ಬಾದಾಮಿ: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ದಾಲ್ಲಿ ಆಮ್ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮ ದ ಬ್ಯಾನರ್ ಅನ್ನು ಹೊತ್ತೊಯ್ದ ಕಿಡಿಗೇಡಿಗಳು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಲಾದಗಿ ಗಂಭೀರ ಆರೋಪ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಲಾದಗಿ ಅವರ ಸಾರಥ್ಯದಲ್ಲಿ ಗ್ರಾಮ ಸಂಪರ್ಕ ಕಾರ್ಯಕ್ರಮ ಪ್ರಾರಂಭ ಗೊಂಡಿದ್ದು, ಗುಳೇದಗುಡ್ಡ ನಗರದ ಹಾದಿ ಬಸವೇಶ್ವರ ದೇವಸ್ಥಾನದ ಹತ್ತಿರದಲ್ಲಿ ಆಮ್ ಆದ್ಮಿ ಪಕ್ಷದ ಬ್ಯಾನರ್ ಬಂಟಿಂಗ್ಸ್ ನ್ನು ಹಾಕಲಾಗಿತ್ತು.ಇದೇ ದಿನಾಂಕ 06 ನೆ ತಾರೀಖಿ ನಂದು ಹಾಕಲಾಗಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಬ್ಯಾನರ್ ಅನ್ನು ಹೊತ್ತೊಯ್ದಿದ್ದಾರೆ. ದಿನದಿಂದ ದಿನಕ್ಕೆ ಇಡೀ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಜನ ಬೆಂಬಲಿಸಿ ಪಕ್ಷ ಸೇರ್ಪಡೆ ಯಾಗುತ್ತಿರುವುದನ್ನು ಸಹಿಸದ ಕಿಡಿಗೇಡಿಗಳು ಈ ರೀತಿ ಕೃತ್ಯ ಎಸಗಿದ್ದಾರೆ ಇದನ್ನು ನಾವು ಸಹಿಸುವುದಿಲ್ಲ ಬರುವ ಚುನಾವಣೆಯಲ್ಲಿ ಜನರು ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಆರಿಸಿ ತರುವ ಮುಖಾಂತರ ತಕ್ಕ ಉತ್ತರ ನೀಡಲಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಆಮ್ ಆದ್ಮಿ ಪಕ್ಷದ ಅಲ್ಪ ಸಂಖ್ಯಾತರ ಮುಖಂಡರಾದ ಜಹಾಂಗೀರ್ ಕಮಾನಗಾರ ಅವರು ಮಾತನಾಡಿ ಕಿಡಿಗೇಡಿಗಳು ನಡೆಸಿದ ಈ ಕೃತ್ಯಕ್ಕೆ ತೀವ್ರ ಖಂಡಿಸಿದ್ದು ಇದಕ್ಕೆ ಸಂಭಂದಿಸಿದ ವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಬ್ಯಾನರ್ ಕಿತ್ತೊಯ್ದ ಜಾಗದಲ್ಲೇ ನಿಂತುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ದ ಕಾರ್ಯಕರ್ತರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ