ಬಾದಾಮಿ: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ದಲ್ಲಿ ಆಮ್ ಆದ್ಮಿ ಪಕ್ಷ ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಲಾದಗಿ ಹಾಗೂ ಕಾರ್ಯಕರ್ತರಿಂದ ಮನೆ” ಮನೆಗೆ ಆಮ್ ಆದ್ಮಿ ನಡೆ” ಜನಸಂಪರ್ಕ ಕಾರ್ಯಕ್ರಮ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ಇಂದು ಆಮ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಾರಥ್ಯದ ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಲಾದಗಿ ಇಂದು ಕಾರ್ಯಕರ್ತರೊಂದಿಗೆ ಗುಳೇದಗುಡ್ಡ ನಗರದಲ್ಲಿ ಮನೆ ಮನೆಗೆ ತೆರಳಿ ಜನರಿಗೆ ಆಮ್ ಆದ್ಮಿ ಪಕ್ಷ ದ ಜನಪರ ಕೆಲಸಗಳ ಬಗ್ಗೆ ದೆಹಲಿಯ ಜನಪರ ಉತ್ತಮ ಆಡಳಿತದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತಾ ಅರವಿಂದ್ ಕೇಜ್ರಿವಾಲ್ ಅವರ ದೆಹಲಿಯಲ್ಲಿ ಇಡೀ ದೇಶವೇ ಮೆಚ್ಚಿದ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾದ ಬಗ್ಗೆ ಮತದಾರರಿಗೆ ನೀಡಿರುವ ಸವಿಸ್ತಾರವಾಗಿ ಮಾಹಿತಿ ನೀಡಿ ಪಕ್ಷದ ಸಂಘಟನೆ ಮಾಡಿದರು.
ರಾಜ್ಯದ ಜನ 3 ಪಕ್ಷಗಳ ಆಡಳಿತ ನೋಡಿ ಬೇಸತ್ತು ಹೋಗಿದ್ದಾರೆ ಈ ಸಲ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲು ಮಾನಸಿಕವಾಗಿ ಸಿದ್ದರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್ ಕಲಾದಗಿ ಹಾಗೂ ಪಕ್ಷ ದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ :-
ರಾಜೇಶ್.ಎಸ್.ದೇಸಾಯಿ ಬಾದಾಮಿ