ವೀರ ಪುಲಿಕೇಶಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಮುಂದುವರಿದ ರೈತ ಸಂಘದ ಧರಣಿ

ಬಾದಾಮಿಯಲ್ಲಿ ಶ್ರೀ ವೀರ ಪುಲಿಕೇಶಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಮುಂದುವರಿದ ರೈತ ಸಂಘದ ಧರಣಿ ಸತ್ಯಾಗ್ರಹ, ಹೋರಾಟಕ್ಕೆ ರೈತ ಹೋರಾಟಗಾರರು ಹಾಗೂ ಸಮಾಜ ಸೇವಕರಾದ ಭುವನೇಶ್ವರಿ ಅಕ್ಕಮಹಾದೇವಿ ಹೆಚ್.ಎಂ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಶ್ರೀ ವೀರಪು ಲಿಕೇಶಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ವಿರುದ್ಧ ರೈತ ಸಂಘದ ಪ್ರತಿಭಟನೆ ಬ್ಯಾಂಕ್ ಆವರಣದಲ್ಲೇ ಧರಣಿ ಸತ್ಯಾಗ್ರಹ ಹೂಡಿದ್ದಾರೆ. ಹೋರಾಟಕ್ಕೆ 4 ನೆ ಬಾರಿ ಬಾದಾಮಿಗೆ ಆಗಮಿಸಿದ ಶಿವಮೊಗ್ಗದ ರೈತ ಹೋರಾಟಗಾರರು ಹಾಗೂ ಸಮಾಜ ಸೇವಕರಾದ ಭುವನೇಶ್ವರಿ ಅಕ್ಕಮಹಾದೇವಿ ಹೆಚ್.ಎಂ. ಇದೇ ಸಂದರ್ಭದಲ್ಲಿ ನ್ಯೂಸ್ ಅಲರ್ಟ್ ನೊಂಡಿಗೆ ಮಾತನಾಡಿ ರೈತರ ಬಿಟ್ಟುಬಿ ಡ ದ ಈ ಅಹೋರಾತ್ರಿ ಧರಣಿಯನ್ನು ಇಲ್ಲಿಯವರೆಗೂ ಬ್ಯಾಂಕ್ ಆಡಳಿತ ವರ್ಗದ ವರಾಗ ಲೀ ಜನಪ್ರತಿನಿಧಿಗಳಾಗಲಿ ಯಾರೂ ಕೂಡ ರೈತರ ಕಷ್ಟಗಳಿಗೆ ಬಂದು ಸ್ಪಂದಿಸದೇ ಇರುವುದು ತುಂಬಾ ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಮುಂದೆ ಇದು ಬರೀ ಹೋರಾಟಕ್ಕೆ ಅಷ್ಟೇ ಸೀಮಿತವಾಗದೇ ಚುನಾವಣೆಗೂ ಕೂಡ ನಾವು ಸ್ಪರ್ಧೆ ಮಾಡಲು ಸಿದ್ಧರಾಗಿದ್ದೇವೆ. ರೈತರ ಸಂಕಷ್ಟಗಳಿಗೆ ಸಂವಿಧಾನಾತ್ಮಕವಾಗಿ ಪರಿಹರಿಸುವ ಹಾಗೆ ನಾವು ಕೂಡ ಮುಂಚೂಣಿಗೆ ಬರುವುದಕ್ಕೆ ಸಿದ್ದರಾಗುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಇದೇ ಸಂದರ್ಭದಲ್ಲಿ ಧರಣಿನಿರತ ರೈತರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!