ಶ್ರೀ ಎಸ್ ಷಣ್ಮುಖ ಪ್ರಾಂಶುಪಾಲರು ಹಾಗೂ
ಡಾ. ಎ ಓ ನರಸಿಂಹಮೂರ್ತಿ ಉಪನ್ಯಾಸಕರು ಹಾಗೂ
ಶಿಬಿರ ಅಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆಯ
ವಾರ್ಷಿಕ ವಿಶೇಷ ಶಿಬಿರ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ತುಮಕೂರು
ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವಾರ್ಷಿಕ ವಿಶೇಷ ಶಿಬಿರವನ್ನು ಬೆಳಗುಂಬ ಗ್ರಾಮದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆಸುತ್ತಿರುವ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ನಡೆಸಲಾಯಿತು.
ಏಳು ದಿನಗಳ ಕಾಲ ನಡೆದ ಈ ಶಿಬಿರ ದಲ್ಲಿ ಐವತ್ತು ವಿದ್ಯಾರ್ಥಿನಿಯರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ಈ ಶಿಬಿರದ ಮಾರ್ಗದರ್ಶಕರಾಗಿದ್ದವರು ಪ್ರಾಂಶುಪಾಲರಾದ ಎಸ್ ಷಣ್ಮುಖ ರವರು. ಶಿಬಿರ ಅಧಿಕಾರಿಗಳಾಗಿದ್ದವರು ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿರುವ ಡಾ. ಏ ಓ ನರಸಿಂಹಮೂರ್ತಿ ರವರು.
ಪ್ರತಿದಿನವೂ ರಾಷ್ಟ್ರೀಯ ಸೇವಾ ಯೋಜನೆಯ ದ್ವಜಾರೋಹಣದೊಂದಿಗೆ ಶಿಬಿರದ ಕ್ರಿಯಾ ಚಟುವಟಿಕೆಗಳು ಆರಂಭವಾಗುತ್ತಿದ್ದವು ವಿದ್ಯಾರ್ಥಿನಿಯರೇ ದ್ವಜವನ್ನು ಕಟ್ಟುವ ಹಾರಿಸುವ ಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ವಿಶೇಷ. ನಂತರ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶ್ರೀ ರಮೇಶ್ ರವರು ಶಿಕ್ಷಕರು ಸರ್ಕಾರಿ ಪ್ರಾಥಮಿಕ, ಶ್ರೀ ಪ್ರಕಾಶ್ ರವರು ವ್ಯವಸ್ಥಾಪಕರು ಎಸ್ ಬಿ ಐ ಬ್ಯಾಂಕ್ ತುಮಕೂರು, ಶ್ರೀ ಲೋಕೇಶ್ ಉಪನ್ಯಾಸಕರು ಸರ್ಕಾರಿ ಐ ಟಿ ಐ ಕಾಲೇಜು ತುಮಕೂರು, ಕುಮಾರಿ ವಂದನ ಮತ್ತು ದೀಪಶ್ರೀ ಮುಂತಾದವರ ಮಾರ್ಗದರ್ಶನದಲ್ಲಿ ಯೋಗಭ್ಯಾಸಗಳು ನಡೆಯುತ್ತಿದ್ದವು. ದಿನಾಂಕ 2 ಅಕ್ಟೋಬರ್ 2022 ರಂದು ಬಹಳ ಅರ್ಥಪೂರ್ಣವಾಗಿ ಗಾಂಧೀಜಿಯಂತಿಯನ್ನು ಆಚರಿಸಲಾಯಿತು
. ಈ ಆಚರಣೆಯಲ್ಲಿ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಭಾಗವಹಿಸಿದ್ದು ವಿಶೇಷ ಈ ಶಾಲೆಯ ಎಲ್ಲ ಉಪನ್ಯಾಸಕರು ಶಿಬಿರಾರ್ಥಿಗಳನ್ನು ಪ್ರಶಂಶಿಸಿದರು ,ಪವಿತ್ರ ಅರಿವು, ಎಂಬ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕರಾದ ಶ್ರೀಮತಿ ಭಾಗ್ಯ ರವರು ವಿದ್ಯಾರ್ಥಿನಿಯರ ಮಾಸಿಕ ಋತುಮತಿ ಸಂಬಂಧಿತ ಸಮಸ್ಯೆಗಳಿಗೆ ಜಾಗೃತಿಯನ್ನು ಮೂಡಿ ಸುತ್ತ ಪರಿಹಾರಗಳನ್ನು ಸೂಚಿಸುತ್ತಿದ್ದರು.
ಬೆಳಗಿನ ಉಪಹಾರದ ನಂತರ ಪ್ರತಿ ದಿನವೂ ಸಸಿಗಳನ್ನು ನೆಡುವ ಮೂಲಕ ಶ್ರಮದಾನವನ್ನು ಮಾಡಲಾಯಿತು ರಸ್ತೆ ಮತ್ತು ಚರಂಡಿಯನ್ನು ಸ್ವಚ್ಛಗೊಳಿಸುವ ಮೂಲಕ ಕಾಂಪೌಂಡನ್ನು ನಿರ್ಮಿಸುವ ಕೆಲಸ ನಡೆಯಿತು.
ಮಧ್ಯಾಹ್ನದ ಊಟದ ನಂತರ
ಶಿಬಿರದಲ್ಲಿ ಕಾನೂನು, ಶಿಕ್ಷಣ, ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆಗಳು ಕುರಿತು ವಿದ್ವಾಂಸರಿಂದ ಉಪನ್ಯಾಸಗಳು ಏರ್ಪಡಿಸಲಾಗಿತ್ತು.
ಶ್ರೀ ಎಂಎನ್ ಮಂಜುನಾಥ್ ರವರು ಹಿರಿಯ ಕೆ.ಎ.ಎಸ್ ಅಧಿಕಾರಿ ಭೂಸ್ವಾದಿನಾಧಿಕಾರಿಗಳು ಎತ್ತಿನಹೊಳೆ ಯೋಜನೆ ತುಮಕೂರು ರವರು ಭಾಗವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿಸಿದರು.
ಶ್ರೀ ಜಯಣ್ಣ ಎಚ್ ಆರೋಗ್ಯ ಶಿಕ್ಷಣ ಅಧಿಕಾರಿಗಳು ತಾಲೂಕು ಆರೋಗ್ಯ ಇಲಾಖೆ ತುಮಕೂರು ರವರು ಭಾಗವಹಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಮೇಶ್, ಶ್ರೀಮತಿ ಪುಷ್ಪ. ಶ್ರೀ ಕಿಶೋರ್ ಕುಮಾರ್ ರವರು ಕಾನೂನು ಅರಿವು ಮೂಡಿಸಿದರು.
ಎಮ್ ಎಚ್ ನಾಗರಾಜು. ಡಾ. ಪ್ರಾಂಶುಪಾಲರಾದ ಎಂ ರಾಜಯ್ಯ, ರವಿಕುಮಾರ್ ನಿಹ, ಡಾ. ಪುಟ್ಟರಾಜು, ಡಾ. ಕೆ ವಿ ಮುದ್ದು ವೀರಪ್ಪ, ಕಾಂತರಾಜು ಗುಪ್ಪಟ್ನಾ, ಮಧುಸೂದನ ಬೈಚೇನಹಳ್ಳಿ, ಶ್ರೀನಿವಾಸ ದೈಹಿಕ ಶಿಕ್ಷಣ ನಿರ್ದೇಶಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾವಿ ಮುಂತಾದವರು ಭಾಗವಹಿಸಿದ್ದರು
ಸಂಜೆಯ ಚಹಾ ನಂತರ ವಿದ್ಯಾರ್ಥಿಗಳು ವಿರಮಿಸುತ್ತಿದ್ದರು. ಪ್ರತಿದಿನ ಸಂಜೆ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿನಿಯರಲ್ಲಿದ್ದ ಸೂಕ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಸಹಕಾರಿಯಾಗಿತ್ತು ಪ್ರಾಂಶುಪಾಲರಾದ ಶ್ರೀಮತಿ ಎನ್ ಅಕ್ಕಮ್ಮರವರು ಹಾಗೂ ಗಂಟಲಗೆರೆ ಸಣ್ಣ ಹೊನ್ನಯ್ಯನವರು ಮತ್ತು ಭಜನಾ ತಂಡಗಳು ಭಾಗವಹಿಸಿದ್ದು ವಿಶೇಷ.
ರಾತ್ರಿ ಊಟದ ನಂತರ ಶಿಬಿರ ಅಧಿಕಾರಿಗಳು ಮತ್ತು ಶಿಬಿರಾರ್ಥಿಗಳ ನಡುವೆ ಸಂವಾದಗಳು ನಡೆಯುತ್ತಿದ್ದವು ಶಿಬಿರಾರ್ಥಿಗಳಲ್ಲಿ ಗಮನಿಸಿದ ದಿನದ ಋಣಾತ್ಮಕ ಅಂಶಗಳನ್ನು ಶಿಬಿರಾಧಿಕಾರಿಗಳು ಗುರುತಿಸಿ ಮುಂದೆ ಸರಿಪಡಿಸಿಕೊಳ್ಳುವಂತೆ ಸೂಚಿಸುತ್ತಿದ್ದರು
ನಂತರ ಶುಭರಾತ್ರಿ
ಶಿಬಿರದಲ್ಲಿ ಪ್ರಾಂಶುಪಾಲರುಗಳಾದ ಬಿ ಮರುಳಯ್ಯ, ಜಿ ಎಚ್ ಮಹದೇವಪ್ಪ, ಕೆ ಎನ್ ಸಂಶೀರ್, ಎಂ ರಾಜಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರು ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆಗಿರುವಂತಹ ಶ್ರೀ ಕೆ ಎಸ್ ಸಿದ್ದಲಿಂಗಪ್ಪನವರು, ಮಾರುತಿ ಪದವಿ ಪೂರ್ವ ಕಾಲೇಜಿನ ಎಸ್ ರವಿಕುಮಾರ್ ರವರು ಮುಂತಾದವರು ಭಾಗವಹಿಸಿದ್ದರು.