ನೀರು ನಮ್ಮ ಭಾಗಕ್ಕೆ ಅತೀ ಮುಖ್ಯವಾದುದ್ದು: ಡಾ. ಶ್ರೀ ನಂಜಾವದೂತ ಸ್ವಾಮಿಜಿ

ಬರಗೂರು ; ನೀರು ನಮ್ಮ ಭಾಗಕ್ಕೆ ಅತೀ ಮುಖ್ಯವಾದುದ್ದು ನೀರಿನ ಬೆಲೆ ನಮಗೆ ತಿಳಿದಿದ್ದು ನೀರಿಗಾಗಿ 25 ವರ್ಷಗಳಿಂದಲೂ ಹೋರಾಟ ಮಾಡಿದ್ದೇವೆ, ಚಿತ್ರದುರ್ಗ, ತುಮಕೂರು ಚಿಕ್ಕಬಳ್ಳಪುರ,ಕೋಲಾರ,ಬೆಂಗಳೂರು ಗ್ರಾಮಾಂತರ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರು ಬೇಕು ಎನ್ನುವ ಬೇಡಿಕೆ ಸರ್ಕಾರಗಳು ಸ್ವಂದಿಸಿ ಅಪರ್ ಭದ್ರ, ಎತ್ತಿನ ಹೋಳೆ ಮಂಜೂರು ನೀಡಿದ್ದು ಕೆಲಸವು ನಡೆಯುತ್ತಿದ್ದು ಈ ಭಾಗದ ಜಿಲ್ಲೆಗಳ ಚಿತ್ರಣ ಬಹಳ ದೊಡ್ಡ ಬದಲಾವಣೆ ಕಣಲಿದೆ, ಇದಕ್ಕೆ ನಮ್ಮ ಜನ ಶ್ರಮ ಜೀವಿಗಳಾದಾಗ ಮಾತ್ರ ಅದು ಸಾದ್ಯ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಂಜಾವದೂತ ಸ್ವಾಮಿಜಿ ಹೇಳಿದರು.

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಯಾದಲಡಕು ಗ್ರಾಮದಲ್ಲಿ ಬುಧವಾರ ಬಯಲು ಸೀಮೆ ಅಭಿವೃದ್ದಿ ಯೋಜನೆಯಿಂದ ಯಾದಲಡಕು ಕೆರೆ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಮತ್ತು ಡ್ಯಾಮ್‌ನ ಪುನಶ್ವೇತನಕ್ಕೆ ಗುದ್ದಲಿಪೂಜೆ ನೇರವೇರಿಸಿ ಮಾತನಾಡಿದರು

ಯಾರಿಗೂ ಸಹ ಶ್ರಮಜೀವನದ ಕೆಲಸ ಬೇಕಿಲ್ಲ ಸೌಕ್ಯವಾದ ಜೀವನ ಕಾಣ ಬಯಸಿರುವ ಜನರ ಅಪೇಕ್ಷೆಯಾಗಿದ್ದು ಬಹಳ ಹೋರಾಟದ ಮೂಲಕ ನೀರನ್ನು ತರಲಾಗಿದೆ, ಮುಂದಿನ ದಿನಗಳಲ್ಲಿ ಮನುಷ್ಯ ಅಭಾವವನ್ನು ಗುಣಮಟ್ಟದ ಆಹಾರದಲ್ಲಿ ಅಭಾವವನ್ನು ಹೆದರಿಸುವನು, ರೈತರನ್ನು ಸ್ಟ್ರಾಂತನ್ ಮಾಡುವಂತ ನೀತಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೂ ಆಗದಿದ್ದರೆ ಕೃಷಿಗೆ ಹೆಚ್ಚಿನ ಓತ್ತನ್ನು ನೀಡಿ ನೀತಿಗಳನ್ನು ಮಾಡದಿದ್ದಾರೆ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಯಲ್ಲಿ ನಮಗೆ ಹಿನ್ನೇಡೆ ದೇಶಕ್ಕೆ ಆಗಲಿದೆ,ಅಪಾಯದ ಮುಸ್ಸೂಚನೆಯನ್ನು ತಜ್ಞರು ನೀಡಿದ್ದಾರೆ, ಇಂತಹ ಕೆಲಸಗಳನ್ನು ಉಪಯೋಗಿಸುವ ಗುಣಮಟ್ಟದ ಕೆಲಸ ಮಾಬೇಕಿದೆ,

ಭದ್ರದಿಂದ 22 ಟಿಎಂಸಿ ನೀರು ನಮಗೆ ಬರಬೇಕಿದ್ದು ತುಂಗಾದಿಂದ ಭದ್ರಕ್ಕೆ 17 ಟಿಎಂಸಿ ನೀರು ಸಹ ಬರಬೇಕಿದೆ ಇಲ್ಲಿವರೆಗೂ ಆಯೋಜನೆ ಕಾರ್ಯ ಇನ್ನು ಆರಂಭವಾಗಿಲ್ಲ ಮಳೆಯಾಗುತ್ತಿರುವ ಕಾರಣ ನಮಗೆ ತೀವ್ರತರಹ ಯೋಜನೆಯ ಅವಶ್ಯಕತೆ ಅರ್ಥವಾಗುತ್ತಲಿಲ್ಲ, ತುಂಗಾದಿಂದ ಭದ್ರಕ್ಕೆ ಲೀಫ್ಟ್ ಮಾಡುವ ಯೋಜನೆ ಬಂದರೆ ನಮಗೆ ಶಾಶ್ವತ ವಾದ ನೀರಾವರಿ ಸಾಧ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ ಯಾದಲಡಕು ಗ್ರಾಮದಲ್ಲಿ ಪದೆ ಪದೆ ಹೋಡೆದು ಹೋಗಿತ್ತಿದ್ದ ಕೆರೆಯ ಅಭಿವೃದ್ದಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಬಯಲು ಸೀಮೆ ಅಭಿವೃದ್ದಿ ಯೋಜನೆಯಿಂದ ಅನೂಧಾನದಲ್ಲಿ 50 ಲಕ್ಷ ರೂ ಕೆರೆ ಅಭಿವೃದ್ದಿಗೆ ಪುನರ್ ನಿರ್ಮಾಣ ಕಾರ್ಯಮಾಡಲಾಗುತ್ತಿದೆ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆಕಿಸು ಸುದ್ದೇಶದಿಂದ ಗ್ರಾಮೀಣ ಶಾಲೆಗಳ ಅಭಿವೃದ್ದಗೆ ಹೆಚ್ಚಿನ ಓತ್ತು ನೀಡಿ ಶಾಲೆಗಳಿಗೆ ಹೆಚ್ಚು ಅನುಧಾನ ತಂದು ನಿರ್ಮಾಣ ಮಾಡುವ ಕೆಲಸವು ನಡೆಯಿತ್ತಿದೆ ಎಂದರು

ಇಂಜನಿಯರ್‌ಗಳಾದ ಸುಬ್ರಮಣ್ಯ ಸ್ವಾಮಿ, ಶ್ರೀನಿವಾಸ್, ಅಶ್ವಥ್ ರೆಡ್ಡಿ, ಭಾಜಪ ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಯಾದಲಡಕು ರಂಗನಾಥಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಯರಾಮಯ್ಯ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ ದೇವರಾಜು, ಡೈರಿ ಅಧ್ಯಕ್ಷೆ ಭಾಗ್ಯಮ್ಮ ದೇವರಾಜು, ಗ್ರಾಪಂ ಸದಸ್ಯ ರಂಗಧಾಮ, ಮಹೇಶ್, ಪಾಂಡುರಂಗಪ್ಪ, ಬಲರಾಮ್, ಮಹಾಲಿಂಗಪ್ಪ, ಹೊಸಹಳ್ಳಿ ಸಿದ್ದಲಿಂಗಪ್ಪ,ಚಿಕ್ಕಣ್ಣ, ಕರಿಯಣ್ಣ, ಹುಲಿಕುಂಟೆ ರಮೇಶ್, ಗೋಪಿಕುಂಟೆ ಮೂರ್ತಿ ಇನ್ನೂತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!