಿದ ಸುಮಾರು 11 ವರ್ಷಗಳಿಂದಲೂ ಕೊರಟಗೆರೆ ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಮೀನಮೇಷ ಎಣಿಸುತ್ತಿರುವುದ್ದಕ್ಕೆ ಅಧಿಕಾರಿಗಳ ಮೇಲೆ ಗರಂ ಆದರು. ಸುಮಾರು ವರ್ಷಗಳ ಹಿಂದೆಯೇ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಸರ್ಕಾರವು ಸುಮಾರು 1 ಕೋಟಿ ರೂ ಗಳನ್ನು ಮಿಸಲ್ಲಿಟ್ಟಿದ್ದು ಇಲ್ಲಿಯವರೆಗೆ ಕೆ ಆರ್ ಐ ಡಿ ಎಲ್ ಸಂಸ್ಥೆಯು ಕಾಮಗಾರಿಯನ್ನು ಪ್ರಾರಂಭ ಮಾಡಿರುವುದಿಲ್ಲ ಹಾಗೂ ಯಾವ ಸಭೆಗಳಿಗೂ ಕೆ ಆರ್ ಐ ಡಿ ಎಲ್ ಸಂಸ್ಥೆಯ ಎಇಇ ಹಾಜರಾಗುವುದಿಲ್ಲ, ಮೂಲಭೂತ ಸೌಕರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿರುವ ಮಾಹಿತಿ ತಿಳಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾಯಕ ಮುಖಂಡರುಗಳಾದ ಸಂಜೀವಪ್ಪ, ಲಾರಿ ಸಿದ್ಧಪ್ಪ, ಪುಟ್ಟ ನರಸಯ್ಯ,ಕೇಶವ್ ಮೂರ್ತಿ,ಮೀಸೆ ಗಂಗಾಧರಪ್ಪ, ಕೆ ವಿ ಮಂಜುನಾಥ್, ರಮೇಶ್ ಕೆ ಜಿ, ಲಕ್ಷ್ಮಿ ನಾರಾಯಣ್, ಸತ್ಯ ನಾರಾಯಣ್,ರಂಗನಾಥ್,ಗೊಂದಿಹಳ್ಳಿ ರಂಗರಾಜು,ಕಾರ್ ಮಹೇಶ್,ಕವಿತಾ ನರಸಪ್ಪ ಸೇರಿದಂತೆ ಸಮುದಾಯದ ಮುಖಂಡರುಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!