ಗುಬ್ಬಿ : ನಿಟ್ಟೂರು ಗ್ರಾಮದಲ್ಲಿ ಸಡಗರ ಸಂಭ್ರಮದ ಆಯುಧ ಪೂಜೆ ಹಾಗೂ ಗ್ರಾಮದ ಎಲ್ಲಾ ದೇವರುಗಳ
ಉತ್ಸವ ವಿಧಿವತ್ತಾಗಿ ನಡೆಯಿತು.
ಗ್ರಾಮ ದೇವತೆ ಶ್ರೀ ಮರಿಯಮ್ಮದೇವಿ, ಶ್ರೀ ದುರ್ಗಮಮ್ಮದೇವಿ, ಶ್ರೀ ಮುಳಕಟ್ಟಮ್ಮದೇವಿ, ಶ್ರೀ ಉಂತೂರಮ್ಮದೇವಿ, ಶ್ರೀರಾಮ ದೇವರು,
ಶ್ರೀ ಶಿವಭಕ್ತ ಬೇಡರ ಕಣ್ಣಪ್ಪಸ್ವಾಮಿ, ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿ, ಶ್ರೀಮೈಲಾರಲಿಂಗೇಶ್ವರಸ್ವಾಮಿ ಸೇರಿದಂತೆ ಹಲವು ದೇವರುಗಳನ್ನು ಉತ್ಸವ ಅದ್ದೂರಿಯಾಗಿ ಜರುಗಿತು.
ಪ್ರಮುಖ ರಾಜಬೀದಿಗಳಲ್ಲಿ ಅನೇಕ ಕಲಾ ತಂಡದೊಂದಿಗೆ ಉತ್ಸವ ನಡೆದು ಸಂಜೆ ವೇಳೆಗೆ ಬನ್ನಿ ಮಂಟಪಕ್ಕೆ ಎಲ್ಲಾ ದೇವರುಗಳ ಪೂಜೆ ಜೊತೆ ಶಮಿ ಪೂಜೆ ನಡೆಸಲಾಯಿತು. ಬನ್ನಿ ಪತ್ರೆ ಪಡೆಯಲು ಭಕ್ತ ಸಮೂಹ ಆತುರದಲ್ಲಿ ಕಾದಿದ್ದರು.