ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ತುಮಕೂರು ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಬೆಂಗಳೂರು ವಿಭಾಗ ಮಟ್ಟದ ಬಹುಮಾನ ದೊರೆತಿದೆ…
ರಾಜ್ಯ ಮಟ್ಟದ ಮೂರು ಬಹುಮಾನಗಳು ವಿಭಾಗ ಮಟ್ಟದ ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ..
ವಿವಿಧ ಜಿಲ್ಲೆಗಳಿಂದಒಟ್ಟು 43 ವಿವಿಧ ಸ್ತಬ್ಧಚಿತ್ರಗಳು ಇಲಾಖೆಗಳಿಂದ ಒಟ್ಟು 6 ಸ್ತಬ್ಧಚಿತ್ರ ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು..
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳು ಚರ್ಚಿಸಿ ಈ ಬಾರಿ ನಿಟ್ಟೂರಿನ ಹೆಚ್ ಎ ಎಲ್ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಮತ್ತು ಪಾವಗಡದ ಸೋಲಾರ್ ಪಾರ್ಕ್ ವಿಷಯದ ಮೇಲೆ ಸ್ತಬ್ಧಚಿತ್ರ ನಿರ್ಮಿಸಲು ಕಲಾವಿದರಿಗೆ ಸೂಚಿಸಿದ್ದರು..
2014 ರಿಂದ ಸತತವಾಗಿ ನಾಲ್ಕು ಬಾರಿ ಜಿಲ್ಲೆಗೆ ಪ್ರಶಸ್ತಿ ಬಂದಿರೋದು ವಿಶೇಷ..
ತಿಪಟೂರು ಕೃಷ್ಣ ನೇತೃತ್ವದಲ್ಲಿ ಮಲ್ಲಿಕಾರ್ಜುನ್ ಮತಿಘಟ್ಟ, ಶ್ರೀಗಂಧ ಶ್ರೀನಿವಾಸ್, ಶಿಲ್ಪಾ ಆರ್ಟ್ಸ್ ಜೀತೇಂದ್ರ, ಯೋಗೀಶ್ ಕುಮಾರ್ ಸೇರಿದಂತೆ ಕಲಾಕೃತಿಯ ಸುಮಾರು 15ಕ್ಕೂ ಹೆಚ್ಚು ಜನ ಕಲಾವಿದರು ಸತತ 20 ದಿನಗಳ ಕಾಲ ಈ ಸ್ತಬ್ಧಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು..
ಮೆರವಣಿಗೆಯಲ್ಲಿ ಅಪಾರ ಜನರ ಮನಸೂರೆಗೊಂಡು ಬಹಳ ಮೆಚ್ಚಿಗೆಗೆ ಪಾತ್ರವಾಗಿದ್ದ ಸ್ತಬ್ಧಚಿತ್ರ ಇದಾಗಿತ್ತು..